ಆಫ್ರಿಕಾಕ್ಕೆ ಆಂಗ್ಲರ ಶಾಕ್, ಆಸೀಸ್ ಕಿವಿ ಹಿಂಡಿದ ಕಿವೀಸ್

Subscribe to Oneindia Kannada

ಮುಂಬೈ/ ಧರ್ಮಶಾಲಾ, ಮಾರ್ಚ್.19: ವಿಶ್ವ ಟಿ-20ಯಲ್ಲಿ ರನ್ ಹೊಳೆ. ಆಂಗ್ಲರ ದಾಖಲೆಯ ಚೇಸಿಂಗ್ ಗೆ ತಲೆಬಾಗಿದ ದಕ್ಷಿಣ ಆಫ್ರಿಕಾದ ಆಟಗಾರರು. ಸಾಂಘಿಕ ಹೋರಾಟ ಪ್ರದರ್ಶಿಸಿದ ಇಂಗ್ಲೆಂಡ್ 2 ವಿಕೆಟ್ ಗಳ ರೋಚಕ ಜಯ ದಾಖಲಿಸಿತು.

ಮಧ್ಯಾಹ್ನ ನಡೆದ ಮೊದಲ ಪಂದ್ಯದಲ್ಲಿ ಬಲಿಷ್ಠ ಆಸ್ಟ್ರೇಲಿಯಾಕ್ಕೆ ನ್ಯೂಜಿಲೆಂಡ್ ಆಘಾತ ನೀಡಿತು. ಭಾರತದ ವಿರುದ್ಧ ಗೆದ್ದು ಬೀಗಿದ್ದ ಕೀವಿಸ್ ಪಡೆ ಉಪಾಂತ್ಯದ ಹಾದಿಯನ್ನು ಸುಗಮ ಮಾಡಿಕೊಂಡಿತು.[ಭಾರತ vs ಪಾಕಿಸ್ತಾನ ಮ್ಯಾಚಿಗೂ ಮುನ್ನ ಸೂಪರ್ 10 ಅಂಶಗಳು]

ವಿಶ್ವ ಟಿ20: ತಂಡಗಳು | ವೇಳಾಪಟ್ಟಿ | ಗ್ಯಾಲರಿ

ಇಂದು ಕೋಲ್ಕತಾದಲ್ಲಿ ಭಾರತ ಮತ್ತು ಪಾಕಿಸ್ತಾನ ಮುಖಾಮುಖಿಯಾಗಲಿದ್ದು ಭಾರತಕ್ಕೆ ಗೆಲ್ಲಲೇಬೇಕಾದ ಒತ್ತಡ ಎದುರಾಗಿದೆ. ಪಂದ್ಯಕ್ಕೆ ವರುಣ ಕಾಟ ಕೊಟ್ಟರೂ ಕೊಡಬಹುದು ಎಂದು ಹವಾಮಾನ ಇಲಾಖೆ ತಿಳಿಸಿದೆ.[ಇಟಿಐ ಚಿತ್ರಗಳು)

ಭರ್ಜರಿ ಬ್ಯಾಟಿಂಗ್

ಭರ್ಜರಿ ಬ್ಯಾಟಿಂಗ್

ಟಾಸ್ ಗೆದ್ದು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡ ಇಂಗ್ಲೆಂಡ್ ಗೆ ದಕ್ಷಿಣ ಆಫ್ರಿಕಾದ ದೈತ್ಯ ಬ್ಯಾಟಿಂಗ್ ಲೈನ್ ಅಪ್ ಶಾಕ್ ನೀಡಿತ್ತು. ಮೊದಲ ವಿಕೆಟ್ ಗೇ ಹಶೀಮ್ ಆಮ್ಲಾ (58ರನ್) ಮತ್ತು ಡಿಕಾಕ್ (52) 96 ರನ್ ಗಳ ಭರ್ಜರಿ ಜೊತೆಯಾಟ ನೀಡಿ ತಂಡದ ಮೊತ್ತ ಏರಿಕೆ ಮಾಡಿ ನಿರ್ಗಮಿಸಿದರು.

 ಎಬಿಡಿ ವಿಫಲ

ಎಬಿಡಿ ವಿಫಲ

ಎ ಬಿ ಡಿವಿಲಿಯರ್ಸ್ ಮತ್ತು ಡುಪ್ಲೆಸಿಸ್ ರಕ್ಷಣಾತ್ಮಕ ಹೆಚ್ಚಿನ ರನ್ ಗಳಿಸದೆ ಫೆವಿಲಿಯನ್ ಸೇರಿಕೊಂಡರು. ಇದೇ ವೇಳೆ ಆಮ್ಲಾ ಸಹ ವಿಕೆಟ್ ಒಪ್ಪಿಸಿದರು.

ಆಫ್ರಿಕಾ 229

ಆಫ್ರಿಕಾ 229

28 ಎಸೆತಗಳಲ್ಲಿ 54 ರನ್ ಗಳಿಸಿ ಅಜೇಯರಾಗಿ ಉಳಿದ ಡುಮಿನಿ ದಕ್ಷಿಣ ಆಫ್ರಿಕಾವನ್ನು 229 ರನ್ ಗೆ ತಂದು ನಿಲ್ಲಿಸಿದರು. ಅಂತಿಮವಾಗಿ ದಕ್ಷಿಣ ಆಫ್ರಿಕಾ ತಂಡ ನಿಗದಿತ 20 ಓವರ್ ಗಳಲ್ಲಿ 4 ವಿಕೆಟ್ ನಷ್ಟಕ್ಕೆ 229 ರನ್ ಗಳ ಬೃಹತ್ ಮೊತ್ತವನ್ನು ಪೇರಿಸಿತು.

 ಇಂಗ್ಲೆಂಡ್ ಭರ್ಜರಿ ಆರಂಭ

ಇಂಗ್ಲೆಂಡ್ ಭರ್ಜರಿ ಆರಂಭ

ವೆಸ್ಟ್ ಇಂಡೀಸ್ ವಿರುದ್ಧ ಸೋತಿದ್ದ ಇಂಗ್ಲೆಂಡ್ ಗೆ ಸಿಕ್ಕಿದ್ದು ಭರ್ಜರಿ ಆರಂಭ. ಜೆಜೆ ರಾಯ್ ಸಿಕ್ಸರ್ ಮತ್ತು ಬೌಂಡರಿಗಳ ಸುರಿಮಳೆ ಗೈದು ಕೇವಲ 16 ಎಸೆತಗಳಲ್ಲಿ 41 ರನ್ ಗಳಿಸಿ ಔಟಾದರು. ಸ್ಟೇನ್ ಎರಡನೇ ಓವರ್ ನಲ್ಲಿ 23 ರನ್ ಚಚ್ಚಿಸಿಕೊಂಡರು.

ರೂಟ್ ಜಯದ ಆಟ

ರೂಟ್ ಜಯದ ಆಟ

ದಕ್ಷಿಣ ಆಫ್ರಿಕಾ ಬೌಲರ್ ಗಳನ್ನು ಬೆಂಡೆತ್ತಿದ ಜೆಎ ರೂಟ್ 44 ಎಸೆತಗಳನ್ನು ಎದುರಿಸಿದ ರೂಟ್ 83 ರನ್ ಸಿಡಿಸಿದರು. ಅಂತಿಮವಾಗಿ ವಿಕೆ೧ಟ್ ಒಪ್ಪಿಸಿದರೂ ಸಹ ಇಂಗ್ಲೆಂಡ್ ನ್ನು ಜಯದ ದಡ ಸೇರಿಸಿದ್ದರು.

 ಕೊನೆಯ ಓವರ್ ಕುತೂಹಲ

ಕೊನೆಯ ಓವರ್ ಕುತೂಹಲ

ಇನ್ನೇನು ಇಂಗ್ಲೆಂಡ್ ಗೆದ್ದೇ ಬಿಟ್ಟಿತು ಎನ್ನುವ ಹಂತದಲ್ಲಿ ಕೊನೆ ಓವರ್ ನಲ್ಲಿ ಸತತ 2 ವಿಕೆಟ್ ನೀಡಿದ ಆಫ್ರಿಕಾಕ್ಕೆ ಗೆಲ್ಲಲು ಬೇಕಿದ್ದದ್ದು ಒಂದೇ ರನ್. ಆದರೆ ಅಬಾಟ್ ಎಸೆದ ಎಸೆತವನ್ನು ಲಾಂಗ್ ಆಫ್ ನತ್ತ ಬಾರಿಸಿದ ಅಲಿ 1 ರನ್ ಕದಿಯುವ ಮೂಲಕ ಜಯದ ಮಾಲೆ ತೊಡಿಸಿದರು.

 ದಾಖಲೆಯ ಚೇಸಿಂಗ್

ದಾಖಲೆಯ ಚೇಸಿಂಗ್

ಟಿ20 ವಿಶ್ವಕಪ್ ಇತಿಹಾಸದ ದಾಖಲೆಯ ಚೇಸಿಂಗ್ ಮೂಲಕ ಇಂಗ್ಲೆಂಡ್ ತಂಡ ದಕ್ಷಿಣ ಆಫ್ರಿಕಾ ತಂಡದ ವಿರುದ್ಧ 2 ವಿಕೆಟ್‌ಗಳಿಂದ ರೋಚಕ ಗೆಲುವು ದಾಖಲಿಸಿತು. 83 ರನ್ ಗಳಿಸಿ ಇಂಗ್ಲೆಂಡ್ ಗೆಲುವಿನಲ್ಲಿ ಮಹತ್ವ ಪಾತ್ರ ವಹಿಸಿದ ಜೆ ರೂಟ್ ಹೀರೋ ಆಗಿ ಹೊರಹೊಮ್ಮಿದರು.

 ಆಸೀಸ್ ಗೆ ಮುಖಭಂಗ

ಆಸೀಸ್ ಗೆ ಮುಖಭಂಗ

ಭಾರತವನ್ನು ಸೋಲಿಸಿ ಬೀಗುತ್ತಿದ್ದ ಕಿವೀಸ್ ಪಡೆ ಆಸ್ಟ್ರೇಲಿಯಾಕ್ಕೆ ಆಘಾತ ನೀಡಿದೆ. ಎಂಟು ರನ್ ಗಳ ವಿಜಯ ದಾಖಲಿಸಿದ್ದು ಉಪಾಂತ್ಯದ ಹಾದಿಯನ್ನು ಸುಗಮ ಮಾಡಿಕೊಂಡಿದೆ.

 ಸಾಧಾರಣ ಮೊತ್ತ

ಸಾಧಾರಣ ಮೊತ್ತ

ಮೊದಲು ಬ್ಯಾಟಿಂಗ್ ಮಾಡಿದ ನ್ಯೂಜಿಲೆಂಡ್ 8 ವಿಕೆಟ್‌ಗೆ 142 ರನ್ ದಾಖಲಿಸಿತು. ಕಿವೀಸ್ ಪರ ಗಪ್ಟಿಲ್ -39 ರನ್ , ಕೇನ್ ವಿಲಿಯಮ್ಸನ್ 24 ರನ್, ಮುನ್ರೋ 23 ರನ್ ಮತ್ತು ಎಲಿಯಟ್ 27 ರನ್ ಗಳಿಸಿದರು.

ಪಂದ್ಯ ಕೈಚೆಲ್ಲಿದ ಆಸ್ಟ್ರೇಲಿಯಾ

ಪಂದ್ಯ ಕೈಚೆಲ್ಲಿದ ಆಸ್ಟ್ರೇಲಿಯಾ

ಮೊದಲು ಪಂದ್ಯ ಆಸೀಸ್ ಕೈಯಲ್ಲೇ ಇದ್ದರೂ ವೇಗಿ ಮಿಚೆಲ್ ಮೆಕ್ಲೀನಘನ್(17ಕ್ಕೆ 3) ದಾಳಿಗೆ ಸಿಕ್ಕು ಅಂತಿಮವಾಗಿ 134 ರನ್ ಗಳಿಸಿ ಸೋಲೊಪ್ಪಿಕೊಂಡಿತು. ಡೇವಿಡ್ ವಾರ್ನರ್ ಬದಲು ಉಸ್ಮಾನ್ ಖವಾಜ(38) ಮತ್ತು ಶೇನ್ ವ್ಯಾಟ್ಸನ್‌ರನ್ನು (13) ಆರಂಭಿಕ ಜೋಡಿಯಾಗಿ ಕಣಕ್ಕಿಳಿಸಿದ ಆಸೀಸ್ ಪ್ರಯೋಗ ಫಲ ಕೊಡಲಿಲ್ಲ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Star batsman Joe Root smashed a match-winning 83 as a spirited England side chased down South Africa's massive total of 229 to win a nail-biting contest by two wickets in the Group 1 clash in the World Twenty20 cricket tournament at the Wankhede Stadium on Friday.
Please Wait while comments are loading...