'ಕ್ಯಾಪ್ಟನ್ ಕೂಲ್' ಧೋನಿಗೆ ಸಿಟ್ಟು ಬಂದಿದ್ದು ಏಕೆ?

Posted By:
Subscribe to Oneindia Kannada

ಬೆಂಗಳೂರು, ಮಾರ್ಚ್ 24: 'ಕ್ಯಾಪ್ಟನ್ ಕೂಲ್' ಮಹೇಂದ್ರ ಸಿಂಗ್ ಧೋನಿ ಅವರಿಗೂ ಸಿಟ್ಟು ಬರುತ್ತದೆಯೇ? ಎಂಬ ಪ್ರಶ್ನೆಗೆ ಕಳೆದ ರಾತ್ರಿ ಉತ್ತರ ಸಿಕ್ಕಿದೆ. ಬಾಂಗ್ಲಾದೇಶ ವಿರುದ್ಧ 1 ರನ್ ಗಳ ರೋಚಕ ಜಯ ದಾಖಲಿಸಿದ ಮೇಲೆ ನಡೆದ ಸುದ್ದಿಗೋಷ್ಠಿಯಲ್ಲಿ ಧೋನಿ ಅವರು ಕೋಪಗೊಂಡಿದ್ದರು.

ವಿಶ್ವ ಟಿ20: ತಂಡಗಳು | ವೇಳಾಪಟ್ಟಿ | ಗ್ಯಾಲರಿ |ಟೂರ್ನಿಗೆ ಫುಲ್ ಗೈಡ್

ವಿಶ್ವ ಟಿ20 ಸೂಪರ್ 10 ಹಂತದ ಮಹತ್ವದ ಪಂದ್ಯದಲ್ಲಿ ಬುಧವಾರ(ಮಾರ್ಚ್ 23) ಎಂ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಬಾಂಗ್ಲಾದೇಶವನ್ನು ರೋಚಕವಾಗಿ ಟೀಂ ಇಂಡಿಯಾ ಮಣಿಸಿತು. ಆದರೆ, ಪಂದ್ಯ ನಂತರ ನಡೆದ ಸುದ್ದಿಗೋಷ್ಠಿಯಲ್ಲಿ ಪ್ರಶ್ನೆಗಳನ್ನು ಎದುರಿಸುತ್ತಿದ್ದ ಧೋನಿಗೆ ಬೌನ್ಸರ್ ಎದುರಾಯಿತು. ಸಿಟ್ಟಿಗೆದ್ದ ಧೋನಿ, [ಭಾರತಕ್ಕೆ ರೋಚಕ ಜಯ]

MS Dhoni

' 1 ನಿಮಿಷ ತಾಳಿ, ನಿಮಗೆ(ಪತ್ರಕರ್ತರೊಬ್ಬರಿಗೆ) ಭಾರತ ಗೆದ್ದಿದ್ದು ಖುಷಿ ಕೊಟ್ಟಿಲ್ಲ ಎಂದೆನಿಸುತ್ತದೆ. ಮೊದಲು ನನ್ನ ಮಾತು ಕೇಳಿ, ನಿಮ್ಮ ದನಿ, ನೀವು ಕೇಳುತ್ತಿರುವ ಪ್ರಶ್ನೆಯಿಂದ ನಿಮಗೆ ತಂಡದ ಗೆಲುವಿನಿಂದ ಸಂತೋಷವಾಗಿಲ್ಲದಿರಬಹುದು. ಕ್ರಿಕೆಟ್ ವಿಷಯಕ್ಕೆ ಬಂದರೆ ಯಾವುದೇ ಸ್ಕ್ರಿಪ್ಟ್ ಇರಲ್ಲ. ನಿಮಗೆ ಗೆಲುವಿನ ವಿಷಯಕ್ಕಿಂತ ನೆಟ್ ರನ್ ರೇಟ್, ಅಂಕಿ ಅಂಶವೇ ಮುಖ್ಯವಾಗಿದ್ದರೆ ನಾನು ಉತ್ತರಿಸಲು ತಯಾರಿಲ್ಲ' ಎಂದಿದ್ದಾರೆ.

ಪಂದ್ಯದ ಆರಂಭಕ್ಕೂ ಮುನ್ನ ಭಾರತದ ನೆಟ್ ರನ್ ರೇಟ್ ಬಗ್ಗೆ ವಿಶ್ಲೇಷಕರು ಲೆಕ್ಕಾಚಾರ ಹಾಕಿ ಅಂಕಿ ಅಂಶ ಪ್ರಕಟಿಸಿದ್ದರು. ನ್ಯೂಜಿಲೆಂಡ್ ವಿರುದ್ಧ 47ರನ್ ಗಳಿಂದ ಭಾರತ ಸೋಲು ಕಂಡಿದ್ದು ರನ್ ನೇಟ್ ಕುಸಿಯುವಂತೆ ಮಾಡಿದೆ. ಮಾರ್ಚ್ 27ರಂದು ಆಸ್ಟ್ರೇಲಿಯಾ ವಿರುದ್ಧ ಕೊನೆಯ ಲೀಗ್ ಪಂದ್ಯವನ್ನು ಆಡಲಿದೆ. ಭಾರತ ಸೂಪರ್ 10 ಹಂತದಲ್ಲಿ 2 ಗೆದ್ದು, 1 ಸೋಲು ಕಂಡಿದೆ. (ಒನ್ ಇಂಡಿಯಾ ಸುದ್ದಿ)

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
After a nerve-wracking 1-run victory over Bangladesh at ICC World Twenty20, India's "Captain Cool" Mahendra Singh Dhoni hit back at a journalist for asking about the net run rate than the thrilling triumph.
Please Wait while comments are loading...