'ಸಚಿನ್ ನಿವೃತ್ತಿಯಾಗಿರದಿದ್ದರೆ, ಟೀಂ ನಿಂದ ಕಿತ್ತು ಹಾಕ್ತಾ ಇದ್ವಿ!'

Posted By:
Subscribe to Oneindia Kannada

ಬೆಂಗಳೂರು, ಸೆ. 22: ಭಾರತೀಯ ಕ್ರಿಕೆಟ್ ತಂಡದ ಆಯ್ಕೆ ಸಮಿತಿಯ ಮಾಜಿ ಮುಖ್ಯಸ್ಥ ಸಂದೀಪ್ ಪಾಟೀಲ್ ಅವರು ಸಚಿನ್ ಫ್ಯಾನ್ಸಿಗೆ ಆಘಾತಕಾರಿ ಸುದ್ದಿ ಕೊಟ್ಟಿದ್ದಾರೆ. 2012ರಲ್ಲಿ ಕ್ರಿಕೆಟ್ ದಿಗ್ಗಜ ಸಚಿನ್ ಅವರನ್ನು ಏಕದಿನ ಅಂತಾರಾಷ್ಟ್ರೀಯ ಕ್ರಿಕೆಟ್ ನಿಂದ ಬಲವಂತವಾಗಿ ನಿವೃತ್ತರಾಗುವಂತೆ ಮಾಡಲಾಯಿತು ಎಂದಿದ್ದಾರೆ.

ಒಂದು ವೇಳೆ 2012ರ ಕೊನೆಯಲ್ಲಿ ಸಚಿನ್ ತೆಂಡುಲ್ಕರ್ ಅವರು ಏಕದಿನ ಕ್ರಿಕೆಟ್‌ನಿಂದ ನಿವೃತ್ತಿಯಾಗದಿದ್ದರೆ ಅವರನ್ನು ಭಾರತ ತಂಡದಿಂದ ಕೈಬಿಡಲಾಗುತ್ತಿತ್ತು ಎಂದು ಆಗ ಆಯ್ಕೆ ಸಮಿತಿಯ ಅಧ್ಯಕ್ಷರಾಗಿದ್ದ ಸಂದೀಪ್ ಪಾಟೀಲ್ ಹೇಳಿದ್ದಾರೆ. ಇದೇ ರೀತಿ ಎಂಎಸ್ ಧೋನಿಯನ್ನು ನಾಯಕತ್ವದಿಂದ ಕೆಳಗಿಳಿಸುವ ಬಗ್ಗೆ ಚಿಂತನೆ ನಡೆದಿತ್ತು ಎಂದು ಸಂದೀಪ್ ಹೇಳಿದ್ದನ್ನು ಇಲ್ಲಿ ಸ್ಮರಿಸಬಹುದು.

If Sachin Tendulkar had not retired from ODIs, would have dropped him: Sandeep Patil

ಸಚಿನ್ ಅವರು ಡಿಸೆಂಬರ್ 23, 2013ರಲ್ಲಿ ಏಕದಿನ ಕ್ರಿಕೆಟ್ ಗೆ ನಿವೃತ್ತಿ ಘೋಷಿಸಿದರು. ಆದರೆ, ಟೆಸ್ಟ್ ಕ್ರಿಕೆಟ್ ನಲ್ಲಿ ಆಡುತ್ತಿದ್ದರು. ಡಿಸೆಂಬರ್ 12ರಂದು ಸಚಿನ್ ಅವರ ಬಳಿ ಹೋಗಿ ಅವರ ಭವಿಷ್ಯದ ನಿರ್ಧಾರದ ಬಗ್ಗೆ ಪ್ರಶ್ನಿಸಲಾಯಿತು. ಅವರು ನಿವೃತ್ತಿ ಯೋಚನೆ ಇಲ್ಲ ಎಂದಿದ್ದರು. ರ ಡಿಸೆಂಬರ್ 12ರಂದು ನಾಗ್ಪುರದಲ್ಲಿ ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಪಂದ್ಯದ ವೇಳೆ ನಾನು ಸಚಿನ್ ಅವರನ್ನು ಭೇಟಿಯಾದ ಬಳಿಕ, ಆಯ್ಕೆ ಸಮಿತಿ ಅವರನ್ನು ಮುಂದಿನ ದಿನಗಳಲ್ಲಿ ಆಯ್ಕೆ ಮಾಡದಿರಲು ನಿರ್ಧರಿಸಿತ್ತು. ಈ ಬಗ್ಗೆ ಬಿಸಿಸಿಐ ಮಾಹಿತಿ ನೀಡಲಾಯಿತು.[ಸಚಿನ್ ತೆಂಡೂಲ್ಕರ್ ನಿವೃತ್ತಿ ಘೋಷಣೆ]

ಬಹುಶಃ ಈ ಬಗ್ಗೆ ಮಾಹಿತಿ ಪಡೆದುಕೊಂಡ ಸಚಿನ್ ಅವರು ಏಕದಿನ ಕ್ರಿಕೆಟ್‌ನಿಂದ ನಿವೃತ್ತಿಯಾಗುತ್ತಿರುವುದನ್ನು ತಿಳಿಸಿದ್ದರು. ಆಗ ಅವರು ನಿವೃತ್ತಿಯಾಗದಿರುತ್ತಿದ್ದರೆ ಖಂಡಿತವಾಗಿಯೂ ನಾವು ಅವರನ್ನು ತಂಡದಿಂದ ಕೈಬಿಡುತ್ತಿದ್ದೆವು' ಎಂದು ಪಾಟೀಲ್ ವಿವರಿಸಿದ್ದಾರೆ. 2012ರ ಡಿಸೆಂಬರ್ 23ರಂದು ಸಚಿನ್ 39ನೇ ವಯಸ್ಸಿನಲ್ಲಿ ಏಕದಿನ ಕ್ರಿಕೆಟ್‌ಗೆ ನಿವೃತ್ತಿ ಪ್ರಕಟಿಸಿದ್ದರು. ನಂತರ ಟೆಸ್ಟ್‌ನಲ್ಲಿ ಮಾತ್ರ ಮುಂದುವರಿದಿದ್ದ ಅವರು 2013ರ ನವೆಂಬರ್‌ನಲ್ಲಿ 24ವರ್ಷಗಳ ಅಂತಾರಾಷ್ಟ್ರೀಯ ಕ್ರಿಕೆಟ್ ಬದುಕಿಗೆ ವಿದಾಯ ಹೇಳಿದ್ದರು.

463 ಏಕದಿನ ಪಂದ್ಯಗಳನ್ನಾಡಿ 49 ಶತಕ, 96 ಅರ್ಧಶತಕ ಬಾರಿಸಿದ್ದಾರೆ. 18,426 ರನ್ ಗಳಿಸಿದ್ದಾರೆ. 1989ರಲ್ಲಿ ಪಾಕಿಸ್ತಾನ ವಿರುದ್ಧ ಮೊದಲ ಪಂದ್ಯವಾಡಿದ್ದ ಸಚಿನ್ ತಮ್ಮ ಕೊನೆ ಪಂದ್ಯವನ್ನು ಪಾಕಿಸ್ತಾನ ವಿರುದ್ಧ ಮಾರ್ಚ್ 18, 2012ರಲ್ಲಿ ಆಡಿದ್ದು ವಿಶೇಷ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Sachin Tendulkar was forced to retire from One Day Internationals in 2012, if the former chairman of selectors Sandeep Patil is to be believed.
Please Wait while comments are loading...