ಅಮಿತಾಬ್ ಅವರು ಕ್ರಿಸ್ ಗೇಲ್ ಬಳಿ ಕ್ಷಮೆಯಾಚಿಸಿದ್ದೇಕೆ?

Posted By:
Subscribe to Oneindia Kannada

ಮುಂಬೈ, ಮಾರ್ಚ್ 18: ವೆಸ್ಟ್ ಇಂಡೀಸ್​ನ ಸ್ಫೋಟಕ ಬ್ಯಾಟ್ಸ್ ಮನ್ ಕ್ರಿಸ್ ಗೇಲ್ ಅವರು ಬಾಲಿವುಡ್ ನ ಮೆಗಾ ಸ್ಟಾರ್ ಬಿಗ್ ಬಿ ಅಮಿತಾಬ್ ಅವರಿಗೆ ಅಚ್ಚರಿಯ ಉಡುಗೊರೆ ನೀಡಿರುವ ವಿಷಯ ನಿಮಗೆಲ್ಲ ತಿಳಿದರಬಹುದು. ಈ ವಿಶೇಷ ಗಿಫ್ಟ್ ಪಡೆದ ಬಿಗ್ ಬಿ ಅವರು ಗೇಲ್ ರನ್ನು ಹಾಡಿ ಹೊಗಳಿದ್ದರು. ಆದರೆ, ಈಗ ಕ್ರಿಸ್ ಗೇಲ್ ಬಳಿ ಬಿಗ್ ಬಿ ಕ್ಷಮೆಯಾಚಿಸಿದ್ದಾರೆ. ಏಕೆ? ಮುಂದೆ ಓದಿ...

ವಿಶ್ವ ಟಿ20: ತಂಡಗಳು | ವೇಳಾಪಟ್ಟಿ | ಗ್ಯಾಲರಿ |ಟೂರ್ನಿಗೆ ಫುಲ್ ಗೈಡ್

ಅಮಿತಾಬ್ ಅವರು ಗೇಲ್ ಅವರು ರಾಯಭಾರಿಯಾಗಿರುವ ಸ್ಪಾರ್ಟನ್ ಸಂಸ್ಥೆಯ ಪ್ರತಿನಿಧಿ ಜೊತೆ ಬ್ಯಾಟೊಂದನ್ನು ಹಿಡಿದುಕೊಂಡು ನಿಂತಿರುವ ಚಿತ್ರ ಮೈಕ್ರೋ ಬ್ಲಾಗಿಂಗ್ ತಾಣ ಟ್ವಿಟ್ಟರ್ ನಲ್ಲಿ ಪ್ರಕಟಗೊಂಡಿತ್ತು.[ಬಿಗ್ ಬಿ ಅಮಿತಾಬ್ ಗೆ ಅಚ್ಚರಿಯ 'ಗಿಫ್ಟ್' ಕೊಟ್ಟ ಗೇಲ್]

ಅದು ಅಂತಿಂಥ ಬ್ಯಾಟ್ ಅಲ್ಲ. ಚಿನ್ನ ಲೇಪಿತ ಬ್ಯಾಟ್. ಸ್ಪಾರ್ಟನ್ ಕಂಪನಿಯ ಈ ಬ್ಯಾಟ್​ನಲ್ಲಿ ಗೇಲ್​ರ ಹಸ್ತಾಕ್ಷರವೂ ಇತ್ತು. ಈ ಗಿಫ್ಟ್ ಪಡೆದ ಮೇಲೆ ಗೇಲ್ ಅವರಿಗೆ ಬಿಗ್ ಬಿ ಭರವಸೆಯೊಂದನ್ನು ನೀಡಿದ್ದರು. ಆದರೆ, ಆ ಭರವಸೆ ಈಡೇರಿಸಲು ಆಗದ ಕಾರಣ, ಬಿಗ್ ಬಿ ಅವರು ಗೇಲ್ ಬಳಿ ಕ್ಷಮೆಯಾಚಿಸಿದ್ದಾರೆ.[ಬಿಗ್ ಬಿ ಅಮಿತಾಬ್ ಗೆ ಅಚ್ಚರಿಯ 'ಗಿಫ್ಟ್' ಕೊಟ್ಟ ಗೇಲ್]

ಇಬ್ಬರು ಭೇಟಿಯಾಗುವ ನಿರೀಕ್ಷೆ ಹುಸಿಯಾಯಿತು

ಇಬ್ಬರು ಭೇಟಿಯಾಗುವ ನಿರೀಕ್ಷೆ ಹುಸಿಯಾಯಿತು

ಭಾರತದಲ್ಲಿ ನಡೆಯುತ್ತಿರುವವಿಶ್ವ ಟಿ20 ಟೂರ್ನಿ ವೇಳೆ ಈ ಇಬ್ಬರು ದಿಗ್ಗಜರು ಭೇಟಿಯಾಗುವ ನಿರೀಕ್ಷೆಯಿತ್ತು. ಮುಂಬೈಗೆ ಬಂದಾಗ ಭೇಟಿ ಮಾಡುತ್ತೇನೆ ಎಂದು ಬಿಗ್ ಬಿ ಭರವಸೆ ನೀಡಿದ್ದರು. ಆದರೆ, ಗೇಲ್ ಆವರನ್ನು ಭೇಟಿ ಮಾಡಲು ಆಗದ ಕಾರಣ ಬಿಗ್ ಬಿ ಕ್ಷಮೆ ಯಾಚಿಸಿದ್ದಾರೆ.

ಅಮಿತಾಬ್ ಫ್ಯಾನ್ ಎಂದಿದ್ದ ಕ್ರಿಸ್ ಗೇಲ್

ಅಮಿತಾಬ್ ಫ್ಯಾನ್ ಎಂದಿದ್ದ ಕ್ರಿಸ್ ಗೇಲ್

ಆಸ್ಟ್ರೇಲಿಯಾದಲ್ಲಿ ನಡೆದ ಬಿಗ್ ಬಾಷ್ ಲೀಗ್ ಟಿ20 ಟೂರ್ನಿಯಲ್ಲಿ ಬಳಸಿದ್ದ ಬ್ಯಾಟ್ ಗಿಫ್ಟ್ ಕೊಟ್ಟ ಮೇಲೆ, ‘ನನ್ನ ಸ್ಪಾರ್ಟನ್ ಬ್ಯಾಟ್ ​ಅನ್ನು ದಂತಕಥೆಯಾಗಿರುವ ಅಮಿತಾಬ್ ಬಚ್ಚನ್​ಗೆ ನೀಡುತ್ತಿರುವುದಕ್ಕೆ ಹೆಮ್ಮೆ ಆಗುತ್ತಿದೆ. ಅವರ ಸಿನಿಮಾಗಳು, ಸ್ಟೈಲ್​ಅನ್ನು ನಾನು ಇಷ್ಟಪಡುತ್ತೇನೆ. ನಿಜವಾಗಿಯೂ ಅವರೊಬ್ಬ ದಂತಕಥೆ' ಎಂದು ಗೇಲ್ ಟ್ವಿಟ್ಟರ್ ನಲ್ಲಿ ಬರೆದುಕೊಂಡಿದ್ದರು.

ಬಿಗ್ ಬಿ ಟ್ವೀಟ್ ಮಾಡಿ ಕ್ಷಮೆಯಾಚಿಸಿದ್ದು ಹೀಗೆ

ಇಂಗ್ಲೆಂಡ್ ವಿರುದ್ಧ 48 ಎಸೆತಗಳಲ್ಲಿ ಶತಕ ಸಿಡಿಸಿದ್ದಕ್ಕೆ ಅಭಿನಂದನೆ ಸಲ್ಲಿಸಿ ನಂತರ ಮುಂಬೈನಲ್ಲಿ ಭೇಟಿ ಮಾಡಲಾಗಲಿಲ್ಲ ಎಂದು ಬಿಗ್ ಬಿ ಹೇಳಿಕೊಂಡಿದ್ದಾರೆ.

ಚಿಂತೆ ಇಲ್ಲ ಮತ್ತೆ ಸಿಗೋಣ ಎಂದ ಬಿಗ್ ಬಿ

ನಿಮ್ಮನ್ನು ಭೇಟಿಯಾಗಲು ಕಾತುರದಿಂದ ಕಾದಿದ್ದೇನೆ ಎಂದ ಅಮಿತಾಬ್ ಬಚ್ಚನ್.

ನನ್ನ ಹಾಡು ಕೇಳಿ ಎಂದ ಬಿಗ್ ಬಿ

ವಿಶ್ವಕಪ್​ಗಾಗಿ ನಾನು ಹಾಡಿರುವ ಹಾಡು ನಿಮಗೆ ಅರ್ಪಣೆ ಮಾಡಿದ್ದೇನೆ ಎಂದು 73 ವರ್ಷ ವಯಸ್ಸಿನ ಹಿರಿಯ ನಟ ಬಿಗ್ ಬಿ ಹೇಳಿದ್ದಾರೆ. ಈ ಸುದ್ದಿಯನ್ನು ಕೇಳಿಸಿಕೊಳ್ಳಿ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ - ನೋಂದಣಿ ಉಚಿತ!

English summary
After the indomitable West Indies opener Chris Gayle scored 100* off 48 balls against England on Wednesday at Mumbai, Bollywood Shenshah Amitabh Bachchan could not stop himself from posting a tweet.
Please Wait while comments are loading...