ಸೋತ ದಕ್ಷಿಣ ಆಫ್ರಿಕಾ, ವೆಸ್ಟ್ ಇಂಡೀಸ್‌ ಸೆಮಿ ಫೈನಲ್‌ಗೆ

Posted By:
Subscribe to Oneindia Kannada

ಬೆಂಗಳೂರು, ಮಾರ್ಚ್ 26 : ದಕ್ಷಿಣ ಆಫ್ರಿಕಾ ತಂಡವನ್ನು ಸೋಲಿಸುವ ಮೂಲಕ ವೆಸ್ಟ್ ಇಂಡೀಸ್ ಟಿ20 ವಿಶ್ವಕಪ್ ಸೆಮಿಫೈನಲ್ ಪ್ರವೇಶಿಸಿದೆ. ನಾಗ್ಪುರದಲ್ಲಿ ಶುಕ್ರವಾರ ನಡೆದ ರೋಚಕ ಪಂದ್ಯದಲ್ಲಿ ಮೂರು ವಿಕೆಟ್‌ಗಳಿಂದ ಗೆಲುವು ಸಾಧಿಸಿದ ವೆಸ್ಟ್ ಇಂಡೀಸ್ 6 ಅಂಕಗಳೊಂದಿಗೆ 'ಎ' ಗುಂಪಿನಲ್ಲಿ ಅಗ್ರಸ್ಥಾನ ಪಡೆಯಿತು.

ಮೊದಲು ಬ್ಯಾಟ್ ಮಾಡಿದ ದಕ್ಷಿಣ ಆಫ್ರಿಕಾಕ್ಕೆ ಬ್ಯಾಟ್ಸ್‌ಮನ್‌ಗಳ ವೈಫಲ್ಯತೆ ಕಾಡಿತು. 8 ವಿಕಟ್ ಕಳೆದುಕೊಂಡ ತಂಡ 20 ಓವರ್‌ಗಳಲ್ಲಿ 122 ರನ್ ಮಾತ್ರ ಬಾರಿಸಲು ಸಾಧ್ಯವಾಯಿತು. 19.4 ಓವರ್‌ಗಳಲ್ಲಿ 7 ವಿಕೆಟ್ ಕಳೆದುಕೊಂಡು ಗೆಲುವು ಸಾಧಿಸಿದ ವೆಸ್ಟ್‌ ಇಂಡೀಸ್ ಸೆಮಿ ಫೈನಲ್ ಪ್ರವೇಶಿಸಿತು.[ವಿಶ್ವ ಟಿ20 ಬಳಿಕ ಕ್ರಿಕೆಟ್ಟಿಗೆ ಶೇನ್ ವಾಟ್ಸನ್ ವಿದಾಯ]

ಕಡಿಮೆ ರನ್‌ಗಳ ಟಾರ್ಗೆಟ್ ಇದ್ದರೂ ಪಂದ್ಯ ರೋಚಕವಾಗಿತ್ತು. ಕೊನೆಯ ಓವರ್‌ನಲ್ಲಿ ವೆಸ್ಟ್ ಇಂಡೀಸ್ ತಂಡ ಗೆಲ್ಲಲು 9 ರನ್‌ ಅಗತ್ಯವಿತ್ತು. ರಬಾಡ ಬೌಲಿಂಗ್‌ನಲ್ಲಿ ಚಾರ್ಲಸ್‌ ಬ್ರಾಥ್‌ವೈಟ್ ಸಿಕ್ಸರ್ ಸಿಡಿಸಿ ಪಂದ್ಯದ ಗತಿ ಬದಲಿಸಿದರು. ಕೊನೆಯ ಓವರ್‌ನ 4ನೇ ಎಸೆತದಲ್ಲಿ ಒಂದು ರನ್ ಬಾರಿಸಿದ ವೆಸ್ಟ್ ಇಂಡೀಸ್ ತಂಡ ಗೆಲುವು ಸಾಧಿಸಿತು. [ಟೀಂ ಇಂಡಿಯಾ ಸೆಮಿಫೈನಲ್ ಹೇಗೆ ತಲುಪಬಹುದು?]

ದಕ್ಷಿಣ ಆಫ್ರಿಕಾ ಮಣಿಸಿದ ವೆಸ್ಟ್ ಇಂಡೀಸ್ ಟೂರ್ನಿಯಲ್ಲಿ ಮೂರು ಪಂದ್ಯಗಳನ್ನು ಗೆದ್ದು ಅಗ್ರಸ್ಥಾನ ಪಡೆದುಕೊಂಡಿದೆ. ತಂಡಕ್ಕೆ ಮುಂದಿನ ಪಂದ್ಯ ಆಫ್ಘಾನಿಸ್ತಾನ ವಿರುದ್ಧ ಮಾರ್ಚ್ 27ಕ್ಕೆ. ದಕ್ಷಿಣ ಆಫ್ರಿಕಾಕ್ಕೆ ಮುಂದಿನ ಪಂದ್ಯ ಶ್ರೀಲಂಕಾ ವಿರುದ್ಧ ಮಾರ್ಚ್ 28ಕ್ಕೆ. ರೋಚಕ ಪಂದ್ಯದ ಚಿತ್ರಗಳು..... [ಪಿಟಿಐ ಚಿತ್ರಗಳು]

ದಕ್ಷಿಣ ಆಫ್ರಿಕಾ ವಿರುದ್ಧ ಗೆಲುವು

ದಕ್ಷಿಣ ಆಫ್ರಿಕಾ ವಿರುದ್ಧ ಗೆಲುವು

ಶುಕ್ರವಾರ ದಕ್ಷಿಣ ಆಫ್ರಿಕಾ ತಂಡವನ್ನು ಸೋಲಿಸುವ ಮೂಲಕ ವೆಸ್ಟ್ ಇಂಡೀಸ್ 6 ಪಾಯಿಂಟ್‌ಗಳನ್ನು ಪಡೆದು, 'ಎ' ಗುಂಪಿನಲ್ಲಿ ಅಗ್ರಸ್ಥಾನ ಗಳಿಸಿದ್ದು, ಟಿ 20 ವಿಶ್ವಕಪ್ ಸೆಮಿಫೈನಲ್ ಪ್ರವೇಶಿಸಿದೆ.

ನಾಗ್ಪುರದಲ್ಲಿ ಸೋತ ದಕ್ಷಿಣ ಆಫ್ರಿಕಾ

ನಾಗ್ಪುರದಲ್ಲಿ ಸೋತ ದಕ್ಷಿಣ ಆಫ್ರಿಕಾ

ಶುಕ್ರವಾರ ನಾಗ್ಪುರ ಎರಡು ಬಲಿಷ್ಠ ತಂಡಗಳ ನಡುವಿನ ಕಾದಾಟಕ್ಕೆ ಸಾಕ್ಷಿಯಾಯಿತು. ಗೆಲುವು ಸಾಧಿಸುವ ಅನಿವಾರ್ಯತೆಯಲ್ಲಿದ್ದ ದಕ್ಷಿಣ ಆಫ್ರಿಕಾ ಸೋಲು ಅನುಭವಿಸಿತು. 20 ಓವರ್‌ಗಳಲ್ಲಿ 8 ವಿಕಟ್ ಕಳೆದುಕೊಂಡ ತಂಡ 122 ರನ್ ಮಾತ್ರ ಬಾರಿಸಲು ಸಾಧ್ಯವಾಯಿತು.

ಕೈಕೊಟ್ಟ ಬ್ಯಾಟ್ಸ್‌ಮನ್‌ಗಳು

ಕೈಕೊಟ್ಟ ಬ್ಯಾಟ್ಸ್‌ಮನ್‌ಗಳು

ನಾಗ್ಪುರ ಮೈದಾನದಲ್ಲಿ ಪ್ರಮುಖ ಬ್ಯಾಟ್ಸ್‌ಮನ್‌ಗಳ ವೈಫಲ್ಯ ಕಾಡಿತು. ದಕ್ಷಿಣ ಆಫ್ರಿಕಾದ ಪರ ಹಶಿಮ್ ಆಮ್ಲಾ, ಫಾಫ್‌ ಡು ಪ್ಲೆಸಿಸ್, ಎ.ಬಿ ಡಿವಿಲಿಯರ್ಸ್‌, ಡೇವಿಡ್‌ ಮಿಲ್ಲರ್‌ ವೈಫಲ್ಯ ಅನುಭವಿಸಿದರು. ದಕ್ಷಿಣ ಆಫ್ರಿಕಾದ ಪರ ಕ್ವಿಂಟನ್‌ ಡಿ ಕಾಕ್‌ 47 ರನ್‌ಗಳಿಸಿ ತಂಡಕ್ಕೆ ಆಸರೆಯಾದರು.

ಗೇಲ್ ಅಭಿಮಾನಿಗಳಿಗೆ ನಿರಾಸೆ

ಗೇಲ್ ಅಭಿಮಾನಿಗಳಿಗೆ ನಿರಾಸೆ

ಸ್ಫೋಟಕ ಬ್ಯಾಟ್ಸ್‌ಮನ್ ಕ್ರಿಸ್ ಗೇಲ್ ಶುಕ್ರವಾರ ಅಭಿಮಾನಿಗಳಿಗೆ ನಿರಾಸೆ ಮೂಡಿಸಿದರು. ಕೇವಲ 7 ರನ್‌ಗಳಿಸಿದ ಗೇಲ್ ರಬಾಡಗೆ ವಿಕೆಟ್ ಒಪ್ಪಿಸಿದರು. 3 ಓವರ್ ಬೌಲಿಂಗ್ ಮಾಡಿದ ಗೇಲ್, 17 ರನ್ ಕೊಟ್ಟು 2 ವಿಕೆಟ್ ಪಡೆದರು.
ವೆಸ್ಟ್ ಇಂಡೀಸ್ ಪರ ಫ್ಲೆಚರ್ 11ರನ್ ಗಳಿಸಿದರೆ, ಸ್ಯಾಮುಯೆಲ್ಸ್‌ 44 ರನ್‌ಗಳಿಸಿ ತಂಡದ ಗೆಲುವಿಗೆ ಪ್ರಮುಖ ಕಾರಣದಾದರು.

ಮುಂದಿನ ಪಂದ್ಯಗಳು

ಮುಂದಿನ ಪಂದ್ಯಗಳು

ವೆಸ್ಟ್ ಇಂಡೀಸ್ ಮಾರ್ಚ್ 27ರಂದು ಆಫ್ಘಾನಿಸ್ತಾನ ವಿರುದ್ಧ ತನ್ನ ಮುಂದಿನ ಪಂದ್ಯವಾಡಲಿದೆ. ದಕ್ಷಿಣ ಆಫ್ರಿಕಾಕ್ಕೆ ಮುಂದಿನ ಪಂದ್ಯ ಶ್ರೀಲಂಕಾ ವಿರುದ್ಧ ಮಾರ್ಚ್ 28ಕ್ಕೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
West Indies have booked their place in the World T20 semi-finals after the victory against South Africa in Nagpur on Friday, March 25, 2016.
Please Wait while comments are loading...