ಫಲಿತಾಂಶವನ್ನೇ ಬದಲಿಸಿದ ಆ 4 'ದೈತ್ಯ' ಸಿಕ್ಸರ್‌ಗಳು

Subscribe to Oneindia Kannada

ಕೋಲ್ಕತಾ, ಏಪ್ರಿಲ್, 04: ಅದು ವಿಶ್ವಕಪ್ ಟಿ-20 ಫೈನಲ್ ಪಂದ್ಯ, ಕೊನೆ ಓವರ್ ಥ್ರಿಲ್ಲರ್.. ಎಲ್ಲರೂ ತಮ್ಮ ಉಗುರು ಕಚ್ಚಿ ಹಿಡಿದು ಕುಳಿತುಕೊಳ್ಳುವಂಥ ಪಂದ್ಯ. ಅಂತಿಮವಾಗಿ ವೆಸ್ಟ್ ಇಂಡೀಸ್ ಸಾಮ್ರಾಟ.

ಕೊನೆ ಓವರ್ ನಲ್ಲೆ ವೆಸ್ಟ್ ಇಂಡೀಸ್ ಗೆಲುವಿಗೆ ಬೇಕಾಗಿದ್ದು ಬರೋಬ್ಬರಿ 19 ರನ್. ಟೂರ್ನಿಯಲ್ಲೇ ಅತಿ ಹೆಚ್ಚು ಡಾಟ್ ಬಾಲ್ ಎಸೆದ ಸ್ಟೋಕ್ಸ್‌ ಕೊನೆ ಓವರ್ ಹೊತ್ತುಕೊಂಡು ನಿಂತಿದ್ದರು. [ಆಸಿಸ್ ಮಣಿಸಿ ಟಿ-20 ವಿಶ್ವಕಪ್‌ಗೆ ಮುತ್ತಿಟ್ಟ ವಿಂಡೀಸ್ ವನಿತೆಯರು]

ಆದರೆ ವೆಸ್ಟ್ ಇಂಡೀಸ್ ಪರ ನಿಜವಾಗಿ ಹೀರೋ ಆಗಿ ಪ್ರಜ್ವಲಿಸಿದವರು ಕಾರ್ಲೋಸ್‌ ಬ್ರಾತ್‌ವೇಟ್‌. ಸತತ ನಾಲ್ಕು ಎಸೆತಗಳನ್ನು ಸಿಕ್ಸರ್ ಗೆ ಅಟ್ಟಿ ವಿಂಡೀಸ್ ಗೆ ಗೆಲುವಿನ ಹಾರ ತೊಡಿಸಿದರು.[ವಾರ್ನ್ ಗೆ ತಿರುಗೇಟು ನೀಡಿದ ವಿಶ್ವ ಟಿ20 ಹೀರೋ ಸ್ಯಾಮುಯಲ್ಸ್]

ಎದುರಿಸಿದ 10 ಎಸೆತಗಳಿಂದ ಅಜೇಯ 34 ರನ್‌ ಬಾರಿಸಿದ ಬ್ರಾತ್‌ವೇಟ್‌ ಪಂದ್ಯದ ದಿಕ್ಕನ್ನೇ ಬದಲಾಯಿಸಿದರು. ಮತ್ತೊಂದು ಕಡೆ ನೆಲ ಕಚ್ಚಿ ನಿಂತಿದ್ದ ಸ್ಯಾಮುಯಲ್ಸ್ ಕೊಡುಗೆ 66 ಎಸೆತಗಳಲ್ಲಿ 85 ರನ್‌. ಎರಡನೇ ಸಾರಿ ಟಿ-20 ವಿಶ್ವಕಪ್ ಮುಡಿಗೇರಿಸಿಕೊಂಡ ಕೀರ್ತಿ ವಿಂಡೀಸರ ಪಾಲಾಯಿತು.[ವೈದ್ಯನ ಕ್ರಿಕೆಟ್ ಹುಚ್ಚಿಗೆ ಯುವಕನ ಪ್ರಾಣ ಹಾರಿಹೋಯ್ತು][ಪಿಟಿಐ ಚಿತ್ರಗಳು]

ಟಾಸ್ ಗೆದ್ದ ವಿಂಡೀಸ್

ಟಾಸ್ ಗೆದ್ದ ವಿಂಡೀಸ್

ವೆಸ್ಟ್ ಇಂಡೀಸ್ ತಂಡದ ನಾಯಕ ಸ್ಯಾಮ್ಮಿ ಸತತ 10 ನೇ ಬಾರಿಗೆ ಟಾಸ್ ಜಯಿಸಿದ್ದು ಪಂದ್ಯದ ಪ್ರಮುಖ ಅಂಶಗಳಲ್ಲಿ ಒಂದು. ನಿರೀಕ್ಷೆಯಂತೆ ಟಾಸ್ ಗೆದ್ದ ನಂತರ ಬೌಲಿಂಗ್ ನ್ನು ಆಯ್ಕೆ ಮಾಡಿಕೊಂಡರು.

ಆರಂಭಿಕ ಆಘಾತ

ಆರಂಭಿಕ ಆಘಾತ

ಇಂಗ್ಲೆಂಡ್ ಗೆ ಆರಂಭದಲ್ಲೇ ಆಘಾತ ಕಾದಿತ್ತು. ಉತ್ತಮ ಫಾರ್ಮ್ ನಲ್ಲಿದ್ದ ರಾಯ್ ಮತ್ತು ಸ್ಫೋಟಕ ಆಟಗಾರ ಹೇಲ್ಸ್ ಅವರನ್ನು ಆರಂಭದಲ್ಲೇ ವಿಂಡೀಸ್ ಬೌಲರುಗಳು ಫೆವಿಲಿಯನ್ ಗೆ ವಾಪಸ್ ಕಳಿಸಿದರು. ಆರು ಓವರ್ ಮುಕ್ತಾಯದೊಳಗೆ ಇಂಗ್ಲೆಂಡಿನ ಮೂರು ವಿಕೆಟ್ ಕಬಳಿಸಲಾಗಿತ್ತು.

 ಬದ್ರಿ ಭರ್ಜರಿ ಬೌಲಿಂಗ್

ಬದ್ರಿ ಭರ್ಜರಿ ಬೌಲಿಂಗ್

ಅಪಾಯಕಾರಿ ಲೆಗ್‌ ಸ್ಪಿನ್ನರ್‌ ವಿಂಡೀಸ್ ನ ಸಾಮ್ಯುಯೆಲ್‌ ಬದ್ರಿ ಪಂದ್ಯದ 2ನೇ ಎಸೆತದಿಂದಲೇ ಇಂಗ್ಲೆಂಡ್‌ ಮೇಲೆ ಒತ್ತಡ ಹೇರಿದರು. ಜಾಸನ್‌ ರಾಯ್‌ ಖಾತೆ ತೆರೆಯುವ ಮೊದಲೇ ಬದ್ರಿಗೆ ಬೌಲ್ಡ್‌ ಆಗಿ ಹೊರನಡೆದರು. ಮತ್ತೂಬ್ಬ ಓಪನರ್‌ ಅಲೆಕ್ಸ್‌ ಹೇಲ್ಸ್‌ ಕೇವಲ ಒಂದು ರನ್‌ ಮಾಡಿ ರಸೆಲ್‌ಗೆ ವಿಕೆಟ್‌ ಒಪ್ಪಿಸಿದರು.

ಸ್ಪರ್ಧಾತ್ಮಕ ಮೊತ್ತ

ಸ್ಪರ್ಧಾತ್ಮಕ ಮೊತ್ತ

ಜೋ ರೂಟ್‌ ಅವರ ಅರ್ಧ ಶತಕ ಇಂಗ್ಲೆಂಡ್ ನ್ನು 150ರ ಗಡಿ ದಾಟಿಸಿತು. 36 ಎಸೆತಗಳನ್ನೆದುರಿಸಿ ರೂಟ್ 7 ಬೌಂಡರಿ ನೆರವಿನಿಂದ 54 ರನ್‌ ಬಾರಿಸಿದರು. ಜಾಸ್‌ ಬಟ್ಲರ್‌ 36 ರನ್‌ ಮಾಡಿ ಉತ್ತಮ ಸಾಥ್ ನೀಡಿದರು.ಅಂತಿಮವಾಗಿ 9 ವಿಕೆಟ್ ಕಳೆದುಕೊಂಡ ಇಂಗ್ಲೆಂಡ್ 155 ರನ್‌ ಗಳಿಸಿತು.

ದೈತ್ಯರ ನಿರ್ಗಮನ

ದೈತ್ಯರ ನಿರ್ಗಮನ

ಬ್ಯಾಟಿಂಗ್ ದೈತ್ಯ ಕ್ರಿಸ್ ಗೇಲ್ ಮತ್ತೆ ಫೈನಲ್ ಪಂದ್ಯದಲ್ಲಿ ಬ್ಯಾಟ್ ಬೀಸಲಿಲ್ಲ. ರೂಟ್‌ ಬೌಲಿಂಗಿನಲ್ಲೂ ಇಂಗ್ಲೆಂಡ್‌ ಆರಂಭಿಕರಾದ ಜಾನ್ಸನ್‌ ಚಾರ್ಲ್ಸ್‌ (1) ಮತ್ತು ಕ್ರಿಸ್‌ ಗೇಲ್‌ (4) ಇಬ್ಬರು ಬಲು ಬೇಗನೇ ಔಟ್ ಆದರು. ಭಾರತಕ್ಕೆ ಸೋಲು ಕಾಣಿಸಿದ್ದ ಲೆಂಡ್ಲ್ ಸಿಮನ್ಸ್‌ ಸಹ ಸೊನ್ನೆ ಸುತ್ತಿದರು.

ಸಾಮ್ಯುಯೆಲ್ಸ್‌-ಬ್ರಾವೊ ಆಸರೆ

ಸಾಮ್ಯುಯೆಲ್ಸ್‌-ಬ್ರಾವೊ ಆಸರೆ

ಈ ವೇಳೆ ಜತೆಯಾದ ಸಾಮ್ಯುಯೆಲ್ಸ್‌-ಬ್ರಾವೊ ಜೋಡಿ ವೆಸ್ಟ್ ಇಂಡೀಸ್ ಕುಸಿತವನ್ನು ತೆಡೆಯಿತು. 11.3 ಓವರ್‌ಗಳಿಂದ 75 ರನ್‌ ಪೇರಿಸಿ ಇನಿಂಗ್ಸ್ ಕಟ್ಟಿದರು. ಬ್ರಾವೋ ಔಟ್ ಆದ ಮೇಲೆ ಬಂದ ಆಂಡ್ರೆ ರಸೆಲ್‌, ಸಮ್ಮಿ ಬಂದಂತೆಯೇ ವಾಪಸಾದರು. ಪಂದ್ಯ ಮತ್ತೆ ಇಂಗ್ಲೆಂಡ್ ತೆಕ್ಕೆಗೆ ಜಾರಿತು.

 ರನ್ ಗತಿ

ರನ್ ಗತಿ

ಒಂದೆಡೆ ಸಾಮ್ಯುಯೆಲ್ಸ್‌ ಇದ್ದರೂ ಬೇಕಾದ ರನ್ ಗತಿ ವಿಂಡೀಸ್ ಪಾಲಿಗೆ ಏರುತ್ತಲೇ ಇತ್ತು. ಅಂತಿಮ 5 ಓವರ್‌ಗಳಿಂದ 52 ರನ್‌, 2 ಓವರ್‌ಗಳಿಂದ 27 ರನ್‌ ಬೇಕಿತ್ತು. ಇಂಗ್ಲೆಂಡ್ ಈ ವೇಳೆ ನಡೆಸಿದ ಬೌಲಿಂಗ್ ದಾಳಿ ಮೆಚ್ಚಲೇಬೇಕು.

 ಅಂತಿಮ ಓವರ್ ಟೆನ್ಷನ್

ಅಂತಿಮ ಓವರ್ ಟೆನ್ಷನ್

ಅಂತಿಮ ಓವರಿನಲ್ಲಿ ವಿಂಡೀಸ್ ಗೆ ಗೆಲ್ಲಲು ಬೇಕಿದ್ದದ್ದು ಬರೋಬ್ಬರಿ 19 ರನ್‌. ಬೆಸ್ಟ್ ಬೌಲರ್ ಎಂದೇ ಕರೆಸಿಕೊಂಡಿದ್ದ ಬೆನ್‌ ಸ್ಟೋಕ್ಸ್‌ ಇಂಗ್ಲೆಂಡ್ ಪರ ಬಾಲ್ ಹಿಡಿದು ನಿಂತಿದ್ದರು. ಇತ್ತ ಬ್ರಾತ್‌ವೇಟ್‌ ಸ್ಟ್ರೈಕ್ ನಲ್ಲಿದ್ದರು.

6,6,6,6

6,6,6,6

ಒಮ್ಮೆಲೆ ಸ್ಫೋಟಿಸಿದ ಬ್ರಾತ್‌ವೇಟ್‌ ಲೆಂಥ್ ಬಾಲ್ ಗಳನ್ನು ಬೌಂಡರಿಯಿಂದ ಹೊರಕ್ಕೆ ಅಟ್ಟಿದರು. ಮೊದಲ ಎಸೆತ ಸಿಕ್ಸರ್, ಎರಡನೇ ಎಸೆವೂ ಸಿಕ್ಸರ್, ಮೂರನೇ ಎಸತವೂ ಸಿಕ್ಸರ್, ನಾಲ್ಕನೇ ಎಸೆತವೂ ಅದೆ ಫಲಿತಾಂಶ... ಅಷ್ಟರಲ್ಲಿ ವಿಂಡೀಸ್ ಚಾಂಪಿಯನ್ ಆಗಿತ್ತು. ಬಹುಷಃ ಇನ್ನೆರಡು ಎಸೆತಗಳನ್ನು ಸಿಕ್ಸರ್ ಗೆ ಅಟ್ಟುತ್ತಿದ್ದರೋ ಏನೋ!

 ಚಾಂಪಿಯನ್

ಚಾಂಪಿಯನ್

19 ವರ್ಷದೊಳಗಿನವರ ವಿಶ್ವಕಪ್, ಮಹಿಳೆಯರ ಟಿ-20 ವಿಶ್ವಕಪ್ ಮತ್ತು ಪುರುಷರ ಟಿ-20 ವಿಶ್ವಕಪ್ ನ್ನು ಒಂದೇ ವರ್ಷದ ಅವಧಿಯಲ್ಲಿ ವಿಂಡೀಸರು ಎತ್ತಿ ಹಿಡಿದರು. ಮಹಿಳೆ ಮತ್ತು ಪುರುಷರ ಚಾಂಪಿಯನ್ ಆಗಿ ಒಂದೇ ದಿನ ಹೊರಹೊಮ್ಮಿದ್ದು ವಿಶೇಷ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
West Indies tonight (April 3) created history by becoming the first nation to win the ICC World T20 twice with a dramatic four wicket victory over England riding on Carlos Brathwaite four consecutive lusty sixes in the final over of the innings. Chasing a tricky target of 156, it was Marlon Samuels, who did an encore of the 2012 final that Darren Sammy's men had won, hitting a magnificent 85 not out off 66 balls with 9 boundaries and 2 huge sixes.
Please Wait while comments are loading...