ಭಾರತ ವಿರುದ್ಧ ಪಾಕ್ : ಮತ್ತೊಮ್ಮೆ 'ಮೌಕಾ ಮೌಕಾ' ಜಾಹೀರಾತು

Posted By:
Subscribe to Oneindia Kannada

ನವದೆಹಲಿ, ಮಾರ್ಚ್ 16: ವಿಶ್ವ ಟ್ವೆಂಟಿ20 ಟೂರ್ನಮೆಂಟ್ ನ ಸೂಪರ್ 10ರ ಹಂತದ ಮೊದಲ ಪಂದ್ಯದಲ್ಲೇ ಟೀಂ ಇಂಡಿಯಾ ಸೋಲು ಕಂಡಿದೆ. ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನದ ವಿರುದ್ಧ ಮುಂದಿನ ಸವಾಲು ಎದುರಿಸಲು ಧೋನಿ ಪಡೆ ಸಜ್ಜಾಗಬೇಕಾಗಿದೆ. ಈ ಮಹಾನ್ ಸಮರಕ್ಕೆ ಹೊಚ್ಚ ಹೊಸ 'ಮೌಕಾ ಮೌಕಾ' ಆಡ್ ಕೂಡಾ ಬಿಡುಗಡೆ ಮಾಡಲಾಗಿದೆ.

ವಿಶ್ವ ಟಿ20: ತಂಡಗಳು | ವೇಳಾಪಟ್ಟಿ | ಗ್ಯಾಲರಿ

ಕೋಲ್ಕತಾದ ಈಡನ್ ಗಾರ್ಡನ್ ಮೈದಾನದಲ್ಲಿ ಮಾರ್ಚ್ 19ರಂದು ಭಾರತ ಹಾಗೂ ಪಾಕಿಸ್ತಾನ ಪಂದ್ಯ ನಡೆಯಲಿದೆ. ಇದಕ್ಕಾಗಿ ಅತ್ಯಂತ ಜನಪ್ರಿಯ ಜಾಹೀರಾತು ಮೌಕಾ ಮೌಕಾ ಕೂಡಾ ಸಜ್ಜಾಗಿದೆ.[ಹೆಲೋ, ಮೌಕಾ, ಮೌಕಾ.. ಕ್ಯಾ ಹುವಾ ಮೌಕೆಕಾ?!]

Watch: New ‘Mauka Mauka ad’ stokes India-Pakistan rivalry

ಏನಿದೆ ಹೊಸ ಆಡ್ ನಲ್ಲಿ? : ಪಾಕಿಸ್ತಾನದ ನಾಯಕ ಶಾಹೀದ್ ಅಫ್ರಿದಿ ಅವರಿಗೆ ಪಾಕಿಸ್ತಾನಿ ಜರ್ಸಿ ತೊಟ್ಟ ಅಭಿಮಾನಿ ಮತ್ತೊಮ್ಮೆ ನಿವೇದನೆ ಮಾಡಿಕೊಳ್ಳುತ್ತಾನೆ. ಜಗತ್ತು ಏನೇ ಹೇಳಲಿ. ಈ ಬಾರಿ ಭಾರತನ್ನು ಸೋಲಿಸಿ ನಮಗೆ ಖುಷಿ ಕೊಡಿ. [ವಿಶ್ವ ಟ್ವೆಂಟಿ20 2016 ಟೂರ್ನಿಗೆ ಫುಲ್ ಗೈಡ್]

ಲೋಕಕ್ಕೆ ಸಿಕ್ಸ್, ಬೌಂಡರಿ ಬಾರಿಸುವುದು ಹೇಗೆ ಎಂಬುದನ್ನು ತೋರಿಸಿ ಕೊಡಿ. ನನಗಾಗಿ ಅಲ್ಲದಿದ್ದರೂ ಇಂದಿನ ಯುವ ಪೀಳಿಗೆಗಾಗಿ ನೀವು ಈ ಪಂದ್ಯವನ್ನು ಗೆಲ್ಲಿಸಿಕೊಡಬೇಕಿದೆ ಎಂದು ಕೇಳಿಕೊಳ್ಳುತ್ತಾನೆ.[2007ರ ವಿಶ್ವ ಟಿ20 ಹೀರೋ ಈಗ ಹರ್ಯಾಣದ ಪೊಲೀಸ್]

ನಿರೀಕ್ಷೆಯಂತೆ ಮೌಕಾ ಮೌಕಾ ವಿಡಿಯೋ ಪ್ರಚಾರ ಕ್ಲಿಕ್ ಆಗಿದ್ದು, ಲಕ್ಷಾಂತರ ಬಾರಿ ವೀಕ್ಷಣೆಯಾಗಿದೆ. ಅಂತಾರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ (ಐಸಿಸಿ) ಆಯೋಜನೆಯ ಭಾರತ ಹಾಗೂ ಪಾಕಿಸ್ತಾನ ಪಂದ್ಯದ ಕಿಚ್ಚಿಗೆ ಇನ್ನಷ್ಟು ಕ್ರೇಜ್ ತುಂಬಲು ಮೌಕಾ ಮೌಕಾ ಜಾಹೀರಾತು ಮತ್ತೊಮ್ಮೆ ಕಾರಣವಾಗುತ್ತಿದೆ. ಹೆಚ್ಚಿನ ಮಾತೇಕೆ, ಮೌಕಾ ಮೌಕಾ ಜಾಹೀರಾತು ಇಲ್ಲಿದೆ ನೋಡಿ:


(ಒನ್ಇಂಡಿಯಾ ಸುದ್ದಿ)

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
As India is ready to take on its arch-rivals Pakistan in T 20 World Cup match scheduled for March 19, new 'Mauka-Mauka' ad has been released. In the latest version of the popular ad series, an emotion appeal has been made to Pakistan's T20 skipper Shahid Afridi.
Please Wait while comments are loading...