ಸೆಹ್ವಾಗ್ ನುಡಿದ ಟಿ20 ಭವಿಷ್ಯ: ಬಹುತೇಕ ನಿಜವಾಯ್ತು!

Posted By:
Subscribe to Oneindia Kannada

ಬೆಂಗಳೂರು, ಮಾರ್ಚ್ 28: ಟೀಂ ಇಂಡಿಯಾದ ಮಾಜಿ ಆರಂಭಿಕ ಆಟಗಾರ ವೀರೇಂದರ್ ಸೆಹ್ವಾಗ್ ಅವರು ವಿಶ್ವ ಟಿ20 ಟೂರ್ನಿ ಆರಂಭಕ್ಕೂ ಮುನ್ನ ಸೆಮಿಫೈನಲ್ ತಲುಪುವ ನಾಲ್ಕು ತಂಡಗಳನ್ನು ಹೆಸರಿಸಿದ್ದರು. ಮಾರ್ಚ್ 08ರಿಂದ ಅರಂಭಗೊಂಡ ಐಸಿಸಿ ವಿಶ್ವ ಟಿ20 ಟೂರ್ನಮೆಂಟ್ ಈಗ ಸೆಮಿಫೈನಲ್ ಹಂತ ತಲುಪಿದೆ. ಸೆಹ್ವಾಗ್ ನುಡಿದ ಟಿ20 ಭವಿಷ್ಯ ಏನಾಗಿದೆ? ಮುಂದೆ ಓದಿ...

ವಿಶ್ವ ಟಿ20: ತಂಡಗಳು | ವೇಳಾಪಟ್ಟಿ | ಗ್ಯಾಲರಿ |ಟೂರ್ನಿಗೆ ಫುಲ್ ಗೈಡ್

ಇಂಡಿಯಾ ಟುಡೇ ಅಭಿಯಾನ 'ಸಲಾಮ್ ಕ್ರಿಕೆಟ್ 2016' ನಲ್ಲಿ ಪಾಲ್ಗೊಂಡು ಮಾತನಾಡಿದ್ದ ಸೆಹ್ವಾಗ್ ಅವರು ಮಹೇಂದ್ರ ಸಿಂಗ್ ಧೋನಿ ನೇತೃತ್ವದ ಟೀಂ ಇಂಡಿಯಾ ಕಪ್ ಗೆಲ್ಲುವ ಫೇವರೀಟ್ ಎಂದಿದ್ದರು. ಇದರ ಭವಿಷ್ಯ ಮಾರ್ಚ್ 31ರ ನಂತರ ತಿಳಿಯಲಿದೆ. [ವಿಶ್ವ ಟಿ20: ಸೆಮಿಫೈನಲ್ ಪಂದ್ಯ ಎಲ್ಲಿ? ಫುಲ್ ವೇಳಾಪಟ್ಟಿ]

37 ವರ್ಷ ವಯಸ್ಸಿನ ವೀರೇಂದರ್ ಸೆಹ್ವಾಗ್ ಅವರು ಇತ್ತೀಚೆಗಷ್ಟೇ ಕ್ರೀಡಾ ಅಂಕಣಕಾರರಾಗಿದ್ದಾರೆ. ಈಗ ವಿಶ್ವ ಟಿ20ಗಾಗಿ ವಿಶ್ಲೇಷಕರಾಗಿ ಕೂಡಾ ಕಾಣಿಸಿಕೊಳ್ಳುತ್ತಿದ್ದಾರೆ. [ಅನುಷ್ಕಾರನ್ನು ಕಿಚಾಯಿಸಿದ ಟ್ವೀಟ್ಸ್]

(ಒನ್ಇಂಡಿಯಾ ಸುದ್ದಿ)

ಸೆಹ್ವಾಗ್ ಆಯ್ಕೆಯ 4 ತಂಡಗಳು

ಸೆಹ್ವಾಗ್ ಆಯ್ಕೆಯ 4 ತಂಡಗಳು

ಭಾರತ, ನ್ಯೂಜಿಲೆಂಡ್, ವೆಸ್ಟ್ ಇಂಡೀಸ್ ಹಾಗೂ ದಕ್ಷಿಣ ಆಫ್ರಿಕಾ ತಂಡಗಳು ಸೆಮಿಫೈನಲ್ ತಲುಪುವ ಅರ್ಹತೆ, ಸಾಮರ್ಥ್ಯ ಹೊಂದಿವೆ ಎಂದು ಸೆಹ್ವಾಗ್ ಹೇಳಿದ್ದರು.ಈ ಪೈಕಿ ದಕ್ಷಿಣ ಆಫ್ರಿಕಾ ಬಿಟ್ಟು ಉಳಿದ ಮೂರು ತಂಡಗಳು ಸೆಮಿಫೈನಲ್ ತಲುಪಿವೆ.

ಏಷ್ಯಾಖಂಡದ ತಂಡಗಳ ಪೈಕಿ ಭಾರತ ಮಾತ್ರ

ಏಷ್ಯಾಖಂಡದ ತಂಡಗಳ ಪೈಕಿ ಭಾರತ ಮಾತ್ರ

ಏಷ್ಯಾಖಂಡದ ತಂಡಗಳ ಪೈಕಿ ಭಾರತ ಮಾತ್ರ ಸ್ಪರ್ಧೆಯಲ್ಲಿ ಉಳಿದಿದೆ. ಹಾಲಿ ಚಾಂಪಿಯನ್ ಶ್ರೀಲಂಕಾ ಕೂಡಾ ಟೂರ್ನಿಯಿಂದ ಔಟಾಗಿದೆ. ಪಾಕಿಸ್ತಾನ, ಅಫ್ಘಾನಿಸ್ತಾನ, ಬಾಂಗ್ಲಾದೇಶ ಸೂಪರ್ 10 ಹಂತ ದಾಟಲು ಸಾಧ್ಯವಾಗಿಲ್ಲ. ಲೀಗ್ ಹಂತ ದಾಟಿದರೆ ಪಾಕಿಸ್ತಾನ ಫೈನಲ್ ತಲುಪಬಹುದು ಎಂದಿದ್ದರು.

ಸೆಹ್ವಾಗ್ ತಮ್ಮ ಕ್ರಿಕೆಟ್ ಪಾಂಡಿತ್ಯ ಪ್ರದರ್ಶಿಸಿದ್ದಾರೆ

ಸೆಹ್ವಾಗ್ ತಮ್ಮ ಕ್ರಿಕೆಟ್ ಪಾಂಡಿತ್ಯ ಪ್ರದರ್ಶಿಸಿದ್ದಾರೆ

ಸೆಹ್ವಾಗ್ ದಕ್ಷಿಣ ಆಫ್ರಿಕಾ ಬದಲಿಗೆ ಇಂಗ್ಲೆಂಡ್ ಸೆಮೀಸ್ ತಲುಪಿದೆ. ಹೀಗಾಗಿ ನಾಲ್ಕರಲ್ಲಿ ಮೂರು ಸರಿಯಾಗಿ ಊಹೆ ಮಾಡುವ ಮೂಲಕ ಸೆಹ್ವಾಗ್ ತಮ್ಮ ಕ್ರಿಕೆಟ್ ಪಾಂಡಿತ್ಯ ಪ್ರದರ್ಶಿಸಿದ್ದಾರೆ.

2007ರಲ್ಲಿ ದಕ್ಷಿಣ ಆಫ್ರಿಕಾದಲ್ಲಿ ನಡೆದ ಚೊಚ್ಚಲ ವಿಶ್ವ ಟಿ20 ಟೂರ್ನಮೆಂಟ್ ನಲ್ಲಿ ಪ್ರಶಸ್ತಿ ಗೆದ್ದ ಭಾರತ ತಂಡ ಭಾಗವಾಗಿದ್ದ ಸೆಹ್ವಾಗ್ ಅವರು ಕಳೆದ ವರ್ಷ ಅಂತಾರಾಷ್ಟ್ರೀಯ ಕ್ರಿಕೆಟ್ ನಿಂದ ನಿವೃತ್ತಿ ಹೊಂದಿದರು.

ಯಾವ ತಂಡವೂ ಎರಡು ಬಾರಿ ಕಪ್ ಗೆದ್ದಿಲ್ಲ

ಯಾವ ತಂಡವೂ ಎರಡು ಬಾರಿ ಕಪ್ ಗೆದ್ದಿಲ್ಲ

2007ರಲ್ಲಿ ಭಾರತ ಗೆದ್ದ ಬಳಿಕ 2009ರಲ್ಲಿ ಪಾಕಿಸ್ತಾನ, 2010ರಲ್ಲಿ ಇಂಗ್ಲೆಂಡ್, 2012ರಲ್ಲಿ ವೆಸ್ಟ್ ಇಂಡೀಸ್ ಹಾಗೂ 2014ರಲ್ಲಿ ಶ್ರೀಲಂಕಾ ವಿಶ್ವ ಟಿ20 ಕಪ್ ಎತ್ತಿವೆ. ಯಾವ ತಂಡವೂ ಎರಡು ಬಾರಿ ಕಪ್ ಗೆ ಮುತ್ತಿಡುವ ಅವಕಾಶ ಪಡೆದುಕೊಂಡಿಲ್ಲ. ಫೈನಲ್ ನಲ್ಲಿ ಭಾರತ ಹಾಗೂ ವೆಸ್ಟ್ ಇಂಡೀಸ್ ಸೆಣಸಬಹುದು ಎಂದು ಸೆಹ್ವಾಗ್ ಹೇಳಿದ್ದಾರೆ. ಆದರೆ, ಕಪ್ ಎತ್ತುವ ಸಾಮರ್ಥ್ಯ ಯಾರಿಗಿದೆ ಎಂದು ಹೇಳಲು ಕಷ್ಟ ಎಂದಿದ್ದಾರೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Former Indian opener Virender Sehwag has picked his four semi-finalists f before the start of the ICC World Twenty20 2016 tournament. Out of 4 teams he picked 3 teams have made it to the Semi Final stage. South Africa missed out of list
Please Wait while comments are loading...