ಅನುಷ್ಕಾ ಮೇಲೆ ಗೂಬೆ ಕೂರಿಸ್ಬೇಡಿ ಪ್ಲೀಸ್: ವಿರಾಟ್ ತರಾಟೆ

Posted By:
Subscribe to Oneindia Kannada

ಬೆಂಗಳೂರು, ಮಾರ್ಚ್ 28: ಟೀಂ ಇಂಡಿಯಾದ ಮಧ್ಯಮ ಕ್ರಮಾಂಕದ ನಂಬುಗೆಯ ಆಟಗಾರ ವಿರಾಟ್ ಕೊಹ್ಲಿ ಸಿಟ್ಟಾಗಿದ್ದಾರೆ. ಕೊಹ್ಲಿ ಅವರು ಆಸ್ಟ್ರೇಲಿಯಾದ ವಿರುದ್ಧ ತೋರಿದ ಪರಾಕ್ರಮದ ಬಗ್ಗೆ ಎಲ್ಲೆಡೆಯಿಂದ ಮೆಚ್ಚುಗೆ ವ್ಯಕ್ತವಾಗುತ್ತಿರುವ ಸಂದರ್ಭದಲ್ಲಿ ಕೊಹ್ಲಿ ಅವರ ಗೆಳತಿ ನಟಿ ಅನುಷ್ಕಾ ಶರ್ಮ ಅವರನ್ನು ಟ್ರಾಲ್ ಮಾಡಲಾಗಿದೆ. ಈ ಬಗ್ಗೆ ಕೊಹ್ಲಿ ತಿರುಗೇಟು ನೀಡಿದ್ದಾರೆ.

ವಿಶ್ವ ಟಿ20: ತಂಡಗಳು | ವೇಳಾಪಟ್ಟಿ | ಗ್ಯಾಲರಿ |ಟೂರ್ನಿಗೆ ಫುಲ್ ಗೈಡ್

ಪಾಕಿಸ್ತಾನ ವಿರುದ್ಧದ ಗೆಲುವನ್ನು 'ಕ್ರಿಕೆಟ್ ದೇವರು' ಸಚಿನ್ ಹಾಗೂ ಅಭಿಮಾನಿಗಳಿಗೆ ಕೊಹ್ಲಿ ಅರ್ಪಿಸಿದ್ದರು. ಆದರೆ, ಮೈಕ್ರೋಬ್ಲಾಗಿಂಗ್ ತಾಣ ಟ್ವಿಟ್ಟರ್ ನಲ್ಲಿ ಮಾತ್ರ ಎಲ್ಲರೂ ನಟಿ ಅನುಷ್ಕಾ ಶರ್ಮರಿಗೆ 'ಥ್ಯಾಂಕ್ಸ್' ಹೇಳಿ, ಕಿಚಾಯಿಸಿದ್ದರು. [ಅನುಷ್ಕಾರನ್ನು ಕಿಚಾಯಿಸಿದ ಟ್ವೀಟ್ಸ್]

ಈಗಲೂ ಇದೇ ರೀತಿ ಟ್ವೀಟ್ಸ್, ಟ್ರಾಲ್ ಮುಂದುವರೆದಿದೆ. ಕೊಹ್ಲಿ ಅವರೊಬ್ಬ ಭಗ್ನ ಪ್ರೇಮಿಯಾಗಿದ್ದಾರೆ ಹೀಗಾಗಿ ಆವರಿಂದ ಈ ರೀತಿ ಆಕ್ರೋಶಭರಿತ ಬ್ಯಾಟಿಂಗ್ ಮಾಡಲು ಸಾಧ್ಯವಾಗಿದೆ. ಕೊಹ್ಲಿ ಅವರನ್ನು ಕ್ರಿಕೆಟ್ ಆಡಲು ಬಿಟ್ಟು ನೀವು ಹೋಗಿದ್ದು ಒಳ್ಳೆಯದಾಯ್ತು ಎಂದು ಅನುಷ್ಕಾ ಅವರಿಗೆ ಥ್ಯಾಂಕ್ಸ್ ಹೇಳಲಾಗಿದೆ.[ಸೆಮಿಫೈನಲ್ ಪಂದ್ಯ ಎಲ್ಲಿ? ಫುಲ್ ವೇಳಾಪಟ್ಟಿ]

ಇದರ ಜೊತೆಗೆ ನಟಿ ಅನುಷ್ಕಾ ಶರ್ಮ ಅವರನ್ನು ಅಣಕಿಸುವ, ಕಿಚಾಯಿಸುವ ಟ್ವೀಟ್ಸ್ ಸಾಕಷ್ಟು ಹರಿದಾಡುತ್ತಿವೆ. ಈ ಬಗ್ಗೆ ಕೊಹ್ಲಿ ನೀಡಿದ ಪ್ರತಿಕ್ರಿಯೆ ಏನು? ಮುಂದೆ ಓದಿ...

ಟ್ವಿಟ್ಟರ್, ಇನ್ ಸ್ಟಾಗ್ರಾಮ್ ನಲ್ಲಿ ಕೊಹ್ಲಿ

ಟ್ವಿಟ್ಟರ್, ಇನ್ ಸ್ಟಾಗ್ರಾಮ್ ನಲ್ಲಿ ಕೊಹ್ಲಿ

ಅನುಷ್ಕಾ ಅವರು ನನಗೆ ಯಾವಾಗಲೂ ಪಾಸಿಟಿವ್ ಎನರ್ಜಿ ನೀಡಿದ್ದಾರೆ ಎಂದು ವಿರಾಟ್ ಕೊಹ್ಲಿ ಟ್ವೀಟ್

ವಿರಾಟ್ ಕೊಹ್ಲಿ ಟ್ವೀಟ್

ಗೆಳತಿ ನಟಿ ಅನುಷ್ಕಾ ಶರ್ಮ ಅವರನ್ನು ಟ್ರಾಲ್ ಮಾಡುವುದನ್ನು ಸಹಿಸದ ಕೊಹ್ಲಿ,

ಇಬ್ಬರ ನಡುವಿನ ವಿರಸದ ಕಾರಣ ಬಹಿರಂಗ

ಇಬ್ಬರ ನಡುವಿನ ವಿರಸದ ಕಾರಣ ಬಹಿರಂಗ

ಇಬ್ಬರ ನಡುವಿನ ವಿರಸದ ಕಾರಣ ಬಹಿರಂಗ ಇಬ್ಬರ ನಡುವಿನ ವಿರಸಕ್ಕೆ ಕಾರಣವಾಗಿದ್ದು, 40 ಕೋಟಿ ರು ಮೊತ್ತ ಎನ್ನಲಾಗಿದೆ. ಅನುಷ್ಕಾ ಹಾಗೂ ರಣವೀರ್ ಕಪೂರ್ ಅಭಿನಯದ ಹಿಂದಿ ಚಿತ್ರ ಬಾಂಬೆ ವೆಲ್ವೆಟ್ ಸುಮಾರು 120 ಕೋಟಿ ರು ವೆಚ್ಚದಲ್ಲಿ ತಯಾರಾಗಿತ್ತು. ಇದರಲ್ಲಿ 40 ಕೋಟಿ ರು ಮೊತ್ತವನ್ನು ವಿರಾಟ್ ಕೊಹ್ಲಿ ಅವರು ಹಾಕಿದ್ದರು. ಅನುರಾಗ್ ಕಶ್ಯಪ್ ನಿರ್ದೇಶನದ ಈ ಚಿತ್ರ ಬಾಕ್ಸಾಫೀಸ್ ನಲ್ಲಿ ಮುಗ್ಗರಿಸಿ ಕೇವಲ 24 ಕೋಟಿ ರು ಕಲೆಕ್ಷನ್ ಮಾಡಿತ್ತು.

Instagram ನಲ್ಲಿ ವಿಸ್ತಾರವಾಗಿ ಬರೆದ ಕೊಹ್ಲಿ

Instagram ನಲ್ಲಿ ವಿಸ್ತಾರವಾಗಿ ಬರೆದ ಕೊಹ್ಲಿ

Shame on those people who have been having a go at anushka for the longest time and connecting every negative thing to her. Shame on those people calling themselves educated. Shame on blaming and making fun of her when she has no control over what i do with my sport. If anything she has only motivated and given me more positivity.[More...]

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ - ನೋಂದಣಿ ಉಚಿತ!

English summary
A day after he single-handedly led his side into ICC World T20 semi-final with his gritty innings against Australia at Mohali, Team India's star batsman Virat Kohli on Monday condemned those who were mocking his ex-girlfriend and Bollywood actress Anushka Sharma over social media.
Please Wait while comments are loading...