'ಬ್ರೇಕಿಂಗ್ ನ್ಯೂಸ್, ಕೊಹ್ಲಿ ಜತೆ ಸೆಲ್ಫಿ ಫೋಟೊ ಸಿಕ್ತು!'

Posted By:
Subscribe to Oneindia Kannada

ಬೆಂಗಳೂರು, ಮಾರ್ಚ್ 22: 'ಬ್ರೇಕಿಂಗ್ ನ್ಯೂಸ್, ಕೊಹ್ಲಿ ಜತೆ ಸೆಲ್ಫಿ ಫೋಟೊ ಸಿಕ್ತು!'' ಹೀಗೆ ಹದಿಹರೆಯದ ಹುಡುಗಿಯೊಬ್ಬಳು ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಮಂಗಳವಾರ (ಮಾರ್ಚ್ 22) ಸಂಜೆ ಕುಣಿದಾಡುತ್ತಿದ್ದಳು.

ಟೀಂ ಇಂಡಿಯಾದ ನಂಬುಗೆಯ ಬ್ಯಾಟ್ಸ್ ಮನ್ ವಿರಾಟ್ ಕೊಹ್ಲಿ ಜತೆ ಫೋಟೊ ತೆಗೆಸಿಕೊಂಡ ಸಂಭ್ರಮ ಆಕೆಯಲ್ಲಿತ್ತು. ತಕ್ಷಣವೇ ಈ ಸಂತಸವನ್ನು ಗೆಳತಿಯೊಬ್ಬಳಿಗೆ ಫೋನ್ ಕರೆ ಮೂಲಕ ತಲುಪಿಸುತ್ತಿದ್ದಳು.[ವಿರಾಟ್ ಕೊಹ್ಲಿ-ಅನುಷ್ಕಾ ಬ್ರೇಕ್ ಅಪ್ ರಹಸ್ಯ ಬಹಿರಂಗ]

ಬೆಂಗಳೂರಿನ ಇಂಡಿಯನ್ ಪ್ರೀಮಿಯರ್ ಲೀಗ್ ತಂಡ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್ ಸಿಬಿ) ಮುನ್ನಡೆಸುವ ನಾಯಕ ವಿರಾಟ್ ಕೊಹ್ಲಿಗೆ ಎಂ. ಚಿನ್ನಸ್ವಾಮಿ ಕ್ರೀಡಾಂಗಣ ತವರು ನೆಲ. ಮಾರ್ಚ್ 23ರಂದು ಬಾಂಗ್ಲಾದೇಶ ವಿರುದ್ಧದ ಪಂದ್ಯಕ್ಕೆ ಅಭ್ಯಾಸ ನಡೆಸಲು ಬಂದ ವಿರಾಟ್ ಕೊಹ್ಲಿಯನ್ನು ಐವತ್ತಕ್ಕೂ ಅಧಿಕ ಅಭಿಮಾನಿಗಳು ಮುತ್ತಿಕೊಂಡರು.

ಚಿತ್ರಕೃಪೆ: ಸಿ.ಅಪ್ರಮೇಯ

(ಒನ್ಇಂಡಿಯಾ ಸುದ್ದಿ)

ತಾಳ್ಮೆಯಿಂದ ಎಲ್ಲರಿಗೂ ಆಟೋಗ್ರಾಫ್ ನೀಡಿದ ಕೊಹ್ಲಿ

ತಾಳ್ಮೆಯಿಂದ ಎಲ್ಲರಿಗೂ ಆಟೋಗ್ರಾಫ್ ನೀಡಿದ ಕೊಹ್ಲಿ

ಅಭಿಮಾನದ ಪ್ರೀತಿಯಲ್ಲಿ ಬಂಧಿಯಾದ ಕೊಹ್ಲಿ ಅವರು ತಾಳ್ಮೆಯಿಂದ ಎಲ್ಲರಿಗೂ ಆಟೋಗ್ರಾಫ್ ನೀಡಿ, ಸೆಲ್ಫಿ ತೆಗೆಸಿಕೊಂಡು, ಗ್ರೂಪ್ ಫೋಟೋಗೆ ಪೋಸ್ ನೀಡಿದರು.

ಅಭ್ಯಾಸ ಮುಗಿಯುವವರೆಗೂ ಕಾದ ಅಭಿಮಾನಿಗಳು

ಅಭ್ಯಾಸ ಮುಗಿಯುವವರೆಗೂ ಕಾದ ಅಭಿಮಾನಿಗಳು

ಡ್ರೆಸಿಂಗ್ ರೂಮಿನಿಂದ ಹೊರ ಬಂದ ನಂತರದ ದೃಶ್ಯ ಇದಾಗಿತ್ತು. ಅಭ್ಯಾಸ ಮುಗಿಸಿಕೊಂಡು ಕೊಹ್ಲಿ ಪೆವಿಲಿಯನ್ ಗೆ ಹಿಂತಿರುಗಿದಾಗಲೂ ಇದೆ ದೃಶ್ಯ ರಿಪೀಟ್ ಆಯಿತು.

 'ವಿ ಲವ್ ಯೂ ಕೊಹ್ಲಿ' ಎಂದ ಹುಡುಗಿಯರು

'ವಿ ಲವ್ ಯೂ ಕೊಹ್ಲಿ' ಎಂದ ಹುಡುಗಿಯರು

ಇತ್ತೀಚೆಗೆ ಕ್ರಿಸ್ ಗೇಲ್ ಪರ ಘೋಷಣೆಯಿಂದ ತುಂಬಿದ ಮೈದಾನ ಇಂದು ವಿರಾಟ್ ಕೊಹ್ಲಿ ಹೆಸರನ್ನು ಪ್ರತಿಧ್ವನಿಸುತ್ತಿತ್ತು. 'ವಿ ಲವ್ ಯೂ ಕೊಹ್ಲಿ' ಎಂದು ಹುಡುಗಿಯರು ಹೇಳುವಾಗ ಕೊಹ್ಲಿ ಅವರೆಡೆಗೆ ಸ್ಮೈಲ್ ಕೊಡದೆ ಇರಲಾಗಲಿಲ್ಲ.

'ಕೊಹ್ಲಿ ಸಾರ್' ಪ್ಲೀಸ್ ಒಂದು ಸೆಲ್ಫಿ

'ಕೊಹ್ಲಿ ಸಾರ್' ಪ್ಲೀಸ್ ಒಂದು ಸೆಲ್ಫಿ

ಇನ್ನು ಕೆಲವರು 'ಕೊಹ್ಲಿ ಸಾರ್' ಪ್ಲೀಸ್ ಒಂದು ಸೆಲ್ಫಿ ಎಂದು ಗೋಗರೆದರು. ಭದ್ರತಾ ಸಿಬ್ಬಂದಿಗೆ ಮಾತ್ರ ಅಭಿಮಾನಿಗಳನ್ನು ನಿಯಂತ್ರಿಸುವುದು ತಲೆನೋವಿನ ಕೆಲಸವಾಗಿತ್ತು.

ಪಾಕಿಸ್ತಾನ ವಿರುದ್ಧ ಭರ್ಜರಿ ಅರ್ಧಶತಕ

ಪಾಕಿಸ್ತಾನ ವಿರುದ್ಧ ಭರ್ಜರಿ ಅರ್ಧಶತಕ

ಪಾಕಿಸ್ತಾನ ವಿರುದ್ಧ ಭರ್ಜರಿ ಅರ್ಧಶತಕ ಸಿಡಿಸಿ ಉತ್ತಮ ಲಯದಲ್ಲಿರುವ ವಿರಾಟ್ ಕೊಹ್ಲಿ ಅವರು ತಮ್ಮ ನೆಚ್ಚಿನ ಮೈದಾನದಲ್ಲಿ ಅಮೋಘ ಪ್ರದರ್ಶನ ನೀಡುತ್ತಾರೆ ಎಂಬ ಭರವಸೆ ಅಭಿಮಾನಿಗಳಲ್ಲಿದೆ.
ಚಿತ್ರಗಳ ಕೃಪೆ: ಸಿ.ಅಪ್ರಮೇಯ

ಮಾರ್ಚ್ 23ರಂದು ಬಾಂಗ್ಲಾದೇಶ ವಿರುದ್ಧದ ಪಂದ್ಯ

ಮಾರ್ಚ್ 23ರಂದು ಬಾಂಗ್ಲಾದೇಶ ವಿರುದ್ಧದ ಪಂದ್ಯ

ಬೆಂಗಳೂರಿನ ಇಂಡಿಯನ್ ಪ್ರೀಮಿಯರ್ ಲೀಗ್ ತಂಡ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್ ಸಿಬಿ) ಮುನ್ನಡೆಸುವ ನಾಯಕ ವಿರಾಟ್ ಕೊಹ್ಲಿಗೆ ಎಂ. ಚಿನ್ನಸ್ವಾಮಿ ಕ್ರೀಡಾಂಗಣ ತವರು ನೆಲ. ಮಾರ್ಚ್ 23ರಂದು ಬಾಂಗ್ಲಾದೇಶ ವಿರುದ್ಧದ ಪಂದ್ಯಕ್ಕೆ ಅಭ್ಯಾಸ ನಡೆಸಲು ಬಂದ ವಿರಾಟ್ ಕೊಹ್ಲಿಯನ್ನು ಐವತ್ತಕ್ಕೂ ಅಧಿಕ ಅಭಿಮಾನಿಗಳು ಮುತ್ತಿಕೊಂಡರು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Virat Kohli is sweating it out, taking catches on the outfield of M Chinnaswamy Stadium on Tuesday (March 22). Around 50 fans at the boundary, scream at the top of their voices to grab his attention. But Kohli carries on with his job.
Please Wait while comments are loading...