ಕ್ರಿಸ್ ಗೇಲ್ ದಾಖಲೆ ಚೂರು ಚೂರು ಮಾಡಿದ ವಿರಾಟ್

By: ಕ್ರಿಕೆಟ್ ಡೆಸ್ಕ್
Subscribe to Oneindia Kannada

ಮೊಹಾಲಿ, ಮಾರ್ಚ್ 28 : ಭಾರತದ ಸ್ಫೋಟಕ ಬ್ಯಾಟ್ಸ್ ಮನ್ ವಿರಾಟ್ ಕೊಹ್ಲಿ ಅವರು ರನ್ ಚೇಸ್ ಮಾಡಿದರೆ ಒಂದಲ್ಲ ಒಂದು ದಾಖಲೆಗಳು ನುಚ್ಚು ನೂರಾಗುತ್ತವೆ. ಆಸ್ಟ್ರೇಲಿಯಾ ವಿರುದ್ಧ ಗೆಲುವಿನ ರೂವಾರಿ ಎನಿಸಿದ ಕೋಹ್ಲಿ ಮತ್ತೊಂದು ದಾಖಲೆಯನ್ನು ನಿರ್ಮಿಸಿದ್ದಾರೆ.

ವಿಶ್ವ ಟಿ20: ತಂಡಗಳು | ವೇಳಾಪಟ್ಟಿ | ಗ್ಯಾಲರಿ |ಟೂರ್ನಿಗೆ ಫುಲ್ ಗೈಡ್

ಮಾರ್ಚ್ 27 ರಂದು ಮೊಹಾಲಿಯಲ್ಲಿ ಆಸ್ಟ್ರೇಲಿಯಾ ವಿರುದ್ಧದ ಮಾಡು ಇಲ್ಲವೇ ಮಡಿ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಅವರು 51 ಎಸೆತಗಳನ್ನು ಎದುರಿಸಿ ಭರ್ಜರಿ 82 ರನ್ ಬಾರಿಸುವ ಮೂಲಕ ವೆಸ್ಟ್ ಇಂಡೀಸ್ ಸಿಕ್ಸರ್ ಕಿಂಗ್ ಕ್ರಿಸ್ ಗೇಲ್ ಹೆಸರಲ್ಲಿದ್ದ ದಾಖಲೆಯನ್ನು ಬದಿಗೊತ್ತಿದ್ದಾರೆ. ಟಿ20 ಕ್ರಿಕೆಟ್ ನಲ್ಲಿ ಅತೀ ವೇಗದ 1500 ರನ್ ಗಳಿಸಿದ ದಾಖಲೆಯನ್ನು 27 ವರ್ಷದ ಡೆಲ್ಲಿ ಡ್ಯಾಷರ್ ವಿರಾಟ್ ಕೊಹ್ಲಿ ಮುರಿದಿದ್ದಾರೆ. [ವಿಶ್ವ ಟಿ20: ಸೆಮಿಫೈನಲ್ ಪಂದ್ಯ ಎಲ್ಲಿ? ಫುಲ್ ವೇಳಾಪಟ್ಟಿ]

Virat Kohli breaks Chris Gayle's record in Mohali

ಒಟ್ಟು 39 ಇನಿಂಗ್ಸ್ ಗಳನ್ನು ಆಡಿದ ವಿರಾಟ್ ಟ್ವೆಂಟಿ20 ಕ್ರಿಕೆಟ್ ನಲ್ಲಿ 1500 ರನ್ ಮಾಡಿದ ಮೊದಲ ಭಾರತದ ಆಟಗಾರ ಎನಿಸಿಕೊಂಡಿದ್ದಾರೆ. ಇದರಿಂದ ಚುಟುಕು ಕ್ರಿಕೆಟ್ ನಲ್ಲಿ 55.42 ಸರಾಸರಿಯನ್ನು ಪಡೆದುಕೊಂಡು ಅಗ್ರಸ್ಥಾನದಲ್ಲಿದ್ದಾರೆ. [ಆಸೀಸ್ ವಿರುದ್ಧ ಭಾರತಕ್ಕೆ' ವಿರಾಟ್' ಜಯ, ಸೆಮೀಸ್ ಗೆ ಲಗ್ಗೆ]

ಇನ್ನೂ ಆಸ್ಟ್ರೇಲಿಯಾ ವಿರುದ್ಧದ ಟಿ20 ಕ್ರಿಕೆಟ್ ನಲ್ಲಿ ಸತತ 4 ಅರ್ಧಶತಗಳನ್ನು ಭಾರಿಸಿದ ಭಾರತದ ಮೊದಲ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.[ಕೊಹ್ಲಿಯನ್ನು ಕಿಚಾಯಿಸಿದ್ದ ಜಾನ್ಸನ್ ಬಾಯಲ್ಲಿ ಗುಣಗಾನ]

ವಿರಾಟ್ ಅಬ್ಬರದ ಬ್ಯಾಟಿಂಗ್ ನಿಂದ ಆಸೀಸ್ ವಿರುದ್ಧ ಭಾರತ ಜಯಗಳಿಸಿ ಸೆಮಿ ಫೈನಲ್ ನಲ್ಲಿ ಮಾರ್ಚ್ 31 ರಂದು ಮುಂಬೈನ ವಾಂಖೆಡೆ ಮೈದಾನದಲ್ಲಿ ವೆಸ್ಟ್ ಇಂಡೀಸ್ ತಂಡವನ್ನು ಎದುರಿಸಲಿದೆ. [ಅನುಷ್ಕಾ ಮೇಲೆ ಗೂಬೆ ಕೂರಿಸ್ಬೇಡಿ ಪ್ಲೀಸ್: ವಿರಾಟ್ ತರಾಟೆ]


(ಒನ್ಇಂಡಿಯಾ ಸುದ್ದಿ)

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
During the course of this match-winning innings, the right-hander broke West Indian explosive opener Chris Gayle's record
Please Wait while comments are loading...