ಸಚಿನ್, ರಿಚರ್ಡ್ಸ್,ಲಾರಾಗಿಂತ ಕೊಹ್ಲಿ ಬೆಸ್ಟ್: ಕಪಿಲ್

Posted By:
Subscribe to Oneindia Kannada

ನವದೆಹಲಿ, ಮಾರ್ಚ್ 23: ಟೀಂ ಇಂಡಿಯಾದ ಮಧ್ಯಮ ಕ್ರಮಾಂಕದ ಬ್ಯಾಟ್ಸ್ ಮನ್ ವಿರಾಟ್ ಕೊಹ್ಲಿ ಅವರು ಸಚಿನ್ ತೆಂಡೂಲ್ಕರ್, ಬ್ರಿಯಾನ್ ಲಾರಾ, ವಿವಿಯನ್ ರಿಚರ್ಡ್ಸ್ ಗಿಂತ ಉತ್ತಮ ಬ್ಯಾಟ್ಸ್ ಮನ್ ಎಂದು ಮಾಜಿ ಕ್ರಿಕೆಟರ್ ಕಪಿಲ್ ದೇವ್ ಹೇಳಿದ್ದಾರೆ.

ವಿಶ್ವ ಟಿ20: ತಂಡಗಳು | ವೇಳಾಪಟ್ಟಿ | ಗ್ಯಾಲರಿ |ಟೂರ್ನಿಗೆ ಫುಲ್ ಗೈಡ್

1983ರ ವಿಶ್ವ ಕಪ್ ವಿಜೇತ ತಂಡದ ನಾಯಕ ಕಪಿಲ್ ದೇವ್ ಅವರು 'ಮಿಡ್ ಡೇ' ಗಾಗಿ ಬರೆದ ಅಂಕಣದಲ್ಲಿ ಟೀಂ ಇಂಡಿಯಾದ ಟೆಸ್ಟ್ ನಾಯಕ ವಿರಾಟ್ ಕೊಹ್ಲಿ ಅವರಿಗೆ ವಿವಿಯನ್ ರಿಚರ್ಡ್ಸ್, ರಿಕಿ ಪಾಂಟಿಂಗ್, ಬ್ರಿಯಾನ್ ಲಾರಾ ಹಾಗೂ ಸಚಿನ್ ತೆಂಡೂಲ್ಕರ್ ಅವರಿಗಿಂತ ಹೆಚ್ಚಿನ ರೇಟಿಂಗ್ ನೀಡಿದ್ದಾರೆ. ['ಬ್ರೇಕಿಂಗ್ ನ್ಯೂಸ್, ಕೊಹ್ಲಿ ಜತೆ ಸೆಲ್ಫಿ ಫೋಟೊ ಸಿಕ್ತು!']

27 ವರ್ಷ ವಯಸ್ಸಿನ ಬ್ಯಾಟ್ಸ್ ಮನ್ ವಿರಾಟ್ ಕೊಹ್ಲಿ ಅವರು ಶನಿವಾರ(ಮಾರ್ಚ್ 19) ಪಾಕಿಸ್ತಾನ ವಿರುದ್ಧ 55 ರನ್ ಚೆಚ್ಚಿದ ಮೇಲೆ ವಿಶ್ವದ ಅನೇಕ ದಿಗ್ಗಜರಿಂದ ಹೊಗಳಿಕೆ ಪಡೆದುಕೊಂಡಿದ್ದರು.

Virat Kohli better than Sachin

ಸದ್ಯಕ್ಕೆ ಚುಟುಕು ಕ್ರಿಕೆಟ್ ನಲ್ಲಿ ಜೋ ರೂಟ್, ಕೇನ್ ವಿಲಿಯಮ್ಸನ್ ಅವರು ಉತ್ತಮ ಲಯದಲ್ಲಿದ್ದಾರೆ. ಆದರೆ, ವಿರಾಟ್ ಕೊಹ್ಲಿ ಅವರು ತಮ್ಮ ಕೌಶಲ್ಯ, ಪಂದ್ಯ ಗೆಲ್ಲುವ ಛಾತಿಯ ಮೂಲಕ ಎಲ್ಲರಿಗಿಂತ ಮುಂದಿದ್ದಾರೆ ಎಂದು ಕಪಿಲ್ ದೇವ್ ಬರೆದುಕೊಂಡಿದ್ದಾರೆ. ಸಚಿನ್ ತೆಂಡೂಲ್ಕರ್, ವಿವಿಯನ್ ರಿಚರ್ಡ್ಸ್ ಅವರ ಎಲ್ಲಾ ದಾಖಲೆಗಳನ್ನು ಮುರಿಯುವ ಸಾಮರ್ಥ್ಯ ವಿರಾಟ್ ಕೊಹ್ಲಿ ಅವರಿಗಿದೆ ಎಂದು ಕಪಿಲ್ ಹೇಳಿದ್ದಾರೆ. (ಒನ್ಇಂಡಿಯಾ ಸುದ್ದಿ)

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
India's flamboyant Virat Kohli might have recieved praises from several cricket experts and fans, but India's 1983 World Cup-winning skipper, Kapil Dev has perhaps given him the best complement ever.
Please Wait while comments are loading...