ಇಂಡಿಯಾ-ಪಾಕ್ ಹೈವೋಲ್ಟೇಜ್ ಪಂದ್ಯಕ್ಕೆ ರೆಫ್ರಿಗಳು ಯಾರು?

By: ರಮೇಶ್ ಬಿ
Subscribe to Oneindia Kannada

ಬೆಂಗಳೂರು.ಫೆ.25. ಮುಂದಿನ ತಿಂಗಳು ಮಾರ್ಚ್ ನಲ್ಲಿ ಪ್ರಾರಂಭವಾಗಲಿರುವ ವಿಶ್ವ ಟಿ20 ಕ್ರಿಕೆಟ್ ಟೂರ್ನಿಯಲ್ಲಿ ಬಹಳ ವರ್ಷಗಳ ನಂತರ ಮುಖಾಮುಖಿಯಾಗಲಿರುವ ಭಾರತ ಮತ್ತು ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನ ನಡುವಿನ ತುರುಸಿನ ಪಂದ್ಯಕ್ಕೆ ತೀರ್ಪುಗಾರರನ್ನು ನೇಮಿಸಲಾಗಿದೆ ಎಂದು ಅಂತಾರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ (ಐಸಿಸಿ) ತಿಳಿಸಿದೆ.

ಮಾರ್ಚ್ 19 (ಶನಿವಾರ) ಹಿಮಾಚಲ್ ಪ್ರದೇಶ್ ಕ್ರಿಕೆಟ್ ಅಸೋಸಿಯೇಶನ್ (ಎಚ್.ಪಿ.ಸಿ.ಎ) ಧರ್ಮಶಾಲಾ ಮೈದಾನದಲ್ಲಿ ನಡೆಯಲಿರುವ ಭಾರತ ಮತ್ತು ಪಾಕಿಸ್ತಾನ ನಡುವಿನ ಕ್ರಿಕೆಟ್ ಪಂದ್ಯಕ್ಕೆ ದಕ್ಷಿಣ ಆಫ್ರಿಕದ ಅಂಪೈರ್ ವರೈಸ್ ಇರಾಸ್ಮಸ್, ಮತ್ತು ಶ್ರೀಲಂಕಾದ ಕುಮಾರ್ ಧರ್ಮಸೇನಾ ಈ ಇಬ್ಬರನ್ನು ಮೈದಾನದ ತೀರ್ಪುಗಾರರಾಗಿ ನೇಮಕ ಮಾಡಲಾಗಿದೆ. [ಟಿ20 ವಿಶ್ವ ಕಪ್ ಟೂರ್ನಿಗೆ ಭಾರತದ 6 ಅಂಪೈರ್ ಗಳು]

World T20: Umpires named for India-Pakistan contest in Dharamsala

ಶ್ರೀಲಂಕಾದ ಅಂಪೈರ್ ರಂಜನ್ ಮದುಗಲೆ ಅವರನ್ನು ಮ್ಯಾಚ್ ರೆಫರಿಯಾಗಿ ನೇಮಕ ಮಾಡಿದ್ದಾರೆ. ಇಂಗ್ಲೆಂಡ್ ಅಂಪೈರ್ ಲಿಜೇಲ್ ಲಾಂಗ್ ಅವರನ್ನು ಮೂರನೇ ಅಂಪೈರ್ ಮತ್ತು ರಿಚರ್ಡ್ ಇಲ್ಲಿಗ್ವರ್ತ್ ಅವರನ್ನು ಟಿವಿ ತೀರ್ಪುಗಾರರಾಗಿ ಆಯ್ಕೆ ಮಾಡಲಾಗಿದೆ.

ಕಳೆದ ವರ್ಷ 2015 ರ ವಿಶ್ವ ಕಪ್ ಅಡಿಲೇಡ್ ನಲ್ಲಿ ನಡೆದ ಪಾಕಿಸ್ತಾನ ಮತ್ತು ಭಾರತ ನಡುವಿನ ಪಂದ್ಯದ ಅಂಪೈರ್ ಗಳ ನೇತೃತ್ವವನ್ನು ಮದುಗಲೆ ಅವರು ವಹಿಸಿಕೊಂಡಿದ್ದರು. ಭಾರತ ಮತ್ತು ಪಾಕಿಸ್ತಾನ ಈ ಎರಡು ತಂಡಗಳು ತಲಾ ಒಂದು ಬಾರಿ ಅಂತರಾಷ್ಟ್ರೀಯ ಟಿ-20 ವಿಶ್ವ ಕಪ್ ಗೆದ್ದುಕೊಂಡಿವೆ.

ದಕ್ಷಿಣ ಆಫ್ರಿಕದಲ್ಲಿ 2007 ರ ಟಿ-20 ವಿಶ್ವಕಪ್ ಫೈನಲ್ ಪಂದ್ಯದಲ್ಲಿ ಭಾರತ ತಂಡ ಪಾಕಿಸ್ತಾನ ತಂಡವನ್ನು ಸೋಲಿಸಿ ಚಾಂಪಿಯನ್ ಆಗಿತ್ತು. ಇಂಗ್ಲೆಂಡ್ ನಲ್ಲಿ ನಡೆದ 2009 ರ ವಿಶ್ವ ಕಪ್ ಫೈನಲ್ ಪಂದ್ಯದಲ್ಲಿ ಪಾಕಿಸ್ತಾನ ಶ್ರೀಲಂಕಾ ತಂಡವನ್ನು ಸೋಲಿಸಿ 2009 ರ ವಿಶ್ವ ಕಪ್ ತನ್ನ ಮಡಿಲಿಗೆ ಹಾಕಿಕೊಂಡಿತ್ತು.[ವಿಶ್ವ ಟಿ20: ಲಕ್ಕಿ ಫ್ಯಾನ್ಸಿಗೆ ಸಿಗಲಿದೆ ಲಾಟರಿ ಮೂಲಕ ಟಿಕೆಟ್]

ಮಾರ್ಚ್ 19 ರ ಪಂದ್ಯಕ್ಕೆ ನೇಮಕವಾದ ಅಧಿಕಾರಿಗಳು

* ಮ್ಯಾಚ್ ರೆಫ್ರಿ- ರಂಜನ್ ಮದುಗಲೆ(ಶ್ರೀಲಂಕಾ)

ಫೀಲ್ಡ್ ಅಂಪೈರ್ ಗಳು
* ಮರಾಯಿಸ್ ಎರಾಸ್ಮಸ್(ದಕ್ಷಿಣ ಆಫ್ರಿಕಾ)
* ಕುಮಾರ್ ಧರ್ಮಸೇನ (ಶ್ರೀಲಂಕಾ)

ಮೂರನೇ ಅಂಪೈರ್
* ನಿಜೆಲ್ ಲಾಂಗ್(ಇಂಗ್ಲೆಂಡ್)
ನಾಲ್ಕನೇ ಅಂಪೈರ್
ರಿಚರ್ಡ್ ಇಲ್ಲಿಂಗ್ ಗ್ರ್ವೌತ್ (ಇಂಗ್ಲೆಂಡ್)
(ಒನ್ಇಂಡಿಯಾ ಸುದ್ದಿ)

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
The International Cricket Council (ICC) today (February 25) named the match officials for the high voltage India-Pakistan contest at the World Twenty20 tournament next month.
Please Wait while comments are loading...