ವಿಶ್ವ ಟಿ20: ಸೆಮೀಸ್, ಭಾರತದ ಪಂದ್ಯಕ್ಕೆ ಇಂಗ್ಲೆಂಡ್ ಅಂಪೈರ್ಸ್

Posted By:
Subscribe to Oneindia Kannada

ಮುಂಬೈ, ಮಾರ್ಚ್ 30: ವಿಶ್ವ ಟಿ20 ಕ್ರಿಕೆಟ್ ಟೂರ್ನಮೆಂಟ್ ನ ಸೆಮಿಫೈನಲ್ ಪಂದ್ಯಗಳಿಗೆ ಮ್ಯಾಚ್ ರೆಫ್ರ್ತಿ, ಮೈದಾನದ ಅಂಪೈರ್ ಗಳ ಆಯ್ಕೆ ಪಟ್ಟಿಯನ್ನು ಮಂಗಳವಾರ ಅಂತಾರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ (ಐಸಿಸಿ) ಪ್ರಕಟಿಸಿದೆ. ಭಾರತದ ಸೆಮಿಫೈನಲ್ ಪಂದ್ಯಕ್ಕೆ ಇಂಗ್ಲೆಂಡಿನ ಅಂಪೈರ್ ಗಳು ಕಾರ್ಯನಿರ್ವಹಿಸಲಿದ್ದಾರೆ.

ವಿಶ್ವ ಟಿ20: ತಂಡಗಳು | ವೇಳಾಪಟ್ಟಿ | ಗ್ಯಾಲರಿ |ಟೂರ್ನಿಗೆ ಫುಲ್ ಗೈಡ್

ಮಾರ್ಚ್ 30 ಬುಧವಾರ ದೆಹಲಿಯಲ್ಲಿ ನ್ಯೂಜಿಲೆಂಡ್ ಮತ್ತು ಇಂಗ್ಲೆಂಡ್ ನಡುವಣ ಮೊದಲ ಸೆಮಿಫೈನಲ್ ಹಾಗೂ ಮಾರ್ಚ್ 31 ಗುರುವಾರ ಮುಂಬೈನಲ್ಲಿ ನಡೆಯಲಿರುವ ಭಾರತ ಮತ್ತು ವೆಸ್ಟ್ ಇಂಡೀಸ್ ನಡುವಿನ ಎರಡನೇ ಸೆಮಿಫೈನಲ್ ಪಂದ್ಯಕ್ಕೆ ಮ್ಯಾಚ್ ರೆಫರಿ, ಮೈದಾನ ಅಂಪೈರ್, 3ನೇ ಅಂಪೈರ್ ಗಳನ್ನು ಐಸಿಸಿ ಆಯ್ಕೆ ಮಾಡಿದೆ.[ಆಸೀಸ್ ವಿರುದ್ಧ ಭಾರತಕ್ಕೆ' ವಿರಾಟ್' ಜಯ, ಸೆಮೀಸ್ ಗೆ ಲಗ್ಗೆ]

ಇನ್ನೂ ಏ.3 ರಂದು ಈಡನ್ ಗಾರ್ಡನ್ ನಲ್ಲಿ ನಡೆಯುವ ಫೈನಲ್ ಪಂದ್ಯಕ್ಕೆ ಏಪ್ರಿಲ್ 01 ರಂದು ಅಂಪೈರ್ ಗಳ ಆಯ್ಕೆ ಪಟ್ಟಿಯನ್ನು ಬಿಡುಗಡೆ ಮಾಡಲಾಗುವುದು ಎಂದು ಐಸಿಸಿ ತಿಳಿಸಿದೆ. [ಭಾರತ-ವಿಂಡೀಸ್ ಕದನ ಆರಂಭಕ್ಕೂ ಮುನ್ನ ಓದಿರಿ!]

World T20: Umpires, match referees named for semi-finals

ಮೊದಲ ಸೆಮೀಸ್ ನಲ್ಲಿ ಇಂಗ್ಲೆಂಡ್-ನ್ಯೂಜಿಲೆಂಡ್ ಪಂದ್ಯಕ್ಕೆ

* ಕುಮಾರ್ ಧರ್ಮಸೇನಾ (ಶ್ರೀಲಂಕಾ), ರಾಡ್ ಟಕ್ಕರ್(ಆಸ್ಟ್ರೇಲಿಯಾ)- ಮೈದಾನದ ಅಂಪೈರ್ ಗಳು.
* ಬ್ರೂಸ್ ಆಕ್ಸ್ ಫರ್ಡ್ (ಆಸ್ಟ್ರೇಲಿಯಾ), 3ನೇ ಅಂಪೈರ್.
* ಜೋಯಿಲ್ ವಿಲ್ಸನ್ (ಆಸ್ಟೇಲಿಯಾ) 4ನೇ ಅಂಪೈರ್.
* ಡೇವಿಡ್ ಬೂನ್ ಮ್ಯಾಚ್ ರೆಫರಿ. [ಮುನ್ನೋಟ: ಭಾರತ- ವೆಸ್ಟ್ ಇಂಡೀಸ್ ಕದನ ಸ್ವಾರಸ್ಯ]

31 ರಂದು ಮುಂಬೈನಲ್ಲಿ ನಡೆಯುವ ಎರಡನೇ ಸೆಮೀಸ್ ಭಾರತ- ವೆಸ್ಟ್ ಇಂಡೀಸ್ ಪಂದ್ಯಕ್ಕೆ.

* ರಿಚರ್ಡ್ ಕೆಟೆಲ್ ಬರೋ(ಇಂಗ್ಲೆಂಡ್), ಇಯಾನ್ ಗೌಲ್ಡ್ (ಇಂಗ್ಲೆಂಡ್) ಮೈದಾನದ ಅಂಪೈರ್ ಗಳು.
* ಮರೈಸ್ ಇರಾಸ್ಕಸ್ (ದಕ್ಷಿಣ ಆಫ್ರಿಕಾ) 3ನೇ ಅಂಪೈರ್.
* ಮೈಕಲ್ ಗೌಫ್ (ಇಂಗ್ಲೆಂಡ್) 4ನೇ ಅಂಪೈರ್.
* ಕ್ರಿಸ್ ಬ್ರಾಡ್(ಇಂಗ್ಲೆಂಡ್) ಮ್ಯಾಚ್ ರೆಫರಿ.
(ಒನ್ಇಂಡಿಯಾ ಸುದ್ದಿ)

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
The International Cricket Council (ICC) today (March 29) announced the umpires and match referees for the semi-finals of the World T20.
Please Wait while comments are loading...