ಟ್ವೀಟ್ಸ್ : ಭಾರತಕ್ಕೆ ಸ್ಪಿನ್ ಪಾಠ ಹೇಳಿಕೊಟ್ಟ ಕಿವೀಸ್

Posted By:
Subscribe to Oneindia Kannada

ನಾಗ್ಪುರ, ಮಾರ್ಚ್ 16: ವಿಶ್ವ ಟ್ವೆಂಟಿ20 ಟೂರ್ನಮೆಂಟಿನ ಸೂಪರ್ 10 ಹಂತದ ಮೊದಲ ಪಂದ್ಯದಲ್ಲೇ ಟೀಂ ಇಂಡಿಯಾ ಮುಗ್ಗರಿಸಿದೆ. ಸ್ಪಿನ್ ಮಾಂತ್ರಿಕರನ್ನೇ ಹೊಂದಿರುವ ಧೋನಿ ಪಡೆಗೆ ಸ್ಪಿನ್ ಅಸ್ತ್ರದ ಮೂಲಕವೇ ನ್ಯೂಜಿಲೆಂಡ್ ತಂಡ ಉತ್ತರ ನೀಡಿದೆ.

ಪಂದ್ಯದ ಸ್ಕೋರ್ ಕಾರ್ಡ್

ವಿದರ್ಭದ ಕ್ರಿಕೆಟ್ ಅಸೋಸಿಯೇಷನ್ ನ ಮೈದಾನದ ಸ್ಪಿನ್ ಪಿಚ್ ನ ಸಂಪೂರ್ಣ ಲಾಭ ಪಡೆಯುವಲ್ಲಿ ನ್ಯೂಜಿಲೆಂಡ್ ಬೌಲರ್ ಗಳು ಯಶಸ್ವಿಯಾಗಿದ್ದಾರೆ. ಮೊದಲು ಬ್ಯಾಟ್ ಮಾಡಿದ ಕಿವೀಸ್ ತಂಡ 126 ಮಾತ್ರ ಗಳಿಸಿತು. [ನಾಯಕನಾಗಿ ಎಂಎಸ್ ಧೋನಿಯಿಂದ ವಿಶ್ವ ದಾಖಲೆ]
ವಿಶ್ವ ಟಿ20: ತಂಡಗಳು | ವೇಳಾಪಟ್ಟಿ | ಗ್ಯಾಲರಿ
ಆದರೆ, ಅಲ್ಪಮೊತ್ತವನ್ನು ಚೇಸ್ ಮಾಡಲು ಆಗದೆ ತಿಣುಕಾಡಿದ ಟೀಂ ಇಂಡಿಯಾ 47ರನ್ ಗಳ ಅಂತರದ ಸೋಲು ಕಂಡಿದೆ.

ಭಾರತದ ಸೋಲಿಗೆ ಬ್ಯಾಟ್ಸ್ ಮನ್ ಗಳೇ ಕಾರಣ ಎಂದು ನಾಯಕ ಎಂಎಸ್ ಧೋನಿ ಹೇಳಿದ್ದಾರೆ. ಆದರೆ, ಕಿವೀಸ್ ತಂಡದಲ್ಲಿದ್ದ ಕಿಚ್ಚು, ಭಾರತ ತಂಡದಲ್ಲಿರಲಿಲ್ಲ ಎಂಬುದು ಕ್ರೀಡಾಭಿಮಾನಿಗಳಿಗೆ ತಕ್ಷಣಕ್ಕೆ ಗೊತ್ತಾಗಿದೆ. ಕಿವೀಸ್ ವಿರುದ್ಧ ಸೋತರೆ ಕಪ್ ಗೆಲ್ಲುವುದು ಗ್ಯಾರಂಟಿ ಎನ್ನುವ ಟ್ವೀಟ್ ಗಳು ಇಲ್ಲಿವೆ.[ಭಾರತ ವಿರುದ್ಧ ನ್ಯೂಜಿಲೆಂಡಿಗೆ 47 ರನ್ ಗಳ ಜಯ]

ಟೀಂ ಇಂಡಿಯಾಗೆ ಸೋಲಿನ ಆಘಾತ

ಟೀಂ ಇಂಡಿಯಾಗೆ ಸೋಲಿನ ಆಘಾತ

ಟೀಂ ಇಂಡಿಯಾ ಸೋಲಿನ ಆಘಾತಕ್ಕೆ ಸಿಲುಕಲು ಕಾರಣವೇನು? ಆತಿಯಾದ ಆತ್ಮವಿಶ್ವಾಸವೇ?, ಕಿವೀಸ್ ಬೌಲರ್ಸ್ ಪಿಚ್ ಲಾಭ ಪಡೆದುಕೊಂಡಿದ್ದೆ? ಅಥವಾ ಬ್ಯಾಟ್ಸ್ ಮನ್ ಗಳ ಬೇಜವಾಬ್ದಾರಿತನವೇ? ಎಂಬುದರ ಬಗ್ಗೆ ಟ್ವಿಟ್ಟರ್ ನಲ್ಲಿ ಚರ್ಚೆ ನಡೆದಿದೆ.

ಪಾಕಿಸ್ತಾನಕ್ಕೆ ಖುಷಿಯಾಗಲು ಕಾರಣವಿದೆ

ಭಾರತ ಸೋತಿದ್ದು ಪಾಕಿಸ್ತಾನಕ್ಕೆ ಖುಷಿಯಾಗಿರುತ್ತದೆ. ಆದರೆ, 83ರನ್ನಿಗೂ ಕಡಿಮೆ ಮೊತ್ತಕ್ಕೆ ಔಟ್ ಆಗಿದ್ದು ಇನ್ನೂ ಖುಷಿ ಕೊಟ್ಟಿರುತ್ತೆ.

79ರನ್ ಟೀಂ ಇಂಡಿಯಾದ ಕಡಿಮೆ ಮೊತ್ತ

ನ್ಯೂಜಿಲೆಂಡ್ ವಿರುದ್ಧ 79ರನ್ ಟೀಂ ಇಂಡಿಯಾದ ಕಡಿಮೆ ಮೊತ್ತವಾಗಿದೆ. ಈ ಮುಂಚೆ ಶ್ರೀಲಂಕಾ ವಿರುದ್ಧ 82ಕ್ಕೆ ಭಾರತ ಆಲೌಟ್ ಆಗಿತ್ತು.

ಮೆಕಲಮ್, ಕ್ರೋವ್ ಗೆ ಈ ಪಂದ್ಯ ಅರ್ಪಣೆ

ಇತ್ತೀಚೆಗೆ ನಿವೃತ್ತಿಯಾದ ಬ್ರೆಂಡನ್ ಮೆಕಲಮ್, ನಿಧನರಾದ ಮಾರ್ಟಿನ್ ಕ್ರೋವ್ ಗೆ ಈ ಪಂದ್ಯ ಅರ್ಪಣೆಯಾಗಬೇಕಿದೆ.

ಸ್ಪಿನ್ನರ್ ಗಳಿಗೆ 9 ವಿಕೆಟ್ ಸೂಪರ್

ಸ್ಪಿನ್ನರ್ ಗಳಿಗೆ 9 ವಿಕೆಟ್ ಸೂಪರ್, ಭಾರತಕ್ಕೆ ಸ್ಪಿನ್ ಪಾಠ ಹೇಳಿಕೊಟ್ಟ ನ್ಯೂಜಿಲೆಂಡ್.

ಯಾವ ತಂಡದ ಸ್ಪಿನ್ನರ್ ಗಳು ಮೇಲುಗೈ

ಭಾರತ ವಿರುದ್ಧ ಯಾವ ತಂಡದ ಸ್ಪಿನ್ನರ್ ಗಳು ಮೇಲುಗೈ ಸಾಧಿಸಿದ್ದಾರೆ ಎಂಬ ವಿವರ ಇಲ್ಲಿದೆ.

ಕಿವೀಸ್ ವಿರುದ್ಧ ಸೋಲುವುದು ಶುಭಶಕುನ

ಕಿವೀಸ್ ವಿರುದ್ಧ ಸೋಲುವುದು ಶುಭಶಕುನ ಬೇಕಾದರೆ 2007ರ ವಿಶ್ವಕಪ್ ಮೆಲುಕು ಹಾಕಿ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ - ನೋಂದಣಿ ಉಚಿತ!

English summary
New Zealand stunned hosts India in the opening World Twenty20 game at the VCA Stadium, in Nagpur, on March 15. As India batters were bundled out at 79 in 18 overs, fans took to Twitter to express their angst over shocking defeat of their favourite side.
Please Wait while comments are loading...