ವಿಶ್ವ ಟಿ20: ಲಕ್ಕಿ ಫ್ಯಾನ್ಸಿಗೆ ಸಿಗಲಿದೆ ಲಾಟರಿ ಮೂಲಕ ಟಿಕೆಟ್

By: ರಮೇಶ್ ಬಿ
Subscribe to Oneindia Kannada

ಬೆಂಗಳೂರು. ಫೆ.25. ಮಾರ್ಚ್ ನಲ್ಲಿ ಪ್ರಾರಂಭವಾಗಲಿರುವ ವಿಶ್ವ ಟಿ20 ಕ್ರಿಕೆಟ್ ಭಾರತದ ಪಂದ್ಯಗಳ ವೀಕ್ಷಣೆಗೆ ಫೆ.24 ಮಧ್ಯಾಹ್ನ 12 ಗಂಟೆಯಿಂದ ಟಿಕೆಟ್ ಗಳನ್ನು ಆನ್ ಲೈನ್ ಮೂಲಕ ನೀಡಲಾಗುತ್ತಿದೆ.

ಟಿಕೆಟ್ ಗಳನ್ನು ಬುಕ್ ಮಾಡಿ ನಿಮ್ಮ ನೆಚ್ಚಿ ಆಟಗಾರರ ಆಟವನ್ನು ಕಣ್ತುಂಬ ನೋಡುವ ಸದಾವಕಾಶವನ್ನು ಪಡೆದುಕೊಳ್ಳಿ ಎಂದು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ತಿಳಿಸಿದೆ. ಜೊತೆಗೆ ಹೊಸ ಲಾಟರಿ ವ್ಯವಸ್ಥೆ ಮೂಲಕ ಅದೃಷ್ಟವಂತ ಅಭಿಮಾನಿಗಳಿಗೆ ಟಿಕೆಟ್ ಸಿಗಲಿದೆ.

ಮಾರ್ಚ್ 8 ರಿಂದ ಏಪ್ರಿಲ್ 3ರ ವರೆಗೆ ಭಾರತದಲ್ಲಿ ನಡೆಯುವ ವಿಶ್ವ ಟಿ20 ಕ್ರಿಕೆಟ್ ಪಂದ್ಯಗಳು ಬೆಂಗಳೂರು, ಕೊಲ್ಕತ್ತಾ, ಚೆನೈ, ಧರ್ಮಶಾಲಾ, ಮೊಹಾಲಿಯಲ್ಲಿ ನಡೆಯಲಿದೆ.

'Unique lottery system' for India matches

ಭಾರತದ ಪಂದ್ಯಗಳು ಮತ್ತು ಸೆಮಿಫೈನಲ್ ಹಾಗೂ ಫೈನಲ್ ಪಂದ್ಯಗಳನ್ನು ಮಾತ್ರ ವೀಕ್ಷಣೆ ಮಾಡಲು ಬುಧವಾರ ಮಧ್ಯಾನ್ಹ 12 ಗಂಟೆಯಿಂದ ಅಂತರ್ಜಾಲದಲ್ಲಿ ಟಿಕೆಟ್ ಗಳನ್ನು ಮಾರಾಟ ಮಾಡಲಾಗುತ್ತಿದೆ ಎಂದು ಬಿಸಿಸಿಐ ಹೇಳಿದೆ.

ಪುರುಷರಿಗೆ ಮತ್ತು ಮಹಿಳೆಯರಿಗೆ ಸರಿ ಸಮಾನತೆ ಕಾಪಾಡಲು ಸೆಮಿ ಫೈನಲ್ ಹಾಗು ಫೈನಲ್ ಪಂದ್ಯಗಳಿಗೆ ಒಬ್ಬರಿಗೆ ಆರು ಟಿಕೆಟ್ ಗಳನ್ನು ಮಾತ್ರ ನೀಡಲಾಗುತ್ತದೆ. ಫೆ. 25 ರಿಂದ ರಿಜೀಸ್ಟರ್ ಆಗಿದ್ದರೆ ಕೇವಲ ಏಳು ದಿನಗಳ ವರೆಗೆ ಮಾತ್ರ ಲಾಟರಿ ಮೂಲಕ ಟಿಕೆಟ್ ಪಡೆಯಬಹುವುದು. www.icc-cricket.com ವೆಬ್ ಸೈಟ್ ನಲ್ಲಿ ಹೋಗಿ ಲಾಗಿನ್ ಆಗಿ ನೋಂದಣಿ ಮಾಡಿಕೊಳ್ಳಬೇಕು ಎಂದು ಐಸಿಸಿ ಮತ್ತು ಬಿಸಿಸಿಐ ಅಧ್ಯಕ್ಷ ಶಶಾಂಕ್ ಮನೋಹರ್ ತಿಳಿಸಿದ್ದಾರೆ. ಮುಂದಿನ ಹಂತದಲ್ಲಿ ಮುಂಬೈ, ದೆಹಲಿ ಹಾಗೂ ನಾಗ್ಪುರದ ಪಂದ್ಯಗಳಿಗೆ ಟಿಕೆಟ್ ನೀಡಿಕೆ ಮುಂದಿನ ಹಂತದಲ್ಲಿ ನಡೆಯಲಿದೆ ಎಂದು ಹೇಳಿದ್ದಾರೆ. (ಒನ್ಇಂಡಿಯಾ ಸುದ್ದಿ)

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
If you want to buy tickets online for India's matches at the ICC World Twenty20 2016, you need to have luck on your side.you have to enter a "unique lottery system" which is put in place by the Board of Control for Cricket in India
Please Wait while comments are loading...