ಮನೀಶ್ ಪಾಂಡೆ ದುರಾದೃಷ್ಟವಂತ, ಟ್ವಿಟ್ಟರ್ ಅಭಿಮತ

Posted By:
Subscribe to Oneindia Kannada

ಬೆಂಗಳೂರು, ಫೆ. 05: ಐಸಿಸಿ ವಿಶ್ವ ಟಿ20 ಹಾಗೂ ಏಷ್ಯಾಕಪ್ ಗಾಗಿ 15 ಸದಸ್ಯರ ಟೀಂ ಇಂಡಿಯಾವನ್ನು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ(ಬಿಸಿಸಿಐ) ಶುಕ್ರವಾರ ಪ್ರಕಟಿಸಿದೆ. ಆಸ್ಟ್ರೇಲಿಯಾ ವಿರುದ್ಧ ಟಿ20 ಸರಣಿ ಗೆದ್ದ ತಂಡದ ಬಹುತೇಕ ಸದಸ್ಯರೇ ಆಯ್ಕೆಯಾಗಿರುವುದರಲ್ಲಿ ಅಚ್ಚರಿಯೇನಿಲ್ಲ. ಆದರೆ, ಭಾರತದ ಮಾನ ಕಾಪಾಡಿದ ಕರ್ನಾಟಕದ ಮನೀಶ್ ಪಾಂಡೆಗೆ ಸ್ಥಾನ ಏಕೆ ಸಿಕ್ಕಿಲ್ಲ ಎಂದು ಮೈಕ್ರೋ ಬ್ಲಾಗಿಂಗ್ ತಾಣ ಟ್ವಿಟ್ಟರ್ ನಲ್ಲಿ ಕೇಳಲಾಗುತ್ತಿದೆ.

ಆಸ್ಟ್ರೇಲಿಯಾ ವಿರುದ್ಧದ ಟಿ20 ಸರಣಿ ಕ್ಲೀನ್ ಸ್ವೀಪ್ ಮಾಡುವುದಕ್ಕೂ ಮುನ್ನ ಸಿಡ್ನಿ ಏಕದಿನ ಪಂದ್ಯದಲ್ಲಿ ಕರ್ನಾಟಕದ ಮನೀಶ್ ಪಾಂಡೆ ಅವರು ಭರ್ಜರಿ ಶತಕ ಸಿಡಿಸಿ ಆಯ್ಕೆದಾರರ ಗಮನ ಸೆಳೆದಿದ್ದರು. ರಹಾನೆ ಅವರು ಸತತವಾಗಿ ಉತ್ತಮ ಪ್ರದರ್ಶನ ನೀಡುತ್ತಾ ಬಂದಿದ್ದರು. ಆದರೆ, ಮನೀಶ್ ಪಾಂಡೆಗೆ ಅವಕಾಶವೇ ನೀಡದೆ ಕಡೆಗಣಿಸಿರುವುದು ಅಭಿಮಾನಿಗಳ ಆಕ್ರೋಶಕ್ಕೆ ಕಾರಣವಾಗಿದೆ.[ಟಿ20 ವಿಶ್ವಕಪ್‌ಗೆ ಭಾರತ ತಂಡ ಪ್ರಕಟ, ಪಾಂಡೆಗೆ ಸ್ಥಾನವಿಲ್ಲ]

ಫೆಬ್ರವರಿ 9ರಿಂದ ಶ್ರೀಲಂಕಾ ವಿರುದ್ಧದ ಸರಣಿಗೆ ವಿರಾಟ್ ಕೊಹ್ಲಿಗೆ ವಿಶ್ರಾಂತಿ ನೀಡಿ ಮನೀಶ್ ಪಾಂಡೆಗೆ ಸ್ಥಾನ ಕಲ್ಪಿಸಲಾಗಿದೆ. ಈ ಸರಣಿಯಲ್ಲಿನ ಸಾಧನೆ ಪರಿಗಣಿಸಿ ಆಯ್ಕೆ ನಡೆಸಬಹುದಾಗಿತ್ತು. [ವಿಶ್ವ ಟ್ವೆಂಟಿ20 ಕ್ರಿಕೆಟ್ ಸಂಪೂರ್ಣ ವೇಳಾಪಟ್ಟಿ]

ಆದರೆ, ಫೆಬ್ರವರಿ 5ರಂದೇ ತಂಡ ಪ್ರಕಟ ಮಾಡುವ ಆತುರವಾದರೂ ಏನಿತ್ತು. ಮನೀಶ್ ಪರ ಬಂದಿರುವ ಟ್ವೀಟ್ಸ್ ಮುಂದಿದೆ ನೋಡಿ...

ಆಯ್ಕೆಗೆ ಮಾನದಂಡವೇ ಇಲ್ಲವೇ

ಆಯ್ಕೆಗೆ ಮಾನದಂಡವೇ ಇಲ್ಲವೇ

ಇತ್ತೀಚಿನ ಫಾರ್ಮ್, ಅನುಭವ, ಸಾಧನೆ ಎಲ್ಲವನ್ನು ಪರಿಗಣಿಸುವುದೇ ನಿಜವಾದರೇ ಕರ್ನಾಟಕದಿಂದ ಮನೀಶ್ ಪಾಂಡೆ ಹಾಗೂ ರಾಬಿನ್ ಉತ್ತಪ್ಪ ಸುಲಭವಾಗಿ ಯಾವುದೇ ಅಂತಾರಾಷ್ಟ್ರೀಯ ಮಟ್ಟದ ತಂಡದಲ್ಲಿ ಆಡಲು ಅರ್ಹರಾಗಿದ್ದಾರೆ. ಆಸ್ಟ್ರೇಲಿಯಾದಲ್ಲಿ ಏಕದಿನ ಸರಣಿ ನಂತರ ಟಿ20 ಸರಣಿಗೆ ಆಯ್ಕೆಯಾಗದ ಮನೀಶ್ ಪಾಂಡೆ ಮತ್ತೊಮ್ಮೆ ದುರಾದೃಷ್ಟವಂತ ಆಟಗಾರರ ಪಟ್ಟಿಯಲ್ಲಿ ಸೇರ್ಪಡೆಯಾಗಿದ್ದಾರೆ.

ಮನೀಶ್ ಪರ ಮೊದಲಿಗೆ ಪ್ರಶ್ನೆ ಮಾಡಿದ ಕಮಲ್ ಖಾನ್

ಮನೀಶ್ ಪರ ಮೊದಲಿಗೆ ಪ್ರಶ್ನೆ ಮಾಡಿದ ಸಿನಿಮಾ ವಿಮರ್ಶಕ ಕಮಲ್ ಖಾನ್

ಪವನ್ ನೇಗಿ ಆಯ್ಕೆ ಏಕೆ. ಮನೀಶ್ ಇಲ್ಲ ಏಕೆ

ಅನುಭವವಿಲ್ಲದ ಪವನ್ ನೇಗಿ ಆಯ್ಕೆ ಏಕೆ. ಭಾರತದ ಮಾನ ಕಾಪಾಡಿದ ಮನೀಶ್ ಇಲ್ಲ ಏಕೆ

ಆಯ್ಕೆಯಲ್ಲಿ ಧೋನಿ ಆಪ್ತರಿಗೆ ಮಣೆ

ಆಯ್ಕೆಯಲ್ಲಿ ಧೋನಿ ಆಪ್ತರಿಗೆ ಮಣೆ. ಐಪಿಎಲ್ ನ ಅಮಾನತಗಿರುವ ತಂಡ ಚೆನ್ನೈ ಪರ ಆಡಿದ್ದ ಏಳು ಆಟಗಾರರು ಆಯ್ಕೆಯಾಗಿದ್ದಾರೆ. ದೇಶಿ ಕ್ರಿಕೆಟ್ ಟೂರ್ನಿಗೆ ಬೆಲೆ ಇಲ್ಲದ್ದಂತಾಗಿದೆ.

ಕರ್ನಾಟಕದ ಒಬ್ಬ ಆಟಗಾರನೂ ಇಲ್ಲ

ಕರ್ನಾಟಕದ ಒಬ್ಬ ಆಟಗಾರನೂ ಇಲ್ಲ. ಪ್ರತಿಭೆಗೆ ಇಲ್ಲಿ ಬೆಲೆಯೇ ಇಲ್ಲ

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Indian squad for World T20: Manish Pandey misses out on selection despite ODI heroics in Australia. Manish Pandey truly unlucky to miss out reacts twitteraties after the team announced by BCCI today for Worlf T20 and Asia Cup.
Please Wait while comments are loading...