ವಿಶ್ವ ಟಿ20: ನೆದರ್ಲೆಂಡ್ ವಿರುದ್ಧ ಬಾಂಗ್ಲಾಕ್ಕೆ ರೋಚಕ ಜಯ

Posted By:
Subscribe to Oneindia Kannada

ಧರ್ಮಶಾಲಾ ಮಾರ್ಚ್.10: ಆರಂಭಿಕ ಆಟಗಾರ ತಮೀಮ್ ಇಕ್ಬಾಲ್ ಅವರ ಅಜೇಯ 83 (58) ರನ್ ಗಳ ಅಮೋಘ ಆಟದಿಂದ ಬಾಂಗ್ಲಾದೇಶ ತಂಡ ನೆದರ್ಲೆಂಡ್ ತಂಡವನ್ನು 8 ರನ್ ಗಳಿಂದ ಮಣಿಸುವುದರ ಮೂಲಕ ವಿಶ್ವ ಟಿ20 ಅರ್ಹತಾ ಸುತ್ತಿನಲ್ಲಿ ಶುಭಾರಂಭ ಮಾಡಿದೆ.

ವಿಶ್ವ ಟಿ20: ತಂಡಗಳು | ವೇಳಾಪಟ್ಟಿ | ಗ್ಯಾಲರಿ

ಧರ್ಮಶಾಲಾದಲ್ಲಿರುವ ಹಿಮಾಚಲ ಪ್ರದೇಶ ಕ್ರಿಕೆಟ್ ಸಂಸ್ಥೆ ಮೈದಾನದಲ್ಲಿ ಮಾರ್ಚ್ 09 ಬುಧವಾರ ನಡೆದ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟ್ ಮಾಡಿದ ಬಾಂಗ್ಲಾ ತಂಡ ನಿಗದಿತ 20 ಓವರ್ ಗಳಲ್ಲಿ 7 ವಿಕೆಟ್ ಕಳೆದುಕೊಂಡು 153 ರನ್ ಗಳನ್ನು ಗಳಿಸಿತು.[ಪಂದ್ಯದ ಸ್ಕೋರ್ ಕಾರ್ಡ್]

ಬಾಂಗ್ಲಾ ಪರ ತಮೀಮ್ 58 ಎಸೆತಗಳಲ್ಲಿ 6 ಬೌಂಡರಿ 3 ಸಿಕ್ಸರ್ ಗಳ ನೆರವಿನಿಂದ ಭರ್ಜರಿ 83 ರನ್ ಗಳಿಸಿದ್ದಾರೆ. ನೆದರ್ಲೆಂಡ್ ಪರ ವ್ಯಾನ್ ಡರ್ ಗುಗ್ಟೆನ್ 21 ರನ್ ನೀಡಿ ಪ್ರಮುಖ 3 ವಿಕೆಟ್ ಪಡೆದು ಯಶಸ್ವಿ ಬೌಲರ್ ಎನಿಸಿದರು.[ಐಸಿಸಿ ವಿಶ್ವ ಟ್ವೆಂಟಿ20 ಟೂರ್ನಿಗೆ ಫುಲ್ ಗೈಡ್]

ಬಾಂಗ್ಲಾ ನೀಡಿದ ಚಾಲೆಂಜಿಂಗ್ ಮೊತ್ತವನ್ನು ಬೆನ್ನಟ್ಟಿದ ನೆದರ್ಲೆಂಡ್ ತಂಡ ಸ್ಟಿಫನ್ ಮೈಬುರ್ಗ್ (29) ಮತ್ತು ಬೊರೆನ್ (29) ಈ ಇಬ್ಬರ ಜೋಡಿ ಆಟ ಕೆಲ ಕಾಲ ಬಾಂಗ್ಲಾದೇಶವನ್ನು ಆತಂಕಕ್ಕೆ ಉಂಟು ಮಾಡಿತ್ತು. ಆದರೆ, ಕೊನೆಗೆ 145 ರನ್ ಗಳಿಸಿ 8 ರನ್ ಗಳ ಅಂತರದಿಂದ ಸೋಲೊಪ್ಪಿಕೊಂಡಿತು.

ಟಾಸ್ ಸೋತು ಮೊದಲು ಬ್ಯಾಟ್ ಮಾಡಿ ಬಾಂಗ್ಲಾ

ಟಾಸ್ ಸೋತು ಮೊದಲು ಬ್ಯಾಟ್ ಮಾಡಿ ಬಾಂಗ್ಲಾ

ಧರ್ಮಶಾಲಾದಲ್ಲಿರುವ ಹಿಮಾಚಲ ಪ್ರದೇಶ ಕ್ರಿಕೆಟ್ ಸಂಸ್ಥೆ ಮೈದಾನದಲ್ಲಿ ಮಾರ್ಚ್ 09 ಬುಧವಾರ ನಡೆದ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟ್ ಮಾಡಿದ ಬಾಂಗ್ಲಾ ತಂಡ ನಿಗದಿತ 20 ಓವರ್ ಗಳಲ್ಲಿ 7 ವಿಕೆಟ್ ಕಳೆದುಕೊಂಡು 153 ರನ್ ಗಳನ್ನು ಗಳಿಸಿತು.

ಬಾಂಗ್ಲಾ ಪರ ತಮೀಮ್ ಅರ್ಧಶತಕ

ಬಾಂಗ್ಲಾ ಪರ ತಮೀಮ್ ಅರ್ಧಶತಕ

ಬಾಂಗ್ಲಾ ಪರ ತಮೀಮ್ 58 ಎಸೆತಗಳಲ್ಲಿ 6 ಬೌಂಡರಿ 3 ಸಿಕ್ಸರ್ ಗಳ ನೆರವಿನಿಂದ ಭರ್ಜರಿ 83 ರನ್ ಗಳಿಸಿದರು.

ಚಾಲೆಂಜಿಂಗ್ ಮೊತ್ತವನ್ನು ಬೆನ್ನಟ್ಟಿದ ನೆದರ್ಲೆಂಡ್

ಚಾಲೆಂಜಿಂಗ್ ಮೊತ್ತವನ್ನು ಬೆನ್ನಟ್ಟಿದ ನೆದರ್ಲೆಂಡ್

ಬಾಂಗ್ಲಾ ನೀಡಿದ ಚಾಲೆಂಜಿಂಗ್ ಮೊತ್ತವನ್ನು ಬೆನ್ನಟ್ಟಿದ ನೆದರ್ಲೆಂಡ್ ತಂಡ ಸ್ಟಿಫನ್ ಮೈಬುರ್ಗ್ (29) ಮತ್ತು ಬೊರೆನ್ (29) ಈ ಇಬ್ಬರ ಜೋಡಿ ಆಟ ಕೆಲ ಕಾಲ ಬಾಂಗ್ಲಾದೇಶವನ್ನು ಆತಂಕಕ್ಕೆ ಉಂಟು ಮಾಡಿತ್ತು.

ಜೋಡಿಯನ್ನು ಮುರಿದ ಶಕೀಲ್ ಹಸನ್

ಜೋಡಿಯನ್ನು ಮುರಿದ ಶಕೀಲ್ ಹಸನ್

ನಂತರ ಬೌಲಿಂಗ್ ಗೆ ಬಂದ ಆಲ್ ರೌಂಡರ್ ಶಕೀಬ್ ಅಲ್ ಹಸನ್ ಈ ಜೋಡಿಯನ್ನು ಮುರಿದು ಬಾಂಗ್ಲಾಕ್ಕೆ ಗೆಲುವಿನ ಜೀವ ತುಂಬಿದರು. ನೆದರ್ಲೆಂಡ್ ಗೆಲ್ಲಲು ಕೊನೆಯ ಓವರ್ ವರೆಗೂ ಹೋರಾಟ ನಡೆಸಿತ್ತಾದರೂ ಕೊನೆಗೆ 145 ರನ್ ಗಳಿಸಿ 8 ರನ್ ಗಳ ಅಂತರದಿಂದ ಸೋಲೊಪ್ಪಿಕೊಂಡಿತು.

ತಮೀಮ್ ಇಕ್ಬಾಲ್ ಗೆ ಪಂದ್ಯ ಪುರುಷ ಪ್ರಶಸ್ತಿ

ತಮೀಮ್ ಇಕ್ಬಾಲ್ ಗೆ ಪಂದ್ಯ ಪುರುಷ ಪ್ರಶಸ್ತಿ

ಸ್ಫೋಟಕ ಅಜೇಯ ಅರ್ಧಶತಕ ಗಳಿಸಿದ ಬಾಂಗ್ಲಾದೇಶದ ತಮೀಮ್ ಇಕ್ಬಾಲ್ ಅವರು ಪಂದ್ಯ ಪುರುಷ ಪ್ರಶಸ್ತಿಗೆ ಪಾತ್ರರಾದರು.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Riding on opener Tamim Iqbal's unbeaten 83, Bangladesh managed to eke out a narrow 8-run win over the Netherlands in their first match of the World Twenty20 Qualifiers, here today (March 9).
Please Wait while comments are loading...