ಗ್ರೇಟ್ ಫಿನಿಶರ್ ಧೋನಿ ಇದ್ದರೂ ದಕ್ಕದ ಗೆಲುವು

Subscribe to Oneindia Kannada

ಮುಂಬೈ, ಮಾರ್ಚ್, 13: ಫಿನಿಶರ್ ಎಂಎಸ್ ಧೋನಿ ಕ್ರೀಸ್ ನಲ್ಲಿ ಇದ್ದರೂ ದಕ್ಷಿಣ ಆಫ್ರಿಕಾ ವಿರುದ್ಧದ ಅಭ್ಯಾಸ ಪಂದ್ಯದಲ್ಲಿ ಭಾರತ ಸೋಲು ಕಂಡಿದೆ. ಉತ್ತಮ ಪ್ರದರ್ಶನ ನೀಡಿದರೂ ತಂಡಕ್ಕೆ ಜಯ ಲಭಿಸಲಿಲ್ಲ.

ಭಾರತದ ಬ್ಯಾಟಿಂಗ್ ಪ್ರದರ್ಶನ ಮೆಚ್ಚಿಕೊಳ್ಳುವಂತೆ ಇತ್ತು. ಆದರೆ ಬೌಲಿಂಗ್ ವಿಭಾಗದಲ್ಲಿ ಇನ್ನಷ್ಟು ಸುಧಾರಣೆ ಆಗಬೇಕು ಎಂಬುದನ್ನು ಪಂದ್ಯ ಸಾರಿ ಹೇಳಿತು. ಯುವರಾಜ್ ಸಿಂಗ್ ಮತ್ತೆ ಬ್ಯಾಟ್ ಬೀಸಿದ್ದು ಭಾರತದ ಪಾಲಿಗೆ ಉತ್ತಮ ಬೆಳವಣಿಗೆಯಾಗಿ ಕಂಡಿತು. [ಅಂದು ಸುರೇಶ್ ರೈನಾ ಆತ್ಮಹತ್ಯೆಗೆ ಯೋಚಿಸಿದ್ದು ಏಕೆ?]

ವಿಶ್ವ ಟಿ20: ತಂಡಗಳು | ವೇಳಾಪಟ್ಟಿ | ಗ್ಯಾಲರಿ

ಪ್ರತಿ ಓವರ್‌ಗೆ ಸರಾಸರಿ 10ರಂತೆ ರನ್ ಅವಶ್ಯಕತೆಯಿದ್ದ ವೇಳೆ ಜತೆಯಾದ ಯುವರಾಜ್ ಸಿಂಗ್ (16*) ಹಾಗೂ ಎಂಎಸ್ ಧೋನಿ (31*, 16ಎಸೆತ, 4 ಎಸೆತ, 1 ಸಿಕ್ಸರ್) ಅಂತಿಮ ಓವರ್‌ವರೆಗೂ ಹೋರಾಡಿದರೂ ತಂಡಕ್ಕೆ ಗೆಲುವು ತಂದುಕೊಡಲು ಸಾಧ್ಯವಾಗಲಿಲ್ಲ.

ರೋಹಿತ್, ಕೊಹ್ಲಿ ಫೇಲ್

ರೋಹಿತ್, ಕೊಹ್ಲಿ ಫೇಲ್

ಭರ್ಜರಿ ಟಚ್ ನಲ್ಲಿದ್ದ ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ ಆಫ್ರಿಕಾ ವಿರುದ್ಧ ರನ್ ಗಳಿಸದೆ ಫೆವಿಲಿಯನ್ ಸೇರಿಕೊಂಡರು. ರೋಹಿತ್ ಶರ್ಮ (10) ಅಬೋಟ್ ಎಸೆತದಲ್ಲಿ ಎಲ್‌ಬಿ ಬಲೆಗೆ ಬಿದ್ದರು. ಬಳಿಕ ಬಂದ ವಿರಾಟ್ ಕೊಹ್ಲಿ (1) ಹಾಗೂ ಅಂಜಿಕ್ಯ ರಹಾನೆ (11) ಸಹ ಆಟವಾಡಲಿಲ್ಲ.

 ಸೋಲಿನ ಸುಳಿ

ಸೋಲಿನ ಸುಳಿ

48ರನ್‌ಗಳಿಗೆ 3 ವಿಕೆಟ್ ಕಳೆದುಕೊಂಡ ಭಾರತ ಸೋಲಿನ ಸುಳಿಗೆ ಸಿಕ್ಕಿತ್ತು. ಈ ವೇಳೆ ಒಂದೆಡೆ ಕ್ರೀಸ್ ಕಚ್ಚಿ ನಿಂತಿದ್ದ ಶಿಖರ್ ಧವನ್ ಭಾರತದ ಕುಸಿತವನ್ನು ತಡೆದರು.

ಸುರೇಶ್ ರೈನಾ ಮಿಂಚು

ಸುರೇಶ್ ರೈನಾ ಮಿಂಚು

ಬಿರುಸಿನ ಬ್ಯಾಟಿಂಗ್ ಮುಂದುವರಿಸಿದ ಶಿಖರ್ ಧವನ್ (73ರನ್, 53ಎಸೆತ, 10 ಬೌಂಡರಿ), ಸುರೇಶ್ ರೈನಾ (41ರನ್, 26ಎಸೆತ, 3ಬೌಂಡರಿ, 2 ಸಿಕ್ಸರ್) ಜತೆಗೂಡಿ 4ನೇ ವಿಕೆಟ್‌ಗೆ 94ರನ್ ಪೇರಿಸುವ ಮೂಲಕ ದಕ್ಷಿಣ ಆಫ್ರಿಕಾ ತಂಡಕ್ಕೆ ತಿರುಗೇಟು ನೀಡಿದರು. ಬಳಿಕ ಇಬ್ಬರು ಸ್ವಯಂ ನಿವೃತ್ತಿ ಪಡೆದುಕೊಂಡರು.

 ಯುವರಾಜ್-ಧೋನಿ

ಯುವರಾಜ್-ಧೋನಿ

ಪ್ರತಿ ಓವರ್‌ಗೆ ಸರಾಸರಿ 10ರಂತೆ ರನ್ ಅವಶ್ಯಕತೆಯಿದ್ದ ವೇಳೆ ಜತೆಯಾದ ಯುವರಾಜ್ ಸಿಂಗ್ (16*) ಹಾಗೂ ಎಂಎಸ್ ಧೋನಿ (31*, 16ಎಸೆತ, 4 ಎಸೆತ, 1 ಸಿಕ್ಸರ್) ಅಂತಿಮ ಓವರ್‌ವರೆಗೂ ಹೋರಾಡಿದರೂ ತಂಡಕ್ಕೆ ಗೆಲುವು ತಂದುಕೊಡಲು ಸಾಧ್ಯವಾಗಲಿಲ್ಲ.

 ಕೊನೆ ಓವರ್

ಕೊನೆ ಓವರ್

ಅಂತಿಮ ಓವರ್‌ನಲ್ಲಿ ಭಾರತಕ್ಕೆ ಗೆಲ್ಲಲು 14ರನ್ ಬೇಕಿತ್ತು. ಆದರೆ ಧೋನಿ ಹಾಗೂ ಯುವರಾಜ್ ಸಿಂಗ್ 10 ರನ್ ಗಳಿಸಿ ಹಿಂದೆ ಬಿದ್ದರು.

ಡುಮಿನಿ ಆರ್ಭಟ

ಡುಮಿನಿ ಆರ್ಭಟ

ಹಾಶಿಂ ಆಮ್ಲ ಅವರನ್ನು ಬೇಗನೇ ಔಟ್ ಮಾಡಿದ್ದರೂ ವಿಕೆಟ್ ಕೀಪರ್ ಕ್ವಿಂಟನ್ ಡಿ' ಕಾಕ್ (56ರನ್, 33ಎಸೆತ, 7 ಬೌಂಡರಿ, 2 ಸಿಕ್ಸರ್) ಮತ್ತು ಜೆಪಿ ಡುಮಿನಿ (67ರನ್, 44ಎಸೆತ, 6 ಬೌಂಡರಿ, 3 ಸಿಕ್ಸರ್) ಆರ್ಭಟಿಸಿ 200 ಗಡಿಗೆ ಆಫ್ರಿಕಾ ಮೊತ್ತ ಕೊಂಡೊಯ್ದರು.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ - ನೋಂದಣಿ ಉಚಿತ!

English summary
Mumbai: Star batsmen Jean-Paul Duminy and Quinton de Kock struck fluent half-centuries as South Africa registered a nail-biting, four-run victory against India in the warm-up match ahead of the World Twenty20 cricket tournament at the Wankhede Stadium here on Saturday night (March 12).
Please Wait while comments are loading...