ವಿಶ್ವ ಟಿ20: ಸೆಮಿಫೈನಲ್ ಪಂದ್ಯ ಎಲ್ಲಿ? ಫುಲ್ ವೇಳಾಪಟ್ಟಿ

Posted By:
Subscribe to Oneindia Kannada

ನವದೆಹಲಿ, ಮಾರ್ಚ್ 28 : ವಿಶ್ವ ಟಿ20 ಟೂರ್ನಮೆಂಟ್ ಸೂಪರ್ 10 ಹಂತ ದಾಟಿ ಈಗ ಸೆಮಿಫೈನಲ್ ಘಟ್ಟ ತಲುಪಿದೆ. ಅತಿಥೇಯ ಭಾರತ ತಂಡ ತನ್ನ ಕೊನೆ ಲೀಗ್ ಪಂದ್ಯದಲ್ಲಿ ಆಸ್ಟ್ರೇಲಿಯಾ ವಿರುದ್ಧ ಭಾನುವಾರ(ಮಾರ್ಚ್ 27) ಭರ್ಜರಿ ಜಯ ದಾಖಲಿಸಿ ಸೆಮೀಸ್ ಗೆ ಎಂಟ್ರಿ ಪಡೆದುಕೊಂಡಿದೆ. ಸೆಮಿಫೈನಲ್ ಪಂದ್ಯ ವೀಕ್ಷಿಸುವುದು ಎಲ್ಲಿ? ಯಾವಾಗ ಮ್ಯಾಚ್ ಇದೆ? ನಾಲ್ಕು ತಂಡದಲ್ಲಿ ಯಾರು ಯಾರಿದ್ದಾರೆ? ವಿವರ ಇಲ್ಲಿದೆ...

ಮಾರ್ಚ್ 8 ರಂದು ಅರ್ಹತಾ ಸುತ್ತಿನ ಪಂದ್ಯಗಳ ಮೂಲಕ ಆರಂಭವಾದ ವಿಶ್ವ ಟ್ವೆಂಟಿ20 ಟೂರ್ನಮೆಂಟ್ ನಲ್ಲಿ 16 ತಂಡಗಳು ಸೆಣಸಾಟ ನಡೆಸಿದ್ದವು. ಈ ಪೈಕಿ ನಾಲ್ಕು ಬಲಿಷ್ಠ ತಂಡಗಳು ಈಗ ಉಪಾಂತ್ಯ ಹಂತ ಮುಟ್ಟಿವೆ. [ಸೆಹ್ವಾಗ್ ನುಡಿದ ಟಿ20 ಭವಿಷ್ಯ: ಬಹುತೇಕ ನಿಜವಾಯ್ತು!]

ನ್ಯೂಜಿಲೆಂಡ್ ತಂಡ ಸೂಪರ್ 10 ಹಂತದಲ್ಲಿ ಅಜೇಯವಾಗಿ ಉಳಿದು ದಾಖಲೆ ಬರೆದಿದೆ. ಕೋಲ್ಕತ್ತಾದ ಈಡನ್ ಗಾರ್ಡನ್ಸ್ ಮೈದಾನದಲ್ಲಿ ಏಪ್ರಿಲ್ 3 (ಭಾನುವಾರ) ಅಂತಿಮ ಹಣಾಹಣಿ ನಡೆಯಲಿದೆ. [ಗೇಲ್ ದಾಖಲೆ ಚೂರು ಚೂರು ಮಾಡಿದ ವಿರಾಟ್]

ಈ ಬಾರಿ ಸೆಮಿಫೈನಲ್ ತಲುಪಿರುವ ತಂಡಗಳ ಪೈಕಿ ನ್ಯೂಜಿಲೆಂಡ್ ಹೊರತುಪಡಿಸಿ ಮಿಕ್ಕ ಮೂರು ತಂಡಗಳು ಒಮ್ಮೊಮ್ಮೆ ವಿಶ್ವ ಟಿ20 ಕಪ್ ಎತ್ತಿವೆ. ಭಾರತ 2007ರಲ್ಲಿ ದಕ್ಷಿಣ ಆಫ್ರಿಕಾದಲ್ಲಿ ನಡೆದ ಚೊಚ್ಚಲ ಟೂರ್ನಮೆಂಟ್ ನಲ್ಲಿ ಕಪ್ ಗೆದ್ದುಕೊಂಡಿತ್ತು.

ಇಂಗ್ಲೆಂಡ್ 2010ರಲ್ಲಿ ಹಾಗೂ ವೆಸ್ಟ್ ಇಂಡೀಸ್ 2012 ಕಪ್ ಗೆ ಮುತ್ತಿಟ್ಟಿತ್ತು. ಹಾಲಿ ಚಾಂಪಿಯನ್ ಶ್ರೀಲಂಕಾ ಸೂಪರ್ 10 ಹಂತದಲ್ಲೇ ಮುಗ್ಗರಿಸಿ ಮನೆ ಸೇರಿದೆ. ಎಲ್ಲಾ ಪಂದ್ಯಗಳು ಸ್ಟಾರ್ ಸ್ಫೋರ್ಟ್ಸ್ ನಲ್ಲಿ ನೇರ ಪ್ರಸಾರವಾಗಲಿದೆ.

ಮೊದಲ ಸೆಮಿಫೈನಲ್ ಪಂದ್ಯದ ವಿವರ

ಮೊದಲ ಸೆಮಿಫೈನಲ್ ಪಂದ್ಯದ ವಿವರ

ಮೊದಲ ಸೆಮಿಫೈನಲ್ : ಮಾರ್ಚ್ 30 (ಬುಧವಾರ) , 7 PM IST : ನ್ಯೂಜಿಲೆಂಡ್ (ಎರಡನೇ ಗುಂಪಿನ ಅಗ್ರಸ್ಥಾನಿ) ಹಾಗೂ ಇಂಗ್ಲೆಂಡ್ (ಮೊದಲ ಗುಂಪಿನ 2 ಸ್ಥಾನ ಪಡೆದ ತಂಡ) ಸೆಣಸಾಡಲಿದ್ದು, ದೆಹಲಿಯ ಫಿರೋಜ್ ಶಾ ಕೋಟ್ಲಾದಲ್ಲಿ ಮಾರ್ಚ್ 30 ರಂದು ಪಂದ್ಯ ನಡೆಯಲಿದೆ.

ಎರಡನೇ ಸೆಮಿಫೈನಲ್ ಪಂದ್ಯದ ವಿವರ

ಎರಡನೇ ಸೆಮಿಫೈನಲ್ ಪಂದ್ಯದ ವಿವರ

ಎರಡನೇ ಸೆಮಿಫೈನಲ್:ಮಾರ್ಚ್ 31 (ಗುರುವಾರ) , 7 PM IST, ವೆಸ್ಟ್ ಇಂಡೀಸ್ (ಗುಂಪು 1 ರ ಅಗ್ರಸ್ಥಾನ) ಹಾಗೂ ಭಾರತ (ಎರಡನೇ ಗುಂಪಿನ 2ನೇ ಸ್ಥಾನ ಪಡೆದ ತಂಡ) ಮಾರ್ಚ್ 31 ರಂದು ಮುಂಬೈನ ವಾಂಖೆಡೆ ಸ್ಟೇಡಿಯಂ.

ವಿಶ್ವ ಟ್ವೆಂಟಿ20 ಅಂತಿಮ ಹಣಾಹಣಿ

ವಿಶ್ವ ಟ್ವೆಂಟಿ20 ಅಂತಿಮ ಹಣಾಹಣಿ

ವಿಶ್ವ ಟ್ವೆಂಟಿ20 ಅಂತಿಮ ಹಣಾಹಣಿ ಏಪ್ರಿಲ್ 03 ರಂದು, ಕೋಲ್ಕತ್ತಾ (7 PM IST)-ಈಡನ್ ಗಾರ್ಡನ್ಸ್ ನಲ್ಲಿ ನಡೆಯಲಿದೆ. ಮಳೆ ಕಾಟ, ಫ್ಲಡ್ ಲೈಟ್ ಸಮಸ್ಯೆಯಿಂದ ಮೈದಾನವನ್ನು ಮುಕ್ತಗೊಳಿಸಲು ಸೌರವ್ ಗಂಗೂಲಿ ನೇತೃತ್ವದ ಬೆಂಗಾಲ ಕ್ರಿಕೆಟ್ ಅಸೋಸಿಯೇಷನ್ (ಸಿಎಬಿ) ಸಿದ್ಧತೆ ನಡೆಸಿದೆ.

ತಂಡಗಳು: ಭಾರತ

ತಂಡಗಳು: ಭಾರತ

ಮಹೇಂದ್ರ ಸಿಂಗ್ ಧೋನಿ (ನಾಯಕ), ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ (ಉಪನಾಯಕ), ಶಿಖರ್ ಧವನ್, ಅಜಿಂಕ್ಯಾ ರಹಾನೆ, ಸುರೇಶ್ ರೈನಾ, ಯುವರಾಜ್ ಸಿಂಗ್, ಮಹಮ್ಮದ್ ಶಮಿ, ರವೀಂದ್ರ ಜಡೇಜ, ರವಿಚಂದ್ರನ್ ಅಶ್ವಿನ್, ಹರ್ಭಜನ್ ಸಿಂಗ್, ಜಸ್ಪ್ರೀತ್ ಬೂಮ್ರಾ, ಹಾರ್ದಿಕ್ ಪಾಂಡ್ಯ, ಪವನ್ ನೇಗಿ, ಆಶಿಶ್ ನೆಹ್ರಾ.

ವೆಸ್ಟ್ ಇಂಡೀಸ್ ತಂಡ

ವೆಸ್ಟ್ ಇಂಡೀಸ್ ತಂಡ

ವೆಸ್ಟ್ ಇಂಡೀಸ್ ತಂಡ : ಡರೆನ್ ಸಮಿ (ನಾಯಕ), ಸುಲೈಮಾನ್ ಬೆನ್, ಜೇಸನ್ ಹೋಲ್ಡರ್,ಆಂಡ್ರೆ ಫ್ಲೆಚೆರ್, ಡ್ವಾಯ್ನೆ ಬ್ರಾವೋ, ಸ್ಯಾಮುಯೆಲ್ ಬದ್ರಿ, ಲೆಂಡ್ಲ್ ಸಿಮೊನ್ಸ್, ಜೆರೊಮೆ ಟೇಲರ್.ಅಂಡ್ರೆ ರಸ್ಸೆಲ್, ದಿನೇಶ್ ರಾಮ್ದಿನ್, ಕ್ರಿಸ್ ಗೇಲ್, ಮರ್ಲಾನ್ ಸ್ಯಾಮುಯೆಲ್ಸ್, ಆಶ್ಲೆ ನರ್ಸ್, ಕಾರ್ಲೋಸ್ ಬ್ರಥ್ ವೈಟ್.

ಇಂಗ್ಲೆಂಡ್ ಟ್ವೆಂಟಿ20 ತಂಡ

ಇಂಗ್ಲೆಂಡ್ ಟ್ವೆಂಟಿ20 ತಂಡ

ಇಂಗ್ಲೆಂಡ್ ಟ್ವೆಂಟಿ20 ತಂಡ : ಇಯಾನ್ ಮಾರ್ಗನ್ (ನಾಯಕ), ಮೋಯಿನ್ ಅಲಿ, ಸ್ಯಾಮ್ ಬಿಲ್ಲಿಂಗ್ಸ್, ಜೋಸ್ ಬಟ್ಲರ್, ಲಿಯಾಮ್ ಡಾಸನ್, ಸ್ಟೀವನ್ ಫಿನ್, ಅಲೆಕ್ಸ್ ಹೇಲ್ಸ್, ಕ್ರಿಸ್ ಜೋರ್ಡನ್, ಆದಿಲ್ ರಷೀದ್, ಜೋ ರೂಟ್, ಜಾಸನ್ ರಾಯ್, ಬೆನ್ ಸ್ಟೋಕ್ಸ್, ರೀಸ್ ಟಾಪ್ಲೆ, ಜೇಮ್ಸ್ ವಿನ್ಸಿ ಹಾಗೂ ಡೇವಿಡ್ ವಿಲ್ಲಿ.

ನ್ಯೂಜಿಲೆಂಡ್ ತಂಡ

ನ್ಯೂಜಿಲೆಂಡ್ ತಂಡ

ನ್ಯೂಜಿಲೆಂಡ್ ತಂಡ : ಕೇನ್ ವಿಲಿಯಮ್ಸನ್ (ನಾಯಕ), ಕೋರಿ ಆಂಡರ್​ಸನ್, ಟ್ರೆಂಟ್ ಬೌಲ್ಟ್, ಗ್ರಾಂಟ್ ಎಲಿಯಟ್, ಮಾರ್ಟಿನ್ ಗುಪ್ಟಿಲ್, ಆಡಂ ಮಿಲ್ನೆ, ಮಿಚೆಲ್ ಮೆಕ್ಲೀನಘನ್, ಕಾಲಿನ್ ಮುನ್ರೋ, ನಥಾನ್ ಮೆಕ್ಕಲಂ, ಹೆನ್ರಿ ನಿಕೋಲಾಸ್, ಲ್ಯೂಕ್ ರಾಂಚಿ, ಮಿಚೆಲ್ ಸ್ಯಾಂಟ್ನೆರ್, ಇಶ್ ಸೋಧಿ, ಟಿಮ್ ಸೌಥಿ, ರಾಸ್ ಟೇಲರ್

ಈ ಸುದ್ದಿಯನ್ನು ಕೇಳಿಸಿಕೊಳ್ಳಿ

ವಿಶ್ವ ಟಿ20 ಸೆಮೀಸ್ : ಯಾರು ಯಾರಿಗೆ ಹಣಾಹಣಿ? ಈ ಸುದ್ದಿಯನ್ನು ಕೇಳಿಸಿಕೊಳ್ಳಿ

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
The ICC World Twenty20 tournament has reached the semi-final stage. Hosts India were the last team to make the cut after last night's (March 27) 6-wicket victory over Australia in Mohali.
Please Wait while comments are loading...