ಪಾಕ್ ವಿರುದ್ಧ ಭಾರತ ಗೆದ್ದಾಗ ಧೋನಿ ಪತ್ನಿ ಸಾಕ್ಷಿ ಬೆಚ್ಚಿದ್ದೇಕೆ?

By: ಕ್ರಿಕೆಟ್ ಡೆಸ್ಕ್
Subscribe to Oneindia Kannada

ಮುಂಬೈ, ಮಾರ್ಚ್ 21 : ಕೋಲ್ಕತ್ತಾದಲ್ಲಿ ನಡೆದ ವಿಶ್ವ ಟಿ20 ಪಂದ್ಯದಲ್ಲಿ ಬದ್ಧ ವೈರಿ ಪಾಕಿಸ್ತಾನವನ್ನು ಭಾರತ ಬಗ್ಗುಬಡಿದು ವಿಜಯೋತ್ಸವ ಆಚರಿಸಿತು. ಶನಿವಾರ ತಡರಾತ್ರಿ ಇಡೀ ದೇಶವೇ ಸಂಭ್ರಮ ಆಚರಣೆಯಲ್ಲಿ ತೇಲಾಡುತ್ತಿತ್ತು.

ವಿಶ್ವ ಟಿ20: ತಂಡಗಳು | ವೇಳಾಪಟ್ಟಿ | ಗ್ಯಾಲರಿ |ಟೂರ್ನಿಗೆ ಫುಲ್ ಗೈಡ್

ಆದರೆ, ಟೀಂ ಇಂಡಿಯಾ ನಾಯಕ ಮಹೇಂದ್ರ ಸಿಂಗ್ ಧೋನಿ ಸಾಕ್ಷಿ ಸಿಂಗ್ ಧೋನಿ ಅವರು ಮಾತ್ರ ಇಂಡಿಯಾ ಗೆದ್ದಿದ್ದಕ್ಕೆ ಬೆಚ್ಚಿ ಬಿದ್ದಿದ್ದಾರೆ. ಏತಕ್ಕೆ? ಮುಂದೆ ಓದಿ..[ಪಾಕಿಸ್ತಾನ ವಿರುದ್ಧ ಭಾರತ 11-0 ಪರಾಕ್ರಮ ಸಾಧನೆ]

ಈಡನ್ ಗಾರ್ಡನ್ ಮೈದಾನದಲ್ಲಿ ಮಾರ್ಚ್ 19 ಶನಿವಾರ ನಡೆದ ಭಾರತ ಹಾಗೂ ಪಾಕ್ ನಡುವಿನ ಹೈವೋಲ್ಟೇಜ್ ಪಂದ್ಯದಲ್ಲಿ ಭಾರತ 6 ವಿಕೆಟ್ ಗಳ ಅಮೋಘ ಜಯಗಳಿಸಿದ್ದಕ್ಕೆ ರಾಂಚಿಯಲ್ಲಿರುವ ಕ್ಯಾಪ್ಟನ್ ಧೋನಿ ಅವರ ಮನೆ ಮುಂದೆ ಅಭಿಮಾನಿಗಳು ಶಿಳ್ಳೆ, ಕೇಕೆ ಹಾಕಿ, ಪಟಾಕಿಗಳನ್ನು ಸಿಡಿಸಿ ಸಂಭ್ರಮಾಚರಣೆ ಮಾಡಿದ್ದರು. [ಅನುಷ್ಕಾರನ್ನು ಕಿಚಾಯಿಸಿದ ಟ್ವೀಟ್ಸ್ ]

WC T20: Sakshi Dhoni is worried about Ziva’s sleep as India beat Pakistan

ಹೆಚ್ಚು ಸದ್ದು ಕೇಳಿ ಬಂದಿದ್ದರಿಂದ ಗಾಬರಿಗೊಂಡ ಸಾಕ್ಷಿ ತನ್ನ ಮಗಳು ಝೀವಾ ನಿದ್ರೆಯಿಂದ ಎದ್ದು ಬಿಡುತ್ತಾಳೆಂದು ಹೆಚ್ಚು ಗಲಾಟೆ ಮಾಡಬೇಡಿ ಶಾಂತ ರೀತಿಯಿಂದ ಸಂಭ್ರಮಾಚರಣೆ ಮಾಡಿ ಎಂದು ಸಾಕ್ಷಿ ಟ್ವಿಟ್ಟರ್ ಮೂಲಕ ಮನೆ ಮುಂದೆ ಸೇರಿದ್ದ ಅಭಿಮಾನಿಗಳಲ್ಲಿ ಮನವಿ ಮಾಡಿಕೊಂಡಿದ್ದಾರೆ. [ಟ್ರಾಲ್ಸ್ : ಕೊಹ್ಲಿ ಪರಿಶ್ರಮ vs ಧೋನಿ ಭಕ್ತರು]

ಇದೇ ವೇಳೆ ಪಾಕಿಸ್ತಾನವನ್ನು 6 ವಿಕೆಟ್ ಗಳಿಂದ ಮಣಿಸಿ ಮತ್ತೊಮ್ಮೆ ಗೆಲವು ನಮ್ಮದೆ ಎಂದು ತೋರಿಸಿಕೊಟ್ಟ ಭಾರತ ಕ್ರಿಕೆಟ್ ತಂಡಕ್ಕೆ ಟೀಂ ಇಂಡಿಯಾದ ಕೂಲ್ ಕ್ಯಾಪ್ಟನ್ ಮಹೇಂದ್ರ ಸಿಂಗ್ ಧೋನಿ ಮಡದಿ ಸಾಕ್ಷಿ ಸಿಂಗ್ ಟ್ವಿಟ್ಟರ್ ಮೂಲಕ ಅಭಿನಂದನೆಗಳನ್ನು ತಿಳಿಸಿದ್ದಾರೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
World T20 India beat Pakistan: Sakshi Dhoni Wife of Team India captain Mahendra Singh Dhoni was worried that the honking and noise of firecrackers outside the duo's Ranchi home would wake up their daughter Ziva.
Please Wait while comments are loading...