ನನಗೆ ಅತ್ಯಂತ ಖುಷಿಕೊಟ್ಟ ಪ್ರಶಸ್ತಿ ಇದಾಗಿದೆ: ವಿರಾಟ್ ಕೊಹ್ಲಿ

By: ಕ್ರಿಕೆಟ್ ಡೆಸ್ಕ್
Subscribe to Oneindia Kannada

ಕೋಲ್ಕತ್ತಾ, ಏಪ್ರಿಲ್ 04 : ವಿಶ್ವ ಟಿ20 ಟೂರ್ನಮೆಂಟ್ ನಲ್ಲಿ ಉತ್ತಮ ಬ್ಯಾಟಿಂಗ್ ಕೈ ಚಳಕ ತೋರಿಸಿ ಮಿಂಚಿದ್ದ ವಿಶ್ವ ನಂ 1 ಆಟಗಾರ ಭಾರತದ ಸ್ಫೋಟಕ ಬ್ಯಾಟ್ಸ್ ಮನ್ ವಿರಾಟ್ ಕೊಹ್ಲಿ, 2016 ನೇ ಐಸಿಸಿ ವಿಶ್ವ ಟಿ20 ಟೂರ್ನಿಯ ಶ್ರೇಷ್ಠ ಆಟಗಾರ ಎಂಬ ಹೆಗ್ಗಳಿಕೆ ಪಾತ್ರರಾದರು.

ಟೂರ್ನಿಯುದ್ದಕ್ಕೂ ಅಮೋಘ ಬ್ಯಾಟಿಂಗ್ ಪ್ರದರ್ಶನ ನೀಡಿದ ವಿರಾಟ್ ಅವರು ಆಡಿದ 5 ಪಂದ್ಯಗಳಲ್ಲಿ ಉತ್ತಮ ಬ್ಯಾಟಿಂಗ್ ಪ್ರದರ್ಶನ ನೀಡಿ ಭಾರತ ತಂಡ ಸೆಮಿಫೈನಲ್ ವರೆಗೆ ತಲುಪಲು ವಿರಾಟ್ ತಂಡಕ್ಕೆ ಸಹಾಯಕವಾಗಿದ್ದರು.[ಟಿ20 ಶ್ರೇಯಾಂಕ ಪಟ್ಟಿ : ವಿರಾಟ್ ಕೊಹ್ಲಿ ಮತ್ತೆ ನಂ.1 ]

146.77 ಬ್ಯಾಟಿಂಗ್ ಸರಾಸರಿಯಲ್ಲಿ ಒಟ್ಟು 5 ಪಂದ್ಯಗಳಲ್ಲಿ 3 ಅರ್ಧಶತಕಗಳನ್ನು ಸಿಡಿಸಿ ಬರೋಬ್ಬರಿ 273 ರನ್ ಗಳಿಸಿ ಟಿ20 ವಿಶ್ವ ಕಪ್ ಸರಣಿಯಲ್ಲಿ ಅತಿ ಹೆಚ್ಚು ರನ್ ಗಳಿಸಿದವರ ಪಟ್ಟಿಯಲ್ಲಿ ವಿರಾಟ್ ಎರಡನೇ ಸ್ಥಾನದಲ್ಲಿದ್ದರೂ ಟೂರ್ನಿಯ ಉತ್ತಮ ಆಟಗಾರನಾಗಿ ಹೊರ ಹೊಮ್ಮಿದ್ದಾರೆ. [ಶಾರ್ಜಾದಲ್ಲಿ ಸಚಿನ್, ಮೊಹಾಲಿಯಲ್ಲಿ ಕೊಹ್ಲಿ ಯಾರು ಬೆಸ್ಟ್?]

World T20: Proud to be named 'Player of the tournament', says Virat Kohli

ಈ ಹಿಂದೆ 2014 ಬಾಂಗ್ಲಾದೇಶದಲ್ಲಿ ನಡೆದಿದ್ದ ಐಸಿಸಿ ಟಿ20 ವಿಶ್ವ ಕಪ್ ಟೂರ್ನಿಯಲ್ಲಿ ಸಹ ಕೊಹ್ಲಿ ಗಳಿಸಿದ್ದ 319 ರನ್ ಗಳಿಂದ ಭಾರತ ಫೈನಲ್ ತಲುಪಿತ್ತು. ಆದರೆ ಫೈನಲ್ ನಲ್ಲಿ. ಶ್ರೀಲಂಕಾ ವಿರುದ್ಧ ಪರಾಭವಗೊಂಡಿತ್ತು. ಅಂದು ಸರಣಿ ಶ್ರೇಷ್ಠ ಆಟಗಾರ ಎನಿಸಿಕೊಂಡಿದ್ದರು. ಈ ಮೂಲಕ ಸತತ 2 ವಿಶ್ವ ಕಪ್ ನಲ್ಲಿಯೂ ಸರಣಿ ಶ್ರೇಷ್ಠ ಪ್ರಶಸ್ತಿಯನ್ನು ವಿರಾಟ್ ತಮ್ಮ ಮುಡಿಗೇರಿಸಿಕೊಂಡಿದ್ದಾರೆ.[ಟೀಂ ಇಂಡಿಯಾ ಆಟಗಾರರ ವಿರುದ್ಧ ದೂರು]

ಸೆಮೀಸ್ ನಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ಭಾರತ ಸೋಲು ಕಂಡಿದ್ದರಿಂದ ಕೊಹ್ಲಿ ತೀವ್ರ ಬೇಸರಗೊಂಡು ಪ್ರಶಸ್ತಿ ಸ್ವೀಕರಿಸಲು ಬಂದಿರಲಿಲ್ಲ. ಹಾಗಾಗಿ ಕೊಹ್ಲಿ ಅನುಪಸ್ಥಿತಿಯಲ್ಲಿ ಪ್ರಶಸ್ತಿಯನ್ನು ಬಂಗಾಳ ಕ್ರಿಕೆಟ್ ಅಧ್ಯಕ್ಷ ಹಾಗೂ ಭಾರತ ತಂಡದ ಮಾಜಿ ನಾಯಕ ಸೌರವ್ ಗಂಗೂಲಿ ಅವರು ಸ್ವೀಕರಿಸಿದರು.

ವಿರಾಟ್ ಕೊಹ್ಲಿ ಅವರಿಗೆ ಇಂಗ್ಲೆಂಡಿನ ಜೋ ರೂಟ್, ವೆಸ್ಟ್ ಇಂಡೀಸ್ ನ ಸ್ಯಾಮುಯಲ್ ಬದ್ರಿ ಹಾಗೂ ಬಾಂಗ್ಲಾದೇಶದ ತಮೀಮ್ ಇಕ್ಬಾಲ್ ಪೈಪೋಟಿ ನೀಡಿದ್ದರು. ಆದರೆ, ಕೊಹ್ಲಿ ಅವರನ್ನು ಸರಣಿ ಶ್ರೇಷ್ಠ ಎಂದು ಪರಿಗಣಿಸಲಾಗಿದೆ.


(ಪಿಟಿಐ)

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ - ನೋಂದಣಿ ಉಚಿತ!

English summary
India's premier batsman Virat Kohli was deservingly awarded the 'Man of the Tournament' for his brilliant performance in the ICC World T20, that concluded, here tonight (April 3). West Indies won the tournament.
Please Wait while comments are loading...