ಪಾಕಿಸ್ತಾನ ಸೋತಿದ್ದು, ಟೀಂ ಇಂಡಿಯಾಕ್ಕೆ ಒಳ್ಳೆದಾಯ್ತು!

By: ಕ್ರಿಕೆಟ್ ಡೆಸ್ಕ್
Subscribe to Oneindia Kannada

ಮೊಹಾಲಿ, ಮಾರ್ಚ್ 23: ಪಾಕಿಸ್ತಾನ ವಿರುದ್ಧ ನ್ಯೂಜಿಲೆಂಡ್ ವಿರುದ್ಧ 22 ರನ್ ಗಳಿಂದ ಸೋತಿದ್ದಕ್ಕೆ ಭಾರತ ನಿಟ್ಟುಸಿರು ಬಿಟ್ಟಿದೆ. ಯಾಕಂತೀರಾ ಅದಕ್ಕೂ ಒಂದು ಕಾರಣವಿದೆ ಅದನ್ನು ತಿಳಿಯಲು ಮುಂದೆ ಓದಿ.

ವಿಶ್ವ ಟಿ20: ತಂಡಗಳು | ವೇಳಾಪಟ್ಟಿ | ಗ್ಯಾಲರಿ |ಟೂರ್ನಿಗೆ ಫುಲ್ ಗೈಡ್

ಸೆಮೀಸ್ ಗೆ ಗ್ರೂಪ್ ನ ಟಾಪ್ 2 ತಂಡಗಳು ಅರ್ಹತೆ ಪಡೆಯಲಿದ್ದು, ಈಗಾಗಲೇ ಬಾಂಗ್ಲಾದೇಶ ವಿರುದ್ಧ ಗೆದ್ದು 2 ಪಾಯಿಂಟ್ ಪಡೆದುಕೊಂಡು ಗ್ರೂಪ್ 2 ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿದ್ದ ಪಾಕಿಸ್ತಾನದ ಸೆಮೀಸ್ ಕನಸು ನುಚ್ಚು ನೂರಾಗಿದೆ.

ಮಾರ್ಚ್ 22 ರಂದು ಮೊಹಾಲಿಯಲ್ಲಿ ನ್ಯೂಜಿಲೆಂಡ್ ವಿರುದ್ಧ 22 ರನ್ ಗಳಿಂದ ಪರಾಭವಗೊಂಡು ತಾನು ಆಡಿದ ಮೂರು ಪಂದ್ಯಗಳಲ್ಲಿ 2 ಸೋಲುವ ಮೂಲಕ ಪಾಕಿಸ್ತಾನ ಲಗ್ಗೇಜ್ ಪ್ಯಾಕ್ ಮಾಡಿಕೊಳ್ಳುತ್ತಿದೆ. ಈ ಮೂಲಕ ಭಾರತಕ್ಕೆ ಸೆಮೀಸ್ ಹಾದಿಯನ್ನು ಸರಳ ಮಾಡಿಕೊಟ್ಟಿದೆ.

Pakistan's loss to Kiwis will give India relief

ಭಾರತ ತನ್ನ ಮೊದಲ ಪಂದ್ಯದಲ್ಲಿ ಕಿವೀಸ್ ವಿರುದ್ಧ ಸೋತು ನಂತರದ ಪಂದ್ಯದಲ್ಲಿ ಪಾಕ್ ವಿರುದ್ಧದ ಜಯಗಳಿಸಿ 2 ಪಾಯಿಂಟ್ ಪಡೆದುಕೊಂಡಿದ್ದಾರೂ ರನ್ ರೇಟ್ ಅಂತರದಲ್ಲಿ ಭಾರತ ಮೂರನೇ ಸ್ಥಾನದಲ್ಲಿದೆ. ಭಾರತಕ್ಕೆ ಅಡ್ಡಗಾಲಾಗಿ ನಿಂತಿದ್ದ ಪಾಕ್ ಭಾರತಕ್ಕೆ ಸೆಮೀಸ್ ಹಾದಿಯನ್ನು ಸುಗಮವಾಗಿಸಿಕೊಟ್ಟಿದೆ.

ಆದ್ದರಿಂದ ಬಾರತ ಮಾರ್ಚ್ 23 ರಂದು ಬೆಂಗಳೂರಿನಲ್ಲಿ ನಡೆಯಲಿರುವ ಬಾಂಗ್ಲಾದೇಶ ವಿರುದ್ಧದ ಪಂದ್ಯದಲ್ಲಿ ಜಯಗಳಿಸಿದರೆ ಇನ್ನಷ್ಟು ಸೆಮೀಸ್ ಸ್ಥಾನವನ್ನು ಖಚಿತ ಪಡಿಸಿಕೊಳ್ಳಲಿದೆ.

ಪಾಕಿಸ್ತಾನ ಹಾಗೂ ಬಾಂಗ್ಲಾದೇಶ ತಂಡಗಳಿಗೆ ಬಹುತೇಕ ಸೆಮೀಸ್ ಗೆ ಹೋಗುವ ಬಾಗಿಲು ಮುಚ್ಚಿದಂತಾಗಿದೆ. ಮುಂದೆ ಸೆಮೀಸ್ ಗೆ ಹೋಗಲು ಭಾರತಕ್ಕೆ ಬಲಿಷ್ಠ ತಂಡ ಆಸ್ಟ್ರೇಲಿಯ ತಂಡ ಕಂಟಕವಾಗುವ ಸಾಧ್ಯತೆ ಇದ್ದು ಭಾರತಕ್ಕೆ ಎದುರಾಗಿದ್ದ ಒಂದು ಕಂಟಕ ದೂರಾವಾಗಿದಂತಾಗಿ ಭಾರತ ಅಲ್ಪ ಮಟ್ಟಿಗೆ ನಿಟ್ಟುಸಿರು ಬಿಡುವಂತಾಗಿದೆ. (ಒನ್ ಇಂಡಿಯಾ ಸುದ್ದಿ)

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
New Zealand's 22-run victory over Pakistan in the World T20 at the PCA Stadium here on Tuesday (March 22) will bring relief to MS Dhoni's men
Please Wait while comments are loading...