ಅಫ್ರಿದಿ ಆಲ್ ರೌಂಡರ್ ಆಟ ಪಾಕ್ ಗೆ 55 ರನ್ ಗಳ ಜಯ

By: ಕ್ರಿಕೆಟ್ ಡೆಸ್ಕ್
Subscribe to Oneindia Kannada

ಕೋಲ್ಕತ್ತಾ, ಮಾರ್ಚ್ 17: ನಾಯಕ ಶಾಹಿದ್ ಆಫ್ರಿಧಿ ಅವರ ಅಲ್ ರೌಂಡರ್ ಆಟ ಪ್ರದರ್ಶನದಿಂದ ಪಾಕಿಸ್ತಾನ ಕ್ರಿಕೆಟ್ ತಂಡ ಐಸಿಸಿ ವಿಶ್ವ ಚುಟುಕು ಸಮರದಲ್ಲಿ ಬಾಂಗ್ಲಾದೇಶವನ್ನು 55 ರನ್ ಗಳಿಂದ ಮಣಿಸಿ ಹಳೆಯ ಸೇಡನ್ನು ತೀರಿಸಿಕೊಂಡಿದೆ.

ವಿಶ್ವ ಟಿ20: ತಂಡಗಳು | ವೇಳಾಪಟ್ಟಿ | ಗ್ಯಾಲರಿ |ಟೂರ್ನಿಗೆ ಫುಲ್ ಗೈಡ್

ಮಾರ್ಚ್ 16 ರಂದು ಈಡನ್ ಗಾರ್ಡನ್ ಕೋಲ್ಕತ್ತಾದಲ್ಲಿ ನಡೆದ ಪಾಕ್ ಮತ್ತ ಭಾಂಗ್ಲಾ ನಡುವಿನ ಸೂಪರ್ 10 ಹಂತದ ಪಂದ್ಯದಲ್ಲಿ ಟಾಸ್ ಗೆದ್ದ ಮೊದಲು ಬ್ಯಾಟಿಂಗ್ ಆಯ್ದುಕೊಂಡ ಪಾಕ್ ನಿಗದಿತ 20 ಓವರ್ ಗಳಲ್ಲಿ ಭರ್ಜರಿ 201 ರನ್ ಗಳ ಬೃಹತ್ ಮೊತ್ತವನ್ನು ಕಲೆ ಹಾಕಿ ಭಾಂಗ್ಲಾಕ್ಕೆ 202 ರನ್ ಗಳ ಗುರಿ ನೀಡಿತು.

ಪಾಕ್ ಪರ ಆರಂಭಿಕ ಆಟಗಾರ ಮಹಮ್ಮದ್ ಶಹಜಾದ್ 39 ಎಸೆತಗಳಲ್ಲಿ 52 ಮತ್ತು ಮಹಮ್ಮದ್ ಹಫೀಜ್ 42 ಎಸೆತ ಎದುರಿಸಿ ಭರ್ಜರಿ 64 ರನ್ ಸಿಡಿಸುವುದರ ಮೂಲಕ ಎರಡನೇ ವಿಕೆಟ್ ಗೆ ಈ ಜೋಡಿ 68 ಎಸೆತಗಳಲ್ಲಿ ಬರೋಬ್ಬರಿ 95 ರನ್ ಗಳ ಜೋತೆಯಾಟವಾಡಿ ಪಾಕ್ ಉತ್ತಮ ಮೊತ್ತ ಪೇರಿಸಲು ನೇರವಾದರು.

ನಾಯಕ ಶಾಹಿದ್ ಆಫ್ರಿಧಿ ಅವರ ಅಲ್ ರೌಂಡರ್ ಆಟ ಪ್ರದರ್ಶನ

ನಾಯಕ ಶಾಹಿದ್ ಆಫ್ರಿಧಿ ಅವರ ಅಲ್ ರೌಂಡರ್ ಆಟ ಪ್ರದರ್ಶನ

ಸ್ಲ್ಯಾಗ್ ಓವರ್ ಗಳಲ್ಲಿ ಮಿಂಚಿದ ಬೂಮ್ ಬೂಮ್ ; ಮಧ್ಯಮ ಕ್ರಮಾಂಕದಲ್ಲಿ ಕ್ರೀಸ್ ಗಿಳಿದ ನಾಯಕ ಬೂಮ್ ಬೂಮ್ ಅಫ್ರಿದಿ ಕೇವಲ 19 ಎಸೆತಗಳಲ್ಲಿ ಅಮೋಘ 4 ಬೌಂಡರಿ ಹಾಗೂ ಸೋಗಸಾದ 4 ಸಿಕ್ಸರ್ ಗಳಿಂದ 49 ರನ್ ಗಳಿಸಿ ಒಂದು ರನ್ ನಿಂದ ಅರ್ಧಶತಕದಿಂದ ವಂಚಿತರಾದರು.

ಒಂದು ರನ್ ನಿಂದ ಅರ್ಧಶತಕ ವಂಚಿತರಾದ ಅಫ್ರಿಧಿ.

ಒಂದು ರನ್ ನಿಂದ ಅರ್ಧಶತಕ ವಂಚಿತರಾದ ಅಫ್ರಿಧಿ.

ನಾಯಕ ಅಫ್ರಿದಿ ಕೇವಲ 19 ಎಸೆತಗಳನ್ನು ಎದುರಿಸಿ ಭರ್ಜರಿ 49 ರನ್ ಗಳಿಸಿ ಕೇವಲ ಒಂದು ರನ್ ನಿಂದ ಅರ್ಧಶತಕ ವಂಚಿತರಾದರು.

ಆರಂಭಿಕ ಆಘಾತ ಅನುಭವಿಸಿದ ಭಾಂಗ್ಲಾ.

ಆರಂಭಿಕ ಆಘಾತ ಅನುಭವಿಸಿದ ಭಾಂಗ್ಲಾ.

202 ರನ್ ಗಳ ಬೃಹತ್ ಮೊತ್ತವನ್ನು ಬೆನ್ನಟ್ಟಿದ ಭಾಂಗ್ಲಾ ಹುಲಿಗಳಿಗೆ ಆರಂಭದಲ್ಲಿಯೇ ಪಾಕ್ ವೇಗಿ ಮಹಮ್ಮದ್ ಅಮಿರ್ ಸೌಮ್ಯ ಸರ್ಕಾರನ್ನು ಬಲಿ ಪಡೆದು ಅಘಾತ ನೀಡಿದರು.

ಬೌಲಿಂಗ್ ನಲ್ಲಿ ಮಿಂಚಿದ ಅಫ್ರಿಧಿ.

ಬೌಲಿಂಗ್ ನಲ್ಲಿ ಮಿಂಚಿದ ಅಫ್ರಿಧಿ.

ಶಬ್ಬಿರ್ ರೆಹಮಾನ್ ಅವರು 5 ಬೌಂಡರಿಗಳನ್ನು ಬಾರಿಸಿ 25 ರನ್ ಗಳಿಂದ ಉತ್ತಮ ಆಟ ಪ್ರದರ್ಶನ ತೋರುತ್ತಿರವಾಗಲೇ ಅಫ್ರಿದಿಗೆ ವಿಕೆಟ್ ಒಪ್ಪಿಸಿದರು.

ತಮೀಮ್ ಗೆ ಪೆವಿಲಿಯನ್ ಹಾದಿ ತೋರಿಸಿದ ಅಫ್ರಿಧಿ.

ತಮೀಮ್ ಗೆ ಪೆವಿಲಿಯನ್ ಹಾದಿ ತೋರಿಸಿದ ಅಫ್ರಿಧಿ.

ಓಮನ್ ವಿರುದ್ಧ ಆಕರ್ಷಕ ಶತಕ ಸಿಡಿಸಿ ಲಯದಲ್ಲಿದ್ದ ತಮೀಮ್ 24 ರನ್ ಗಳಿಸಿ ಆಟವಾಡುತ್ತಿದ್ದ ಅವರನ್ನು ಅಫ್ರಿದಿ ಪೆವಿಲಿಯನ್ ಹಾದಿ ತೋರಿಸಿದರು.

ಶಕೀಬ್ ಏಕಾಂಗಿ ಹೋರಾಟ ವ್ಯರ್ಥ.

ಶಕೀಬ್ ಏಕಾಂಗಿ ಹೋರಾಟ ವ್ಯರ್ಥ.

ಮಧ್ಯಮ ಕ್ರಮಾಂಕದಲ್ಲಿ ಬ್ಯಾಟ್ ಮಾಡಿದ ಆಲ್ ರೌಂಡರ್ ಶಕೀಬ್ ಅಲ್ ಹಸನ್ ಅರ್ಧಶತಕ ಬಾರಿಸಿ ಅಜೇಯರಾಗಿ ಉಳಿದರು. ಅಂತಿಮವಾಗಿ ಭಾಂಗ್ಲಾದೇಶ 20 ಓವರ್ ಗಳಲ್ಲಿ 146 ಗಳಿಸಿಸಲಷ್ಟೇ ಶಕ್ತವಾಯಿತು.

ಏಷ್ಯಾ ಕಪ್ ನ ಸೇಡು ತಿರಿಸಿಕೊಂಡ ಪಾಕ್.

ಏಷ್ಯಾ ಕಪ್ ನ ಸೇಡು ತಿರಿಸಿಕೊಂಡ ಪಾಕ್.

ಇದರಿಂದ ಪಾಕಿಸ್ತಾನ 55 ರನ್ ಗಳಿಂದ ಜಯಿಸಿ ಏಷ್ಯಾಕಪ್ ಟೂರ್ನಿಯಲ್ಲಿನ ಸೇಡನ್ನು ತೀರಿಸಿಕೊಂಡಿತು.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
A superb all-round display by skipper Shahid Afridi saw Pakistan register an emphatic 55 run victory against Bangladesh who finished 146/6 chasing an imposing target of 202 in their World Twenty20 group encounter at the Eden Gardens here on Wednesday.
Please Wait while comments are loading...