ವಿಶ್ವ ಟಿ20: ಪಾಕಿಸ್ತಾನ ಮಣಿಸಿ ಸೆಮೀಸ್ ಗೆ ಲಗ್ಗೆ ಇಟ್ಟ ಕಿವೀಸ್

By: ಕ್ರಿಕೆಟ್ ಡೆಸ್ಕ್
Subscribe to Oneindia Kannada

ಮೊಹಾಲಿ, ಮಾರ್ಚ್ 23 : ಮಾರ್ಟಿನ್ ಗುಪ್ಟಿಲ್ ಅಬ್ಬರದ ಬ್ಯಾಟಿಂಗ್ (80) ಅರ್ಧಶತಕದ ನೆರವಿನಿಂದ ನ್ಯೂಜಿಲೆಂಡ್ ತಂಡ, ಪಾಕಿಸ್ತಾನ ತಂಡದ ವಿರುದ್ಧ 22 ರನ್ ಗಳ ಭರ್ಜರಿ ಗೆಲವು ಪಡೆದುಕೊಂಡು ವಿಶ್ವ ಟಿ-20 ಸೂಪರ್ 10 ಹಂತದಿಂದ ಸೆಮಿಫೈನಲ್ ಪ್ರವೇಶಿಸಿದ ಮೊದಲ ತಂಡವೆನಿಸಿಕೊಂಡಿದೆ.

ವಿಶ್ವ ಟಿ20: ತಂಡಗಳು | ವೇಳಾಪಟ್ಟಿ | ಗ್ಯಾಲರಿ |ಟೂರ್ನಿಗೆ ಫುಲ್ ಗೈಡ್

ಮಾರ್ಚ್ 22 ಮಂಗಳವಾರ ಮೊಹಾಲಿಯಲ್ಲಿ ಪಾಕಿಸ್ತಾನ ವಿರುದ್ಧದ ಗೆಲುವಿನೊಂದಿಗೆ ಆಡಿದ ಮೂರು ಪಂದ್ಯಗಳಲ್ಲಿ ಗೆದ್ದಿರುವ ಕಿವೀಸ್ ವಿಶ್ವ ಟಿ-20 ಕ್ರಿಕೆಟ್ ಟೂರ್ನಿಯಲ್ಲಿ ಸೆಮಿಫೈನಲ್ ಗೆ ಲಗ್ಗೆ ಹಾಕಿದೆ. ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡ ನ್ಯೂಜಿಲೆಂಡ್ ನಿಗದಿತ 20 ಓವರ್ ಗಳಲ್ಲಿ 180 ರನ್ ಗಳ ಬೃಹತ್ ಮೊತ್ತವನ್ನು ಕಲೆ ಹಾಕಿತು. ['ಬ್ರೇಕಿಂಗ್ ನ್ಯೂಸ್, ಕೊಹ್ಲಿ ಜತೆ ಸೆಲ್ಫಿ ಫೋಟೊ ಸಿಕ್ತು!']

ಇದನ್ನು ಬೆನ್ನಟ್ಟಿದ ಪಾಕ್ ಆರಂಭದಲ್ಲಿಯೇ ಶಾರ್ಜೀಲ್ ಖಾನ್ ಆರಂಭದಲ್ಲಿಯೇ ಬಿರುಸಿನ ಆಟಕ್ಕೆ ಕೈ ಹಾಕಿ 25 ಎಸೆತಗಳಲ್ಲಿ 47 ರನ್ ಸಿಡಿಸಿ ಪಾಕಿಸ್ತಾನ ರನ್ ವೇಗದ ಗತಿಯನ್ನು ಹೆಚ್ಚಿಸಿ ವಿಕೆಟ್ ಒಪ್ಪಿಸಿದರು. ನಾಲ್ಕನೇ ಓವರ್ ಮುಕ್ತಾಯದ ವೇಳೆಗಾಗಲೇ ಪಾಕ್ 50 ರ ಗಡಿ ದಾಟಿದಾಗಲೇ ಪಂದ್ಯ ಪಾಕ್ ಪರವಾಗಿತ್ತು.

World T20: New Zealand down Pakistan to enter semi-finals

ಅಮೀದ್ ಶಹಜಾದ್ ಮತ್ತು ಶಾರ್ಜೀಲ್ ಖಾನ್ ಜೋಡಿ ಹೊಡಿ ಬಡಿ ಆಟವಾಡುತ್ತಿದ್ದರು ಈ ವೇಳೆ ಆಡಂ ಮಿಲ್ನೆ ಬೌಲಿಂಗ್ ನಲ್ಲಿ ಶಾರ್ಜೀಲ್ ಖಾನ್ ಗುಪ್ಟಿಲ್ ಗೆ ಕ್ಯಾಚ್ ನೀಡಿ ನಿರ್ಗಮಿಸಿದರು. ಇದರಿಂದ ಮಿಲ್ನೆ ಪಾಕ್ ವೇಗದ ರನ್ ಗತಿಗೆ ಬ್ರೇಕ್ ಹಾಕಿದರು.

ನಂತರ ಬ್ಯಾಟಿಂಗ್ ಪಾಕ್ ಬ್ಯಾಟ್ಸ್ ಮನ್ ಗಳು ರನ್ ಗಳಿಸಲು ತಿಣುಕಾಡಿದರು. ಮಧ್ಯಮ ಕ್ರಮಾಂಕದಲ್ಲಿಕ್ರೀಸ್ ಗೆ ಬಂದ ನಾಯಕ ಅಫ್ರಿದಿಬಿರುಸಿನ ಆಟಕ್ಕಿಳಿದರೂ ಹೆಚ್ಚು ಹೊತ್ತು ಕ್ರೀಸ್ ನಲ್ಲಿ ನಿಲ್ಲದೆ ವಿಕೆಟ್ ಒಪ್ಪಿಸಿ ಪೇವಿಲಿಯನ್ ಹಾದಿ ಹಿಡಿದರು.

ಕೊನೆವರೆಗೆ ಕ್ರೀಸ್ ನಲ್ಲಿದ್ದ ಅನುಭವಿ ಆಟಗಾರ ಶೋಯುಬ್ ಮಲ್ಲಿಕ್ ಹಾಗೂ ಅಮೀದ್ ನಿಧಾನ ಗತಿಯ ಆಟದಿಂದ ಪಾಕ್ 20 ಓವರ್ ಗಳಲ್ಲಿ 5 ವಿಕೆಟ್ ಕಳೆದುಕೊಂಡು 158 ರನ್ ಗಳಿಸುವಷ್ಟೇ ಶಕ್ತವಾಯಿತು. ಇದರಿಂದ ಪಾಕ್ 22 ರನ್ ಗಳಿಂದ ಸೋಲೋಪ್ಪಿಕೊಂಡಿತು. ನ್ಯೂಜಿಲೆಂಡ್ ಪರ ಮಾರ್ಟಿನ್ ಗುಪ್ಟಿಲ್ 48 ಎಸೆತಗಳಲ್ಲಿ 80 ರನ್ ಬರಿಸಿ ನ್ಯೂಜಿಲೆಂಡ್ ಗೆಲುವಿಗೆ ಪಾತ್ರರಾದರು.

-
-
-
-
-
-
-
-
-
-
-
-
-
-

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ - ನೋಂದಣಿ ಉಚಿತ!

English summary
New Zealand cruised into the semi-finals of the ICC World Twenty20 with a comfortable 22-run win over Pakistan after opener Martin Guptill set the tone with a scintillating 48-ball 80 here today, continuing their dream run in the mega event
Please Wait while comments are loading...