ಕ್ರೋವ್ ನೆನಪಿಸಿದ ಕಿವೀಸ್ ಗೆಲುವಿನ ನಾಗಾಲೋಟ!

Posted By:
Subscribe to Oneindia Kannada

ಕೋಲ್ಕತ್ತಾ, ಮಾರ್ಚ್ 27: ಇತ್ತೀಚೆಗೆ ಕ್ಯಾನ್ಸರಿಗೆ ಬಲಿಯಾದ ನ್ಯೂಜಿಲೆಂಡ್ ನ ದಿಗ್ಗಜ ಮಾರ್ಟಿನ್ ಕ್ರೋವ್ ಅವರ ನೆನಪಿನಲ್ಲಿ ನ್ಯೂಜಿಲೆಂಡ್ ತಂಡ ಆಡುತ್ತಿದೆಯೆ? ಅವರಿಗೆ ಗೆಲುವಿನ ಅರ್ಪಣೆ ನೀಡುವಂತೆ ವಿಶ್ವ ಟಿ20 ಟೂರ್ನಿಯಲ್ಲಿ ಅಜೇಯವಾಗಿ ಲೀಗ್ ಹಂತವನ್ನು ಮುಗಿಸಿ ಸೆಮಿಫೈನಲ್ ಗೆ ಕಿವೀಸ್ ಸಿದ್ಧವಾಗುತ್ತಿದೆ.

ವಿಶ್ವ ಟಿ20: ತಂಡಗಳು | ವೇಳಾಪಟ್ಟಿ | ಗ್ಯಾಲರಿ |ಟೂರ್ನಿಗೆ ಫುಲ್ ಗೈಡ್

ಬಾಂಗ್ಲಾದೇಶ ತಂಡವನ್ನು 75ರನ್ ಗಳಿಂದ ಬಗ್ಗು ಬಡಿದ ಕಿವೀಸ್ ಶನಿವಾರ (ಮಾರ್ಚ್ 26) ದಂದು ಈಡೆನ್ ಗಾರ್ಡರ್ನ್ಸ್ ನಲ್ಲಿ ವಿಜಯೋತ್ಸವ ಆಚರಿಸಿತು. ಈ ಮೂಲಕ ವಿಶ್ವಕಪ್ ಗಳಲ್ಲಿ ಉತ್ತಮ ಪ್ರದರ್ಶನ ನೀಡುವ ದಾಖಲೆಯನ್ನು ನ್ಯೂಜಿಲೆಂಡ್ ಉತ್ತಮ ಪಡಿಸಿಕೊಂಡಿದೆ.[ನ್ಯೂಜಿಲೆಂಡ್ ನ ಕ್ರಿಕೆಟ್ ದಿಗ್ಗಜ ಮಾರ್ಟಿನ್ ಕ್ರೋವ್ ಇನ್ನಿಲ್ಲ]

ಟಾಸ್ ಗೆದ್ದ ಕಿವೀಸ್, ಸತತವಾಗಿ ವಿಕೆಟ್ ಕಳೆದುಕೊಂಡರೂ 20 ಓವರ್ ಗಳಲ್ಲಿ 8 ವಿಕೆಟ್​ಗೆ 145 ಸ್ಕೋರ್ ಮಾಡಿತು. ಬಾಂಗ್ಲಾದೇಶ ಪರ ಎಡಗೈ ವೇಗಿ ಮುಸ್ತಾಫಿಜುರ್ ರೆಹಮಾನ್ 22ಕ್ಕೆ 5 ಪಡೆದು ಯಶಸ್ವಿ ಬೌಲರ್ ಎನಿಸಿದರು.

ಭಾರತ ವಿರುದ್ಧ ದಿಟ್ಟ ಹೋರಾಟ ನಡೆಸಿ ರೋಚಕ ಸೋಲು ಕಂಡಿದ್ದ ಬಾಂಗ್ಲಾದೇಶ ಈ ಮೊತ್ತವನ್ನು ತಲುಪುವ ನಿರೀಕ್ಷೆ ಬಾಂಗ್ಲಾ ಅಭಿಮಾನಿಗಳಲ್ಲಿತ್ತು. ಆದರೆ, ನ್ಯೂಜಿಲೆಂಡ್ ಪರ ಇಶ್ ಸೋಧಿ 21ಕ್ಕೆ3 ಹಾಗೂ ಗ್ರಾಂಟ್ ಎಲಿಯಟ್ 12ಕ್ಕೆ3 ಬೌಲಿಂಗ್ ದಾಳಿಗೆ ಸಿಲುಕಿ 15.4 ಓವರ್​ಗಳಲ್ಲಿ ಕೇವಲ 70 ರನ್ ಮೊತ್ತಕ್ಕೆ ಆಲೌಟ್ ಆಗಿ ಸೊಲೊಪ್ಪಿಕೊಂಡಿತು.

-
-
-
-
ಕ್ರೋವ್ ನೆನಪಿಸಿದ ಕಿವೀಸ್ ಗೆಲುವಿನ ನಾಗಾಲೋಟ!

ಕ್ರೋವ್ ನೆನಪಿಸಿದ ಕಿವೀಸ್ ಗೆಲುವಿನ ನಾಗಾಲೋಟ!

-
-
-
-
-
-
-
-
-
-
-
-
-
-

2015ರ ವಿಶ್ವ ಕಪ್ : ವಿಶ್ವಕಪ್ ಹಾಗೂ ವಿಶ್ವ ಟಿ20ಯಲ್ಲಿ ಲೀಗ್ ಹಂತದಲ್ಲಿ ಸೋಲು ಕಾಣದ ದಾಖಲೆಯನ್ನು ನ್ಯೂಜಿಲೆಂಡ್ ಹೊಂದಿದೆ. ಕಳೆದ ವಿಶ್ವಕಪ್ ನಲ್ಲಿ ಆಸ್ಟ್ರೇಲಿಯಾ ವಿರುದ್ಧ ಮಾತ್ರ ಬ್ರೆಂಡನ್ ಮೆಕಲಮ್ ಪಡೆ ಸೋಲು ಕಂಡಿತ್ತು.

1992ರ ವಿಶ್ವಕಪ್ : ಮಾರ್ಟಿನ್ ಕ್ರೋವ್ ನಾಯಕತ್ವದ ತಂಡ ಸತತವಾಗಿ ಏಳು ಪಂದ್ಯಗಳನ್ನು ಗೆದ್ದು ರೌಂಡ್ ರಾಬಿನ್ ಲೀಗ್ ನಲ್ಲಿ ಅಜೇಯವಾಗಿ ಉಳಿದುಕೊಂಡಿತ್ತು. ಪಾಕಿಸ್ತಾನ ವಿರುದ್ಧ ಮಾತ್ರ ಸೋಲು ಕಂಡಿತ್ತು. (ಒನ್ಇಂಡಿಯಾ ಸುದ್ದಿ)

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
New Zealand maintained their clean record in the group stage of the ongoing T20 World Cup as they thrashed Bangladesh by 75 runs in the final league match at the Eden Gardens here on Saturday (March 26).
Please Wait while comments are loading...