ಕೊಹ್ಲಿಯನ್ನು ಕಿಚಾಯಿಸಿದ್ದ ಜಾನ್ಸನ್ ಬಾಯಲ್ಲಿ ಗುಣಗಾನ

By: ಕ್ರಿಕೆಟ್ ಡೆಸ್ಕ್
Subscribe to Oneindia Kannada

ನವದೆಹಲಿ, ಮಾರ್ಚ್ 28: ಮೊನ್ನೇ ಅಷ್ಟೇ ಇಂಡೋ-ಆಸೀಸ್ ಪಂದ್ಯಕ್ಕೂ ಮುನ್ನ ಭಾರತದ ಸ್ಫೋಟಕ ಬ್ಯಾಟ್ಸ್ ಮನ್ ವಿರಾಟ್ ಕೊಹ್ಲಿಯನ್ನು ಟ್ವಿಟ್ಟರ್ ನಲ್ಲಿ ಕಿಚಾಯಿಸಿದ್ದ ಆಸ್ಟ್ರೇಲಿಯಾದ ಮಾಜಿ ವೇಗಿ ಮಿಚೆಲ್ ಜಾನ್ಸನ್ ಅವರು ಈಗ ಕೊಹ್ಲಿ ಆಟಕ್ಕೆ ಮಾರು ಹೋಗಿ 'ಯು ಟರ್ನ್' ಹೊಡೆದಿದ್ದಾರೆ.

ಮಾರ್ಚ್ 27 ರಂದು ಭಾನುವಾರ ಮೊಹಾಲಿಯಲ್ಲಿ ನಡೆದ ಭಾರತ ಹಾಗೂ ಆಸೀಸ್ ಕ್ವಾಟರ್ ಫೈನಲ್ ಪಂದ್ಯದಲ್ಲಿ ಭಾರತವನ್ನು ಗೆಲ್ಲಿಸಿದ ವಿರಾಟ್ ಕೊಹ್ಲಿ ಆಟಕ್ಕೆ ಯಾರೆಲ್ಲ ಫಿದಾ ಆಗೋಲ್ಲ ಹೇಳಿ? ಟ್ವಿಟ್ಟರ್ ನಲ್ಲಿ ಕೊಹ್ಲಿಯನ್ನು ಕೆಣಕ್ಕಿದ್ದ ಆಸ್ಟ್ರೇಲಿಯಾದ ಮಾಜಿ ವೇಗಿ ಮಿಚೆಲ್ ಜಾನ್ಸನ್ ವಿರಾಟ್ ಆಟ ಅದ್ಭುತವಾಗಿತ್ತು ಎಂದು ಕೊಹ್ಲಿಯನ್ನು ಕೊಂಡಾಡುವ ಮೂಲಕ ಕೊಹ್ಲಿ ಪರ ಬ್ಯಾಟಿಂಗ್ ಮಾಡಿ ತಮ್ಮ ತಪ್ಪನ್ನ ತಿದ್ದುಕೊಂಡಿದ್ದಾರೆ.[ಅನುಷ್ಕಾ ಮೇಲೆ ಗೂಬೆ ಕೂರಿಸ್ಬೇಡಿ ಪ್ಲೀಸ್: ವಿರಾಟ್ ತರಾಟೆ]

ಆಸ್ಟ್ರೇಲಿಯಾ ಪಂದ್ಯ ನನಗೆ ಪ್ರೇರಣೆ ಎಂದು ವಿರಾಟ್ ಮಾಧ್ಯಮಗಳಿಗೆ ಹೇಳಿಕೆಯನ್ನು ನೀಡಿದ್ದರು. ಅದನ್ನೇ ಬಂಡವಾಳ ಮಾಡಿಕೊಂಡ ಜಾನ್ಸನ್ ಕಳೆದ 2015 ವಿಶ್ವ ಕಪ್ ನಲ್ಲಿ ನಡೆದಿದ್ದೇನು? ಭಾರತ ಆಸ್ಟ್ರೇಲಿಯಾ ನೀಡಿದ್ದ 329 ರನ್ ಚೇಸ್ ಮಾಡಲಿಕ್ಕೆ ಆಗದೆ ಪರಾಭವಗೊಂಡಿತ್ತು. ಆ ಪಂದ್ಯದಲ್ಲಿ ವಿರಾಟ್ ಕೊಹ್ಲಿ ವಿಫಲವಾಗಿದ್ದರು ಇದರ ಬಗ್ಗೆ ಟ್ವೀಟ್ ನಲ್ಲಿ ಜಾನ್ಸನ್ ಕೊಹ್ಲಿಗೆ ಅಣುಕಿಸಿದರು.[ಸೆಹ್ವಾಗ್ ನುಡಿದ ಟಿ20 ಭವಿಷ್ಯ: ಬಹುತೇಕ ನಿಜವಾಯ್ತು!]

ಉದ್ದೇಶ ಪೂರ್ವಕವಾಗಿ ವಿರಾಟ್ ನನ್ನು ಕಿಚಾಯಿಸಿದ್ದರು

ಉದ್ದೇಶ ಪೂರ್ವಕವಾಗಿ ವಿರಾಟ್ ನನ್ನು ಕಿಚಾಯಿಸಿದ್ದರು

ಅಷ್ಟೇ ಅಲ್ಲದೆ ಧೋನಿ, ಎಬಿ ಡಿ ವಿಲಿಯರ್ಸ್, ರೂಟ್, ವಿಲಿಯ್ಸನ್ ಸೇರಿದಂತೆ ಟಾಪ್ 5 ಬ್ಯಾಟ್ಸ್ ಮನ್ ಗಳ ಪಟ್ಟಿಯನ್ನು ಮಾಡಿ ಜಾನ್ಸನ್ ಟ್ವೀಟ್ ಮಾಡಿದ್ದರು. ಅದಕ್ಕೆ ಅಭಿಮಾನಿಯೊಬ್ಬ ಆಮ್ಲಾ ಮತ್ತು ಕೊಹ್ಲಿ ಹೆಸರು ಇಲ್ಲ ಎಂದು ಮರು ಟ್ವೀಟ್ ಮಾಡಿದ್ರು. ಅದಕ್ಕೆ ಉತ್ತರಿಸಿದ ಜಾನ್ಸನ್ ಆಮ್ಲಾ ಹೇಗೆ ಎಂದು ನನಗೆ ಗೊತ್ತು ಎಂದು ಹೇಳುವ ಮೂಲಕ ಉದ್ದೇಶ ಪೂರ್ವಕವಾಗಿ ವಿರಾಟ್ ನನ್ನು ಕಿಚಾಯಿಸಿದ್ದರು.

ಸಾಮಾಜಿಕ ಜಾಲ ತಾಣಗಳಲ್ಲಿ ಕೊಹ್ಲಿಯದ್ದೇ ಸುದ್ದಿ

ಸಾಮಾಜಿಕ ಜಾಲ ತಾಣಗಳಲ್ಲಿ ಕೊಹ್ಲಿಯದ್ದೇ ಸುದ್ದಿ

ಫೇಸ್ ಬುಕ್, ಟ್ವಿಟ್ಟರ್, ವಾಟ್ಸ್ ಅಪ್ ಗಳಲ್ಲಿ ಅಂತೂ ವಿರಾಟ್ ನದ್ದೇ ಸುದ್ದಿ, ಬಾರತ ಅಭಿಮಾನಿಗಳು ಅಷ್ಟೇ ಅಲ್ಲದೇ ವಿಶ್ವದ ಕ್ರಿಕೆಟ್ ಆಟಗಾರರು, ಮಾಜಿ ಕ್ರಿಕೆಟಿಗರು ವಿರಾಟ್ ಬ್ಯಾಟಿಂಗ್ ಗೆ ಕ್ಲೀನ್ ಬೌಲ್ಡ್ ಆಗಿ ಟೀಂ ಇಂಡಿಯಾಗೆ ಹಾಗೂ ವಿರಾಟ್ ಗೆ ಶುಭಾಶಯಗಳನ್ನು ಹೇಳಿದ್ದಾರೆ. ಮಾಡು ಇಲ್ಲವೇ ಪಂದ್ಯದಲ್ಲಿ ವಿರಾಟ್ ವೀರಾವೇಷಕ್ಕೆ ವಿಶ್ವ ಕ್ರಿಕೆಟ್ ಜಗತ್ತೇ ಕೊಹ್ಲಿಯನ್ನು ಕೊಂಡಾಡಿದೆ.

ಸಚಿನ್ ತೆಂಡೂಲ್ಕರ್ ಕೊಹ್ಲಿಯನ್ನು ಗುಣಗಾನ

ಸಚಿನ್ ತೆಂಡೂಲ್ಕರ್ ಕೊಹ್ಲಿಯನ್ನು ಗುಣಗಾನ

ಕೊಹ್ಲಿ ಬ್ಯಾಟಿಂಗ್ ಪಂದ್ಯ ವಿಶೇಷವಾಗಿತ್ತು ಎಂದು ಭಾರತದ ಮಾಜಿ ಕ್ರಿಕೆಟ್ ದಿಗ್ಗಜ ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ಕೊಹ್ಲಿಯನ್ನು ಗುಣಗಾನ ಮಾಡಿದ್ದಾರೆ, ಇಂಗ್ಲೆಂಡ್ ತಂಡ ಮಾಜಿ ನಾಯಕ ಮೈಕಲ್ ವಾನ್ ಟೀಟ್ ನಲ್ಲಿ ಈ ವರೆಗೆ ತಾವು ಕಂಡಿರುವ ಬೆಸ್ಟ್ ಚೇಸರ್ ಗಳಲ್ಲಿ ಕೊಹ್ಲಿ ಶ್ರೇಷ್ಠ ಆಟಗಾರನೆಂದು ಬಣ್ಣಿಸಿದ್ದಾರೆ.

ಟೀಕಾಕಾರರ ಬಾಯಿ ಮುಚ್ಚಿಸಿದ ಕೊಹ್ಲಿ

ಟೀಕಾಕಾರರ ಬಾಯಿ ಮುಚ್ಚಿಸಿದ ಕೊಹ್ಲಿ

ಬ್ರಿಯಾನ್ ಲಾರಾ, ಶೇನ್ ವಾರ್ನ್, ಮ್ಯಾಕ್ಸ್ ವೆಲ್, ಹರ್ಷಲ್ ಗಿಬ್ಸ್, ಫ್ಲಿಂಟಾಫ್ ಸೇರಿದಂತೆ ಅನೇಕ ಕ್ರಿಕೆಟ್ ತಾರೆಯರು ಸೇರಿದಂತೆ ಬಾಲಿವುಡ್ ಸ್ಟಾರ್ಸ್ ಅಮಿತಾಬ್ ಬಚ್ಚನ್, ಪೂನಮ್ ಪಾಂಡೆ ಹಾಗೂ ಮತ್ತಿತರರು ವಿರಾಟ್ ನನ್ನು ಗುಣಗಾನ ಮಾಡಿದ್ದಾರೆ. ಒಟ್ಟಿನಲ್ಲಿ ಕೊಹ್ಲಿ ತಮ್ಮ ಬ್ಯಾಟ್ ಮೂಲಕ ಆಸ್ಟ್ರೇಲಿಯಾ ವಿರುದ್ಧ ಉತ್ತಮ ಪ್ರದರ್ಶನ ನೀಡಿ ತಮ್ಮ ಬಗ್ಗೆ ಇಲ್ಲ ಸಲ್ಲದ ಮಾತನಾಡುವವರ ಬಾಯಿಯನ್ನು ಮುಚ್ಚಿಸಿದ್ದಾರೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Former Australian paceman Mitchell Johnson, who taunted Virat Kohli with "missing" comment on Saturday (March 26) has now described the batsman "too good" following his incredible knock last night (March 27).
Please Wait while comments are loading...