ಟಿ20 ವಿಶ್ವ ಕಪ್ ಟೂರ್ನಿಗೆ ಭಾರತದ 6 ಅಂಪೈರ್ ಗಳು

By: ರಮೇಶ್ ಬಿ
Subscribe to Oneindia Kannada

ಬೆಂಗಳೂರು. ಫೆ.25: ಮಾರ್ಚ್ ತಿಂಗಳಲ್ಲಿ ಪ್ರಾರಂಭವಾಗುವ ವಿಶ್ವ ಟಿ20 ಕ್ರಿಕೆಟ್ ಗೆ ಅಧಿಕಾರಿಗಳನ್ನು ಮತ್ತು ಅಂಪೈರ್ ಗಳನ್ನು ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿ ನೇಮಕ ಮಾಡಿದೆ.

ಭಾರತದ 5 ಜನ ತೀರ್ಪುಗಾರರು ಒಬ್ಬರು ಮ್ಯಾಚ್ ರೆಫರಿ ಸೇರಿದಂತೆ ಒಟ್ಟು 6 ಜನ ತೀರ್ಪುಗಾರರು ಈ ಬಾರಿಯ ಟಿ-20 ವಿಶ್ವಕಪ್ ಕ್ರಿಕೆಟ್ ನಲ್ಲಿ ತೀರ್ಪುಗಾರರಾಗಿ ಕಾರ್ಯನಿರ್ವಹಿಸಲಿದ್ದಾರೆಂದು ಐಸಿಸಿ ಹೇಳಿದೆ.[ಇಂಡಿಯಾ-ಪಾಕ್ ಹೈವೋಲ್ಟೇಜ್ ಪಂದ್ಯಕ್ಕೆ ರೆಫ್ರಿಗಳು ಯಾರು?]

ಫೆ.25 (ಗುರುವಾರ ) ನಡೆದ ಅಂತರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ ನ ಸದಸ್ಯರು ಮತ್ತು ಅಂತಾರಾಷ್ಟ್ರೀಯ ಹಿರಿಯ ಅಂಪೈರ್ ಗಳ ಅಸೋಸಿಯಟ್ ಸಮಿತಿಯ ಸದಸ್ಯರುಗಳ ಸಭೆಯಲ್ಲಿ ಈ ಬಾರಿಯ ಟಿ-20 ವಿಶ್ವಕಪ್ ಕ್ರಿಕೆಟ್ ಪಂದ್ಯಗಳ 24 ತೀರ್ಪುಗಾರರನ್ನು, 7 ರೆಫರಿ, ಟಿವಿ ಅಂಪೈರ್ ಗಳ ಪಟ್ಟಿಯನ್ನು ಬಿಸಿಸಿಐ ಮಾಧ್ಯಮಗಳಿಗೆ ಬಿಡುಗಡೆ ಮಾಡಿದೆ.

World T20 2016: Match officials announced, 6 Indians picked

113 ಅಂತರಾಷ್ಟ್ರಿಯ ಟಿ-20 ಪಂದ್ಯಗಳ ತೀರ್ಪುಗಾರರಾಗಿ ಕೆಲಸ ಮಾಡಿದ 7 ಅನುಭವಿ ಅಂಪೈರ್ ಗಳನ್ನು ವಿಶ್ವಕಪ್ ಗೆ ರೆಫರಿಗಳನ್ನಾಗಿ ಆಯ್ಕೆ ಮಾಡಲಾಗಿದೆ.

ಅನೀಲ್ ಚೌಧರಿ, ವಿನೀತ್ ಕುಲ್ಕರ್ಣಿ, ಸಿ.ಕೆ.ನಂದನ್, ರವಿ ಸುಂದರಂ, ಮತ್ತು ಸಂಷುದೀನ್, ಭಾರತ ಮೂಲದ 5 ಜನರ ಅಂಪೈರ್ ಗಳನ್ನು ಆಯ್ಕೆ ಮಾಡಿದೆ. ಇದರಲ್ಲಿ ಅನೀಲ್ ಚೌಧರಿ, ವಿನೀತ್ ಕುಲ್ಕರ್ಣಿ, ಸಿ.ಕೆ.ನಂದನ್, ಸಂಷುದೀನ್ ಇವರಿಗೆ ಚೊಚ್ಚಲ ಅಂತಾರಾಷ್ಟ್ರೀಯ ಟಿ-20 ವಿಶ್ವ ಕಪ್ ಕ್ರಿಕೆಟ್ ಪಂದ್ಯಗಳ ಅಂಪೈರ್ ಗಳಗಾಗಿ ಕಾರ್ಯನಿರ್ವಹಿಸಲು ಅವಕಾಶ ಸಿಕ್ಕಿದೆ.[ಏಷ್ಯಾಕಪ್ ಆರಂಭಕ್ಕೂ ಮುನ್ನ ಬೆಚ್ಚಿಬಿದ್ದ ಕ್ರಿಕೆಟರ್ಸ್]

ಭಾರತ ತಂಡದ ಮಾಜಿ ವೇಗದ ಬೌಲರ್ ಕರ್ನಾಟಕದ ಜಾವಗಲ್ ಎಕ್ಸ್ ಪ್ರೆಸ್ ಜಾವಗಲ್ ಶ್ರೀನಾಥ್ ಅವರು ಮ್ಯಾಚ್ ರೆಫರಿಯಾಗಿ ಆಯ್ಕೆಗೊಂಡಿದ್ದು ಇವರು ಟಿ-20 ವಿಶ್ವಕಪ್ ನ ಮೊದಲ ಪಂದ್ಯ ಮಾರ್ಚ್ 8 ರಂದು ನಾಗ್ಪುರದಲ್ಲಿ ನಡೆಯಲಿರುವ ಜಿಂಬಾಬ್ವೆ ಮತ್ತು ಹಾಂಗ್ ಕಾಂಗ್ ನಡುವಣ ಪಂದ್ಯಕ್ಕೆ ರೆಫರಿಯಾಗಿ ಕಾರ್ಯನಿರ್ವಹಿಸಲಿದ್ದಾರೆ. ಅಲೀಂದರ್ ಮತ್ತು ಇಯಾನ್ ಗೌಲ್ಡ್ ಮೈದಾನ ಅಂಪೈರ್ ಗಳಾಗಿ ಕೆಲಸ ಮಾಡಲಿದ್ದಾರೆ.

ಅಂಪೈರ್ ಗಳ ಪಟ್ಟಿ.

ಮ್ಯಾಚ್ ರೆಫರಿ (7)- ಡೇವಿಡ್ ಬೂನ್, ಕ್ರಿಸ್ ಬ್ರಾಡ್, ಜಿಫ್ ಕ್ರೋವ್, ರಂಜನ್ ಮದುಗಲೆ, ಅಂಡಿ ಪೈಕ್ರಾಫ್ಟ್, ರಿಚಿ ರಿಚರ್ಡ್ ಸನ್, ಮತ್ತು ಜಾವಗಲ್ ಶ್ರೀನಾಥ್.

ಅಂಪೈರ್ (24)- ಅನೀಲ್ ಚೌಧರಿ, ವಿನೀತ್ ಕುಲ್ಕರ್ಣಿ, ಸಿ.ಕೆ.ನಂದನ್, ರವಿ ಸುಂದರಂ, ಸಂಶೂದೀನ್, ಜೋಹಾನ್ ಕ್ಲಾಟ್, ಕ್ಯಾಥಿ ಕ್ರಾಸ್, ಅಲೀಂದರ್, ಕುಮಾರ್ ಧರ್ಮಸೇನಾ, ಮರೈಸ್ ಇರಾಸ್ಕನ್, ಸೈಮನ್ ಫ್ರೈ, ಕ್ರಿಸ್ ಗಫನೀ, ಮೈಕಲ್ ಗೌಗ್, ಇಯಾನ್ ಗೌಲ್ಡ, ರಿಚರ್ಡ್ ಇಲ್ಲಿಂಗ್ ವರ್ತ್, ರಿಚರ್ಡ್ ಕಟಲ್ಬರ್ಗ್, ವಿನೀತ್ ಕುಲಕರ್ಣಿ, ಸಿಕೆ ನಂದನ್, ನಗೇಲ್ ಲಯಂಗ್, ರಾಮೋರೆ ಮಾರ್ಟಿನೇಜ್, ಬ್ರೂಸ್ ಆಕ್ಸ್ ಫರ್ಡ್, ರುಚಿರ ಪಲೀಯಾಗುರಜ್, ಕ್ಲೇರ್ ಪೋಲೊಸಕ್, ಪೌಲ್ ರೀಫೆಲ್, ರವಿ ಸುಂದರಂ, ಸಂಶುದೀನ್, ರಾಡ್ ಟಕ್ಕರ್, ಜೋಯಿಲ್ ವಿಲ್ಸನ್ (ಒನ್ಇಂಡಿಯಾ ಸುದ್ದಿ)

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
India's 5 umpires and 1 match referee have been picked by the International Cricket Council (ICC) to officiate in the next month's World Twenty20 2016 tournament.
Please Wait while comments are loading...