ವಿಶ್ವ ಟಿ20: ಯುವರಾಜ್ ಬದಲಿಗೆ ಮನೀಶ್ ಪಾಂಡೆಗೆ ಸ್ಥಾನ

Posted By:
Subscribe to Oneindia Kannada

ಬೆಂಗಳೂರು, ಮಾರ್ಚ್ 29: ಆಸ್ಟ್ರೇಲಿಯಾ ವಿರುದ್ಧದ ವಿಶ್ವ ಟಿ20 ಪಂದ್ಯದಲ್ಲಿ ಗಾಯಗೊಂಡ ಯುವರಾಜ್ ಸಿಂಗ್ ಬದಲಿಗೆ ಕರ್ನಾಟಕದ ಮನೀಶ್ ಪಾಂಡೆಗೆ ಸ್ಥಾನ ಕಲ್ಪಿಸಲಾಗಿದೆ ಎಂದು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಪ್ರಕಟಿಸಿದೆ. ಆದರೆ, ಯುವರಾಜ್ ಸಿಂಗ್ ಅವರು ಪಂದ್ಯದ ವೇಳೆಗೆ ಗುಣಮುಖರಾದರೆ, ಮನೀಶ್ ಅವರಿಗೆ ಆಡುವ ಅವಕಾಶ ಸಿಗುವುದಿಲ್ಲ.

ವಿಶ್ವ ಟಿ20: ತಂಡಗಳು | ವೇಳಾಪಟ್ಟಿ | ಗ್ಯಾಲರಿ |ಟೂರ್ನಿಗೆ ಫುಲ್ ಗೈಡ್

34 ವರ್ಷದ ಎಡಗೈ ಆಲ್ ರೌಂಡರ್ ಯುವರಾಜ್ ಸಿಂಗ್ ಅವರು ಭಾನುವಾರ ನಡೆದ ಪಂದ್ಯದ ವೇಳೆಗೆ ಗಾಯಗೊಂಡಿದ್ದು, ಎಂಆರ್ಐ ಸ್ಕ್ಯಾನ್ ಮಾಡಲಾಗಿದೆ. ಸದ್ಯಕ್ಕೆ ಚಿಕಿತ್ಸೆ ಪಡೆಯುತ್ತಿದ್ದಾರೆ. [ವಿಶ್ವ ಟಿ20: ಸೆಮಿಫೈನಲ್ ಪಂದ್ಯ ಎಲ್ಲಿ? ಫುಲ್ ವೇಳಾಪಟ್ಟಿ]

Manish Pandey called up as standby for injured Yuvraj

15 ಸದಸ್ಯರ ತಂಡಕ್ಕೆ ಬದಲಿ ಆಟಗಾರರಾಗಿ ಮನೀಶ್ ಪಾಂಡೆ ಅವರನ್ನು ಸೇರಿಸಿಕೊಳ್ಳಲಾಗಿದೆ. ಒಂದು ವೇಳೆ ಯುವರಾಜ್ ಸಿಂಗ್ ಅವರು ಆಡಲು ಸಾಧ್ಯವೇ ಇಲ್ಲ ಎಂಬ ಪರಿಸ್ಥಿತಿ ಎದುರಾದರೆ ಮಾತ್ರ ಮನೀಶ್ ಗೆ ಸ್ಥಾನ ಸಿಗಲಿದೆ ಎಂದು ಬಿಸಿಸಿಐ ಸ್ಪಷ್ಟಪಡಿಸಿದೆ.

ಪಾಂಡೆಗೆ ಸ್ಥಾನ ಕಷ್ಟ:
ಟೀಂ ಇಂಡಿಯಾದ ಸೇರಿದ ಪಾಂಡೆ ಅವರು ಬೆಂಚ್ ನಲ್ಲೇ ಕೂರಬೇಕಾಗುತ್ತದೆ. ನಾಯಕ ಎಂಎಸ್ ಧೋನಿ ಅವರು ಯುವರಾಜ್ ಸಿಂಗ್ ಅವರ ಗಾಯದ ಬಗ್ಗೆ ಮಾತನಾಡುತ್ತಾ, ತಂಡದಲ್ಲಿ ಬೇರೆ ಬದಲಾವಣೆ ಮಾಡಬೇಕು ಎಂದು ನನಗೆ ಅನ್ನಿಸುತ್ತಿಲ್ಲ. ಯುವರಾಜ್ ಅವರು ಗುಣಮುಖರಾಗುತ್ತಾರೆ ಎಂಬ ನಂಬಿಕೆ ಇದೆ ಎಂದಿದ್ದಾರೆ.[ಅನುಷ್ಕಾ ಮೇಲೆ ಗೂಬೆ ಕೂರಿಸ್ಬೇಡಿ ಪ್ಲೀಸ್: ವಿರಾಟ್ ತರಾಟೆ]

ಅದಲ್ಲದೆ, ಇಲ್ಲಿ ತನಕ ಆಡುವ XI ನಲ್ಲಿ ಬದಲಾವಣೆ ಮಾಡದ ಧೋನಿ ಅವರು ಮನೀಶ್ ಗೆ ಸ್ಥಾನ ಕಲ್ಪಿಸುವುದು ಕಷ್ಟ. ಆಸ್ಟ್ರೇಲಿಯಾ ಪ್ರವಾಸದಲ್ಲೂ ಇದೇ ರೀತಿ ಆಯಿತು.

ಆದರೆ, ಸಿಕ್ಕ ಅವಕಾಶವನ್ನು ಸದುಪಯೋಗ ಪಡಿಸಿಕೊಂಡ ಮನೀಶ್ ಪಾಂಡೆ ಅವರು ಶತಕ ಸಿಡಿಸಿ ಭಾರತದ ಮಾನ ಕಾಪಾಡಿದ್ದರು. ಸಿಡ್ನಿಯಲ್ಲಿ ಶತಕ ಬಾರಿಸುವುದಕ್ಕೂ ಮುನ್ನ ಪಾಂಡೆ ಅವರು ಜುಲೈ 2015ರಲ್ಲಿ ಜಿಂಬಾಬ್ವೆ ವಿರುದ್ಧ 2 ಟಿ20 ಪಂದ್ಯವನ್ನಾಡಿದ್ದರು.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ - ನೋಂದಣಿ ಉಚಿತ!

English summary
An unfortunate injury to left-handed batsman Yuvraj Singh has opened the doors for Ajinkya Rahane and Manish Pandey, who was named as his cover ahead of India's semi-final against West Indies in the ICC World Twenty20 here on Thursday (March 31).
Please Wait while comments are loading...