ಬೆಂಗಳೂರಲ್ಲಿ ಬಾಂಗ್ಲಾದೇಶವನ್ನು ಬಗ್ಗುಬಡಿದ ಭಾರತದ ವನಿತೆಯರು

By: ಕ್ರಿಕೆಟ್ ಡೆಸ್ಕ್
Subscribe to Oneindia Kannada

ಬೆಂಗಳೂರು, ಮಾರ್ಚ್ 16: ಬೆಂಗಳೂರಿನ ಎಂ.ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಭಾರತ ಮತ್ತು ಬಾಂಗ್ಲಾದೇಶ ನಡುವಿನ ವಿಶ್ವ ಟ್ವೆಂಟಿ20 ಪಂದ್ಯದಲ್ಲಿ ಭಾರತದ ಮಹಿಳೆಯರು ಭರ್ಜರಿಯಾಗಿ 72ರನ್ ಗಳ ಜಯ ದಾಖಲಿಸಿದ್ದಾರೆ.

ತನ್ನ ಮೊದಲ ಪಂದ್ಯದಲ್ಲಿ ಗೆಲುವಿನ ಮೂಲಕ ಶುಭಾರಂಭ ಮಾಡುವ ಮೂಲಕ ತವರಿನಲ್ಲಿ ವಿಶ್ವ ಕಪ್ ಎತ್ತಿ ಹಿಡಿಯುವ ಭರವಸೆಯನ್ನು ಟೀಂ ಇಂಡಿಯಾದ ವನಿತೆಯರು ಮೂಡಿಸಿದ್ದಾರೆ.

ವಿಶ್ವ ಟಿ20: ತಂಡಗಳು | ವೇಳಾಪಟ್ಟಿ | ಗ್ಯಾಲರಿ

ಟಾಸ್ ಗೆದ್ದು ಫಿಲ್ಡಿಂಗ್ ಆಯ್ದುಕೊಂಡ ಬಾಂಗ್ಲಾ ತಂಡದ ಲೆಕ್ಕಾಚಾರವನ್ನು ತಲೆ ಕೆಳಗಾಗಿಸಿದ ಭಾರತ ನಿಗದಿತ. 20 ಓವರ್ ಗಳಲ್ಲಿ 5 ವಿಕೆಟ್ ಕಳೆದುಕೊಂಡು 163 ರನ್ ಗಳ ಬೃಹತ್ ಮೊತ್ತ ಪೇರಿಸಿತು. ನಾಯಕಿ ಮಿಥಾಲಿ ರಾಜ್ 35 ಎಸೆತಗಳಲ್ಲಿ 42 ಮತ್ತು ಕರ್ನಾಟಕದ ವನಿತಾ 24 ಎಸೆತಗಳಲ್ಲಿ ಅಮೋಘ 7 ಬೌಂಡರಿಗಳೊಂದಿಗೆ 38 ರನ್ ಸಿಡಿಸಿ ತವರಿನಾಂಗಳದಲ್ಲಿ ಮಿಂಚಿದರು.

ಪವರ್ ಪ್ಲೇ ನಲ್ಲಿ ಅರ್ಭಟಿಸಿ ಮೊದಲ ವಿಕೆಟ್ ಗೆ ಬರೋಬ್ಬರಿ 62 ರನ್ ಕಲೆ ಹಾಕಿ ತಂಡಕ್ಕೆ ಉತ್ತಮ ಅಡಿಪಾಯ ಹಾಕಿ ವಿಕೆಟ್ ಒಪ್ಪಿಸಿದರು. ನಂತರ ಮಧ್ಯಮ ಕ್ರಮಾಂಕದಲ್ಲಿ ಬ್ಯಾಟ್ ಮಾಡಲು ಬಂದ ಆಲ್ ರೌಂಡರ್ ಹರ್ಮನ್ ಪ್ರೀತ್ ಕೌರ್ 29 ಎಸೆತಗಳಲ್ಲಿ 2 ಮನಮೋಹಕ ಸಿಕ್ಸರ್ ನೊಂದಿಗೆ 40 ರನ್ ಗಳಿಸಿದರೆ, ಕರ್ನಾಟಕದ ಮತ್ತೊಬ್ಬ ಆಟಗಾರ್ತಿ ವೇದಾ ಕೃಷ್ಣಮೂರ್ತಿ 19ನೇ ಓವರ್ ನಲ್ಲಿ ಅಮೋಘ 3 ಸಿಕ್ಸರ್ ಗಳೊಂದಿಗೆ 36 ರನ್ ಬಾರಿಸಿ ಸ್ಲ್ಯಾಗ್ ಓವರ್ ಗಳನ್ನು ರನ್ ವೇಗ ಹೆಚ್ಚಿಸಿ ನಾಟೌಟ್ ಆಗಿ ಉಳಿದರು.

World T20: Indian women thrash Bangladesh in opener

ಬೃಹತ್ ಮೊತ್ತವನ್ನು ಬೆನ್ನಟ್ಟಿದ ಭಾಂಗ್ಲಾದೇಶ ತಂಡ ಆರಂಭದಲ್ಲಿಯೇ 5ನೇ ಓವರ್ ನಲ್ಲಿ ಕೇವಲ 19 ರನ್ ಗಳಿಸಿ ತನ್ನ ಪ್ರಮುಖ 2 ವಿಕೆಟ್ ಗಳನ್ನು ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತು.

ಭಾರತದ ವನಿತೆಯರ ಪ್ರಭಾವಿ ಬೌಲಿಂಗ್ ಮತ್ತು ಉತ್ತಮ ಕ್ಷೇತ್ರ ರಕ್ಷಣೆಯಿಂದ ಭಾಂಗ್ಲಾ ಆಟಗಾರ್ತಿಯರು ರನ್ ಗಳಿಸಲು ತಿಣುಕಾಡಿ 20 ಓವರ್ ಗಳಲ್ಲಿ ಕೇವಲ 94 ರನ್ ಗಳಿಸಲಷ್ಟೇ ಶಕ್ತವಾಯಿತು. ಬಾಂಗ್ಲಾ ಪರ ಯಾವುದೇ ಆಟಗಾರ್ತಿಯರು 30 ರನ್ ಗಳಿಸಲಿಲ್ಲ. ನಿಗರ್ ಸುಲ್ತಾನ ಅವರು 27 ರನ್ ಗಳಿಸಿ ನಾಟೌಟ್ ಆಗಿ ಉಳಿದರು.

ಭಾರತ ತಂಡ 20 ಓವರ್ ಗಳಲ್ಲಿ ಕೇವಲ ಒಂದೇ ಒಂದು ಅನಾವಶ್ಯಕ ರನ್ ನೀಡಿ ಗಮನ ಸೆಳೆದರು ಭಾರತದ ಹರ್ಮನ್ ಪ್ರೀತ್ ಕೌರ್ 29 ಎಸೆತಗಳಲ್ಲಿ 2 ಮನಮೋಹಕ ಸಿಕ್ಸರ್ ನೊಂದಿಗೆ 40 ರನ್ ಗಳಿಸಿ ಪಂದ್ಯ ಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು.

ಸ್ಕೋರ್ ವಿವರ; ಭಾರತ 20 ಓವರ್ ಗಳಲ್ಲಿ 163/5. ಮಿಥಾಲಿ ರಾಜ್ 42, ಹರ್ಮನ್ ಪ್ರೀತ್ ಕೌರ್ 40, ಫಾತೀಮಾ 31ಕ್ಕೆ2, ರುಮಾನಾ 35ಕ್ಕೆ2.

ಬಾಂಗ್ಲಾದೇಶ 20 ಓವರ್ ಗಳಲ್ಲಿ 91/5 ನಿಗರ್ ಸುಲ್ತಾನ 27, ಶರ್ಮಿನ್ ಅಖ್ತರ್, ಅನೂಜ ಪಾಟೀಲ್ 16ಕ್ಕೆ2, ಪೂನಮ್ ಯಾದವ್ 17ಕ್ಕೆ2.(ಐಎಎನ್ಎಸ್)

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Indian women's cricket team beat Bangladesh by 72 runs in the opening match of World Twenty20 here on Tuesday (March 15).
Please Wait while comments are loading...