ವಿಶ್ವ ಟಿ20: ಭಾರತ ವಿರುದ್ಧ ನ್ಯೂಜಿಲೆಂಡಿಗೆ 47 ರನ್ ಗಳ ಜಯ

Posted By:
Subscribe to Oneindia Kannada

ನಾಗ್ಪುರ, ಮಾರ್ಚ್ 15: ಐಸಿಸಿ ವಿಶ್ವ ಟ್ವೆಂಟಿ20 ಟೂರ್ನಿಯ ಸೂಪರ್ 10 ಗೇಮ್ ಗಳು ಮಾರ್ಚ್ 15ರಿಂದ ಆರಂಭವಾಯಿತು. ವಿಶ್ವ ಟಿ20 ಟೂರ್ನಿಯ ಭಾರತ ವಿರುದ್ಧದ ಪಂದ್ಯದಲ್ಲಿ ನ್ಯೂಜಿಲೆಂಡ್ ನಾಯಕ ಕೇನ್ ವಿಲಿಯಮ್ಸನ್ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಆಯ್ಕೆಮಾಡಿಕೊಂಡರು.ಕಿವೀಸ್ ತಂಡವನ್ನು 20 ಓವರ್ ಗಳಲ್ಲಿ 126/7 ಮೊತ್ತಕ್ಕೆ ಟೀಂ ಇಂಡಿಯಾ ನಿಯಂತ್ರಿಸಿತು. ಆದರೆ, ಅಲ್ಪಮೊತ್ತವನ್ನು ಚೇಸ್ ಮಾಡುವಲ್ಲಿ ಎಡವಿದ ಧೋನಿ ಪಡೆ 47 ರನ್ ಗಳ ಅಂತರದಿಂದ ಪಂದ್ಯವನ್ನು ಕಳೆದುಕೊಂಡಿದೆ.

ಪಂದ್ಯದ ಸ್ಕೋರ್ ಕಾರ್ಡ್

ವಿದರ್ಭ ಕ್ರಿಕೆಟ್ ಅಸೋಸಿಯೇಷನ್ (ವಿಸಿಎ) ಮೈದಾನದಲ್ಲಿ ರನ್ ಹೊಳೆ ಹರಿಯುವ ನಿರೀಕ್ಷೆ ಸುಳ್ಳಾಯಿತು. ಟೀಂ ಇಂಡಿಯಾ ಟೂರ್ನಿ ಗೆಲ್ಲುವ ನೆಚ್ಚಿನ ತಂಡ ಎನಿಸಿದ್ದರೂ, ಈ ಪಂದ್ಯ ಸೇರಿದಂತೆ ಕಿವೀಸ್ ವಿರುದ್ಧ ಕಳೆದ ಐದು ಪಂದ್ಯಗಳಲ್ಲಿ ಸೋಲು ಅನುಭವಿಸಿದೆ.
ವಿಶ್ವ ಟಿ20: ತಂಡಗಳು | ವೇಳಾಪಟ್ಟಿ | ಗ್ಯಾಲರಿ

* ಭಾರತದ ಮುಂದಿನ ಪಂದ್ಯ ಮಾರ್ಚ್ 19 (ಶನಿವಾರ) vs ಪಾಕಿಸ್ತಾನ, ಕೋಲ್ಕತ್ತಾ (7.30 PM IST)

* ನ್ಯೂಜಿಲೆಂಡ್ ತಂಡದ ಮುಂದಿನ ಪಂದ್ಯ ಮಾರ್ಚ್ 18(ಶುಕ್ರವಾರ) vs ಆಸ್ಟ್ರೇಲಿಯಾ, ಧರ್ಮಶಾಲ (3 PM IST)

(ಒನ್ ಇಂಡಿಯಾ ಸುದ್ದಿ) ಹೆಚ್ಚಿನ ವಿವರಗಳನ್ನು ಮುಂದೆ ಓದಿ...

ಕಣಕ್ಕಿಳಿದ ಭಾರತ-ಕಿವೀಸ್ ತಂಡಗಳು ಹೀಗಿವೆ

ಕಣಕ್ಕಿಳಿದ ಭಾರತ-ಕಿವೀಸ್ ತಂಡಗಳು ಹೀಗಿವೆ

ಟೀಂ ಇಂಡಿಯಾ: ಎಂಎಸ್ ಧೋನಿ (ನಾಯಕ), ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ , ಶಿಖರ್ ಧವನ್, ಸುರೇಶ್ ರೈನಾ, ಯುವರಾಜ್ ಸಿಂಗ್, ರವೀಂದ್ರ ಜಡೇಜ, ರವಿಚಂದ್ರನ್ ಅಶ್ವಿನ್, ಜಸ್ಪ್ರೀತ್ ಬೂಮ್ರಾ, ಹಾರ್ದಿಕ್ ಪಾಂಡ್ಯ, ಆಶಿಶ್ ನೆಹ್ರಾ.
ನ್ಯೂಜಿಲೆಂಡ್ : ಕೇನ್ ವಿಲಿಯಮ್ಸನ್, ಕೋರಿ ಆಂಡರ್​ಸನ್, ಗ್ರಾಂಟ್ ಎಲಿಯಟ್, ಮಾರ್ಟಿನ್ ಗುಪ್ಟಿಲ್, ಆಡಂ ಮಿಲ್ನೆ, ಕಾಲಿನ್ ಮುನ್ರೋ, ನಥಾನ್ ಮೆಕ್ಕಲಂ, ಲ್ಯೂಕ್ ರಾಂಚಿ, ಮಿಚೆಲ್ ಸ್ಯಾಂಟ್ನೆರ್, ಇಶ್ ಸೋಧಿ, ರಾಸ್ ಟೇಲರ್

ರನ್ ಚೇಸ್ ನಲ್ಲಿ ಎಡವಿದ ಧೋನಿ ಬಳಗ

ರನ್ ಚೇಸ್ ನಲ್ಲಿ ಎಡವಿದ ಧೋನಿ ಬಳಗ

* ಆರಂಭಿಕ ಆಘಾತ, ಧವನ್ 1, ರೋಹಿತ್ 5 ರನ್ ಗಳಿಸಿ ಔಟ್
* ಸುರೇಶ್ ರೈನಾ 1 ರನ್ , ಯುವರಾಜ್ ಸಿಂಗ್ 4 ರನ್ ಗಳಿಸಿ ವಿಫಲ
* ವಿರಾಟ್ ಕೊಹ್ಲಿ 23 (27 ಎಸೆತ, 2x4) ಗಳಿಸಿ ಔಟ್
* ಆಲ್ ರೌಂಡರ್ಸ್ ಹಾರ್ದಿಕ್ ಪಾಂಡ್ಯ 1೧, ರವೀಂದ್ರ ಜಡೇಜ ಶೂನ್ಯಕ್ಕೆ ಪತನ
* ನಾಯಕ ಧೋನಿ 30 ಎಸೆತಗಳಲ್ಲಿ 30 ರನ್ ಗಳಿಸಿದ್ದು ಫಲ ನೀಡಲಿಲ್ಲ
* ಅಶ್ವಿನ್ 10 ರನ್ ಗಳಿಸಿದರೂ ಪ್ರಯೋಜನವಾಗಲಿಲ್ಲ. 79/10

ಕಿವೀಸ್ ಇನ್ನಿಂಗ್ಸ್

ಕಿವೀಸ್ ಇನ್ನಿಂಗ್ಸ್

* ಪಂದ್ಯದ 2ನೇ ಎಸೆತದಲ್ಲೇ ಮಾರ್ಟಿನ್ ಗಪ್ಟಿಲ್ ಔಟ್. ಆಶ್ವಿನ್ ಗೆ ವಿಕೆಟ್ (1/32)
* ಕೇನ್ ವಿಲಿಯಮ್ಸನ್ 8, ಕಾಲಿನ್ ಮನ್ರೋ 7 ಕೂಡಾ ವಿಫಲ
* ಕೋರಿ ಆಂಡರ್ಸನ್ 34 (43 ಎ, 3x4), ಸಾಂಟ್ನರ್ 17 ಎಸೆತಗಳಲ್ಲಿ ೨ ಬೌಂಡರಿ ಇದ್ದ 18 ರನ್
* ವಿಕೆಟ್ ಕೀಪರ್ ಲೂಕ್ ರಾಂಚಿ ಅಜೇಯ 21 ರನ್ (11ಎ, 2x4, 1x6)
* ಬೂಮ್ರಾ 1/15, ರೈನಾ 1/16, ನೆಹ್ರಾ 3 ಓವರ್ ಗಳಲ್ಲಿ 1/20 ಉತ್ತಮ ಬೌಲಿಂಗ್
* 13ಇತರೆ ರನ್, 2 ರನೌಟ್(ಸುರೇಶ್ ರೈನಾ, ಶಿಖರ್ ಧವನ್ ಎಸೆತ)

ಸೋತ ಪಂದ್ಯದಲ್ಲೂ ಧೋನಿ ವಿಶ್ವದಾಖಲೆ

ಸೋತ ಪಂದ್ಯದಲ್ಲೂ ಧೋನಿ ವಿಶ್ವದಾಖಲೆ

ವಿದರ್ಭ ಕ್ರಿಕೆಟ್ ಅಸೋಸಿಯೇಷನ್ (ವಿಸಿಎ) ಮೈದಾನದಲ್ಲಿ ಮಂಗಳವಾರ ನಡೆದ ನ್ಯೂಜಿಲೆಂಡ್ ವಿರುದ್ಧದ ಸೂಪರ್ 10 ಘಟ್ಟದ ಮೊದಲ ಪಂದ್ಯದಲ್ಲಿ ಆಡುವ ಮುಲಕ ಎಂಎಸ್ ಧೋನಿ ಅವರು ದಾಖಲೆ ಬರೆದರು. ಮಹೇಂದ್ರ ಸಿಂಗ್ ಧೋನಿ ಅವರು ನಾಯಕರಾಗಿ ಸತತವಾಗಿ ಆರು ವಿಶ್ವ ಟ್ವೆಂಟಿ 20 ಟೂರ್ನಮೆಂಟ್ ನಲ್ಲಿ ಆಡಿದ ಹೊಸ ದಾಖಲೆ ಹೊಂದಿದ್ದಾರೆ.

ಭಾರತ ವಿರುದ್ಧ 0-5 ನ್ಯೂಜಿಲೆಂಡ್ ತಂಡ

ನಾಯಕನಾಗಿ ಆಯ್ಕೆಯಾದ ಮೊದಲ ಟೂರ್ನಿಯನ್ನು ಗೆಲ್ಲಿಸಿಕೊಟ್ಟ ಧೋನಿ ಮತ್ತೊಮ್ಮೆ ಕಪ್ ಎತ್ತಲು ಸಾಧ್ಯವಾವಾಗಿಲ್ಲ. ಟಿ 20 ಮಾದರಿಯಲ್ಲಿ ಭಾರತ ವಿರುದ್ಧ 0-5 ನ್ಯೂಜಿಲೆಂಡ್ ತಂಡ ಅಂತರದ ಮುನ್ನಡೆ ಕಾಯ್ದುಕೊಂಡಿದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
New Zealand captain Kane Williamson won the toss and elected to bat first against India in their opening Super 10 game of the ICC World Twenty20 here tonight (March 15) at the Vidarbha Cricket Association (VCA) Stadium.India restrict NZ to 126/7
Please Wait while comments are loading...