ಆಸೀಸ್ ವಿರುದ್ಧ ಭಾರತಕ್ಕೆ' ವಿರಾಟ್' ಜಯ, ಸೆಮೀಸ್ ಗೆ ಲಗ್ಗೆ

Posted By:
Subscribe to Oneindia Kannada

ಮೊಹಾಲಿ, ಮಾರ್ಚ್ 27 : ವಿಶ್ವ ಟಿ20 ಟೂರ್ನಮೆಂಟ್ ನ 'ಕ್ವಾರ್ಟರ್ ಫೈನಲ್' ಪಂದ್ಯದಲ್ಲಿ ಆಸ್ಟ್ರೇಲಿಯಾ ನೀಡಿದ್ದ ಸ್ಪರ್ಧಾತ್ಮಕ ಮೊತ್ತ (161 ರನ್) ಚೇಸ್ ಮಾಡಿದ ಟೀಂ ಇಂಡಿಯಾ ಸೆಮಿಫೈನಲ್ ಗೆ ಲಗ್ಗೆ ಇಟ್ಟಿದೆ. ಮಧ್ಯಮ ಕ್ರಮಾಂಕ ಮ್ಯಾಜಿಕಲ್ ಬ್ಯಾಟ್ಸ್ ಮನ್ ವಿರಾಟ್ ಕೊಹ್ಲಿ ಅವರು ಅಜೇಯ 82 ರನ್ ಗಳಿಸಿ ತಂಡದ ಗೆಲುವಿಗೆ ಕಾರಣರಾದರು.

ವಿಶ್ವ ಟಿ20: ತಂಡಗಳು | ವೇಳಾಪಟ್ಟಿ | ಗ್ಯಾಲರಿ |ಟೂರ್ನಿಗೆ ಫುಲ್ ಗೈಡ್

161 ರನ್ ಚೇಸ್ : [ಪಂದ್ಯದ ಸ್ಕೋರ್ ಕಾರ್ಡ್]
* ರೋಹಿತ್ ಶರ್ಮ ಹಾಗೂ ಶಿಖರ್ ಧವನ್ ಉತ್ತಮ ಆರಂಭ ನೀಡುವ ಕುರುಹು ತೋರಿದರೂ ಮೊದಲ ಆರು ಓವರ್ ಗಳಲ್ಲೇ ಇಬ್ಬರು ಪೆವಿಲಿಯನ್ ಸೇರಿದರು. [ವಿಶ್ವ ಟಿ20: ಇಂಗ್ಲೆಂಡ್ ತಂಡ ಸೆಮೀಸ್ ಗೆ ಲಗ್ಗೆ]

* ರೋಹಿತ್ ಶರ್ಮ 12 ಎಸೆತಗಳಲ್ಲಿ ಒಂದು ಬೌಂಡರಿ ಇದ್ದ 17 ರನ್ ಗಳಿಸಿ ವಾಟ್ಸನ್ ಗೆ ಕ್ಲೀನ್ ಬೋಲ್ಡ್ ಆದರು.

* ಶಿಖರ್ ಧವನ್ ಒಂದು ಬೌಂಡರಿ, ಒಂದು ಸಿಕ್ಸರ್ ಬಾರಿಸಿ 12 ಎಸೆತಗಳಲ್ಲಿ 13 ರನ್ ಗಳಿಸಿ ಔಟಾದರು.
* 39 ಎಸೆತಗಳಲ್ಲಿ ಅರ್ಧಶತಕ ಪೂರೈಸಿದ ವಿರಾಟ್ ಕೊಹ್ಲಿ ಮತ್ತೊಮ್ಮೆ ರನ್ ಚೇಸ್ ನಲ್ಲಿ ಭಾರತಕ್ಕೆ ಆಸರೆಯಾದರು.
* ಸುರೇಶ್ ರೈನಾ 7 ಎಸೆತಗಳಲ್ಲಿ 10 ರನ್ ಗಳಿಸಿ ವಾಟ್ಸ ನ್ ಗೆ ವಿಕೆಟ್ ಒಪ್ಪಿಸಿದರು. [ವೆಸ್ಟ್ ಇಂಡೀಸ್‌ ಸೆಮಿಫೈನಲಿಗೆ]
* ಯುವರಾಜ್ ಸಿಂಗ್ ಅವರು ಒಂದು ಬೌಂಡರಿ, ಒಂದು ಸಿಕ್ಸರ್ ಬಾರಿಸಿ 18 ಎಸೆತಗಳಲ್ಲಿ 21 ರನ್ ಗಳಿಸಿ ಕೊಹ್ಲಿಗೆ ಸಾಥ್ ನೀಡಿದರು.
* 51 ಎಸೆತಗಳಲ್ಲಿ ಅಜೇಯ 82 ರನ್ (9x4, 6x2) ಗಳಿಸಿ ಭಾರತಕ್ಕೆ ಜಯ ತಂದಿತ್ತು, ಪಂದ್ಯಶ್ರೇಷ್ಠ ಎನಿಸಿದರು.

Virat Kohli

ವಿಶ್ವ ಟಿ20 ಟೂರ್ನಮೆಂಟ್ ನ 'ಕ್ವಾರ್ಟರ್ ಫೈನಲ್' ಪಂದ್ಯದಲ್ಲಿ ಟೀಂ ಇಂಡಿಯಾ ವಿರುದ್ಧ ಆಸ್ಟ್ರೇಲಿಯಾ ಭರ್ಜರಿ ಆರಂಭ ಪಡೆದುಕೊಂಡಿತು. ಮೊದಲ ನಾಲ್ಕು ಓವರ್ ಗಳಲ್ಲೇ 50 ರನ್ ಗಡಿ ದಾಟಿತು. 12.5 ಓವರ್ ಗಳಲ್ಲಿ ನೂರರ ಗಡಿ ದಾಟಿದ ಆಸೀಸ್ ಕೊನೆಗೆ 20 ಓವರ್ ಗಳಲ್ಲಿ 160/6 ಸ್ಕೋರ್ ಮಾಡಿತು. [ಕಿವೀಸ್ ಗೆಲುವಿನ ನಾಗಾಲೋಟ!]

* ಉಸ್ಮನ್ ಖವಾಜಾ 16 ಎಸೆತಗಳಲ್ಲಿ 6 ಬೌಂಡರಿ ಇದ್ದ 26 ರನ್ ಚೆಚ್ಚಿದರೆ, ಅರೋನ್ ಫಿಂಚ್ 34 ಎಸೆತಗಳಲ್ಲಿ 43 ರನ್ ಗಳಿಸಿ ಉತ್ತಮ ಆರಂಭ ಒದಗಿಸಿದರು. [ಸೆಹ್ವಾಗ್ ಆಯ್ಕೆಯ ಫೇವರಿಟ್ 4 ತಂಡ]

* ವಾರ್ನರ್ 6, ನಾಯಕ ಸ್ಮಿತ್ 2 ರನ್ - ವೈಫಲ್ಯದ ನಡುವೆ ಮ್ಯಾಕ್ಸ್ ವೆಲ್ 18 ಎಸೆತಗಳಲ್ಲಿ 31 ಅಬ್ಬರ ನೋಡಲು ಸಿಕ್ಕಿತು.
* ವಾರ್ನರ್ 16 ಎಸೆತಗಳಲ್ಲಿ 18 ರನ್, ನೆವಿಲ್ 2 ಎಸೆತಗಳಲ್ಲಿ 10 ರನ್ ಚೆಚ್ಚಿ ತಂಡದ ಮೊತ್ತ ಹೆಚ್ಚಿಸಿದರು.
* ಅಶ್ವಿನ್, ನೆಹ್ರಾ, ಬೂಮ್ರಾ, ಯುವರಾಜ್ ಸಿಂಗ್ ತಲಾ ಒಂದು ವಿಕೆಟ್ ಪಡೆದರು.

ಇದಕ್ಕೂ ಮೊದಲು ಇಲ್ಲಿನ ಪಿಸಿಎ ಸ್ಟೇಡಿಯಂನಲ್ಲಿ ಭಾನುವಾರ ರಾತ್ರಿ (ಮಾರ್ಚ್ 27) ಟಾಸ್ ಗೆದ್ದ ಆಸ್ಟ್ರೇಲಿಯಾ ನಾಯಕ ಸ್ಟೀವ್ ಸ್ಮಿತ್ ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡರು.

Usman Khwaja

ಈ ಪಂದ್ಯವನ್ನು ಗೆದ್ದವರು ಎರಡನೇ ಸೆಮಿಫೈನಲ್ ಹಂತದಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ಮಾರ್ಚ್ 31 ರಂದು ಮುಂಬೈನಲ್ಲಿ ಸೆಣಸಬೇಕಾಗುತ್ತದೆ. ಮೊದಲ ಸೆಮಿಫೈನಲ್ ನಲ್ಲಿ ನ್ಯೂಜಿಲೆಂಡ್ ಹಾಗೂ ಇಂಗ್ಲೆಂಡ್ ಸೆಣಸಾಡಲಿದ್ದು, ದೆಹಲಿಯಲ್ಲಿ ಮಾರ್ಚ್ 30 ರಂದು ಪಂದ್ಯ ನಡೆಯಲಿದೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Please Wait while comments are loading...