ಧೋನಿ ನಾಯಕತ್ವದಲ್ಲಿ ವಿಶ್ವ ಟಿ20 ಗೆಲ್ಲಲು ಸಾಧ್ಯವಿಲ್ವಂತೆ!

Posted By:
Subscribe to Oneindia Kannada

ಬೆಂಗಳೂರು, ಮಾರ್ಚ್ 22: ಮಹೇಂದ್ರ ಸಿಂಗ್ ಧೋನಿ ಅವರ ಒಳ್ಳೆ ದಿನಗಳು ಈ ವಿಶ್ವ ಟಿ20 ಟೂರ್ನಿಯೊಂದಿಗೆ ಮುಕ್ತಾಯವಾಗಲಿದೆಯಂತೆ. ಧೋನಿ ನಾಯಕತ್ವದ ಈ ಬಾರಿ ಕಪ್ ಎತ್ತಲು ಟೀಂ ಇಂಡಿಯಾಕ್ಕೆ ಸಾಧ್ಯವಿಲ್ಲ. ಒಂದು ವೇಳೆ ವಿರಾಟ್ ಕೊಹ್ಲಿ ತಂಡವನ್ನು ಮುನ್ನಡೆಸಿದರೆ ಮಾತ್ರ ಭಾರತ ಹೊಸ ಇತಿಹಾಸ ನಿರ್ಮಿಸಬಹುದು ಎಂದು ಸಂಶೋಧನಾತ್ಮಕ ಭವಿಷ್ಯಗಾರ ಗ್ರೀನ್ ಸ್ಟೋನ್ ಲೋಬೊ ಹೇಳಿದ್ದಾರೆ.

ವಿಶ್ವ ಟಿ20: ತಂಡಗಳು | ವೇಳಾಪಟ್ಟಿ | ಗ್ಯಾಲರಿ |ಟೂರ್ನಿಗೆ ಫುಲ್ ಗೈಡ್

2007ರಲ್ಲಿ ಚೊಚ್ಚಲ ಬಾರಿಗೆ ವಿಶ್ವ ಟ್ವೆಂಟಿ20 ಕಪ್ ಎತ್ತಿದ್ದ ಎಂಎಸ್ ಧೋನಿ ಪಡೆಗೆ ಈ ಬಾರಿ ಸ್ವಲ್ಪದರಲ್ಲಿ ಕಪ್ ಮಿಸ್ ಆಗಲಿದೆ. ಫೈನಲ್ ಹಂತ ತಲುಪಿದರೂ ರನ್ನರ್ ಆಪ್ ಸ್ಥಾನಕ್ಕೆ ತೃಪ್ತಿ ಪಡಬೇಕಾಗುತ್ತದೆ ಎಂದು ಲೊಬೋ ಹೇಳಿದ್ದಾರೆ.[ಟ್ರಾಲ್ಸ್ : ಕೊಹ್ಲಿ ಪರಿಶ್ರಮ vs ಧೋನಿ ಭಕ್ತರು]

Astrologer predicts winner and it is not India

ಅತ್ಯಂತ ಸಮತೋಲನದಿಂದ ಕೂಡಿರುವ ದಕ್ಷಿಣ ಆಫ್ರಿಕಾ ತಂಡ ಈ ಬಾರಿ ಕಷ್ಟಪಟ್ಟು ಫೈನಲ್ ತಲುಪಲಿದ್ದು, ವಿಶ್ವ ಟಿ20 ಕಪ್ ಗೆಲ್ಲುವ ಸಾಮರ್ಥ್ಯ ಹೊಂದಿದೆ. ಫಾಫ್ ಡುಪ್ಲೆಸಿಸ್ ಪಡೆ ಮೊದಲ ಬಾರಿಗೆ 'ಚೋಕರ್ಸ್' ಟ್ಯಾಗ್ ಕಳಚಲಿದೆ. [ಸೆಹ್ವಾಗ್ ಆಯ್ಕೆಯ ಫೇವರಿಟ್ 4 ತಂಡ?]

ಉಳಿದಂತೆ, ಆಸ್ಟ್ರೇಲಿಯಾ ಹಾಗೂ ಪಾಕಿಸ್ತಾನ ಸೆಮಿಫೈನಲ್ ಹಂತ ತಲುಪುವ ನಿರೀಕ್ಷೆಯಿದೆ. ಒಂದು ವೇಳೆ ಪಾಕಿಸ್ತಾನ ಏನಾದರೂ ಫೈನಲ್ ತಲುಪಿದರೆ ಮತ್ತೊಮ್ಮೆ ಕಪ್ ಗೆದ್ದು ಹೊಸ ಇತಿಹಾಸ ನಿರ್ಮಿಸುತ್ತಾರೆ.

ಬಾಂಗ್ಲಾದೇಶ ವಿರುದ್ಧ 55 ರನ್ ಗಳ ಉತ್ತಮ ಜಯ ದಾಖಲಿಸಿದ ಶಾಹೀದ್ ಅಫ್ರಿದಿ ಪಡೆ, ಭಾರತ ವಿರುದ್ಧ ಈಡೆನ್ ಗಾರ್ಡನ್ಸ್ ನಲ್ಲಿ 6 ವಿಕೆಟ್ ಗಳ ಅಂತರದಲ್ಲಿ ಸೋಲು ಕಂಡಿದೆ.

ಭಾರತ ತನ್ನ ಮೊದಲ ಪಂದ್ಯದಲ್ಲಿ ನ್ಯೂಜಿಲೆಂಡ್ ವಿರುದ್ಧ 126ರನ್ ಚೇಸ್ ಮಾಡಲಾಗದೆ 79ರನ್ ಗಳಿಗೆ ಸರ್ವಪತನ ಕಂಡಿತ್ತು. ಸದ್ಯದ ಪರಿಸ್ಥಿತಿಯಲ್ಲಿ ನ್ಯೂಜಿಲೆಂಡ್ ತಂಡ ಉತ್ತಮ ಪ್ರದರ್ಶನ ನೀಡುತ್ತಿದೆ. ಆದರೆ, ಭವಿಷ್ಯಗಾರರ ಲೆಕ್ಕಾಚಾರವೇ ಬೇರೆಯಾಗಿದೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Is Mahendra Singh Dhoni's quota of success has ended? According to research-based astrologer Greenstone Lobo, Dhoni's men have little chance of winning the ongoing T20 World Cup and India's dream could be realised only if Virat Kohli leads the side.
Please Wait while comments are loading...