ಭಾರತ ವಿರುದ್ಧ ಗೆಲ್ಲುವ ಸಾಮರ್ಥ್ಯ ಪಾಕಿಸ್ತಾನಕ್ಕಿದೆ: ಗವಾಸ್ಕರ್

Posted By:
Subscribe to Oneindia Kannada

ಕೋಲ್ಕತ್ತಾ, ಮಾರ್ಚ್ 17: ವಿಶ್ವ ಟಿ20 ಟೂರ್ನಮೆಂಟ್ ನ ಸೂಪರ್ 10 ಹಂತದ ಬಹುನಿರೀಕ್ಷಿತ ಪಂದ್ಯದ ಬಗ್ಗೆ ಮಾಜಿ ಕ್ರಿಕೆಟರ್ ಸುನಿಲ್ ಗವಾಸ್ಕರ್ ಅವರು ತಮ್ಮ ಅನಿಸಿಕೆ, ಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ. ಸದ್ಯದ ಮಟ್ಟಿಗೆ ಭಾರತಕ್ಕಿಂತ ಪಾಕಿಸ್ತಾನ ತಂಡ ಮಾನಸಿಕವಾಗಿ ಸಮತೋಲನ ಕಂಡುಕೊಂಡಿದ್ದು, ಗೆಲ್ಲುವ ಫೇವರೀಟ್ ಎನಿಸಿಕೊಂಡಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.

ವಿಶ್ವ ಟಿ20: ತಂಡಗಳು | ವೇಳಾಪಟ್ಟಿ | ಗ್ಯಾಲರಿ |ಟೂರ್ನಿಗೆ ಫುಲ್ ಗೈಡ್

ಕೋಲ್ಕತ್ತಾದ ಈಡೆನ್ ಗಾರ್ಡನ್ಸ್ ಮೈದಾನದಲ್ಲಿ ಶನಿವಾರ(ಮಾರ್ಚ್ 19)ಭಾರತ ಹಾಗೂ ಪಾಕಿಸ್ತಾನ ನಡುವೆ ಮಹತ್ವದ ಪಂದ್ಯ ನಡೆಯಲಿದೆ. ಟೂರ್ನಿ ಆರಂಭಕ್ಕೂ ಮುನ್ನ ಕಪ್ ಎತ್ತುವ ನೆಚ್ಚಿನ ತಂಡ ಎನಿಸಿಕೊಂಡಿದ್ದ ಟೀಂ ಇಂಡಿಯಾ ಈಗ ಪಂದ್ಯ ಗೆಲ್ಲಲೇಬೇಕಾದ ಅನಿವಾರ್ಯತೆಯಲ್ಲಿ ಸಿಲುಕಿದೆ.[ಮತ್ತೊಮ್ಮೆ 'ಮೌಕಾ ಮೌಕಾ' ಆಡ್]

World T20: India may not be able to beat Pakistan this time, feels Sunil Gavaskar

ಮೊದಲ ಪಂದ್ಯದಲ್ಲಿ ನ್ಯೂಜಿಲೆಂಡ್ ವಿರುದ್ಧ ಸೋಲು ಕಂಡ ಧೋನಿ ಪಡೆ ಈಗ ಸಹಜವಾಗಿ ಒತ್ತಡದಲ್ಲಿದೆ. ಇನ್ನೊಂದೆಡೆ ಪಾಕಿಸ್ತಾನ ತಂಡ ತನ್ನ ಮೊದಲ ಪಂದ್ಯದಲ್ಲಿ ಬಾಂಗ್ಲಾದೇಶ ವಿರುದ್ಧ ಭರ್ಜರಿ ಜಯ ದಾಖಲಿಸಿದೆ. ಮುಖ್ಯವಾಗಿ ಶಾಹೀದ ಅಫ್ರಿದಿ ತಮ್ಮ ಲಯ ಕಂಡುಕೊಂಡಿದ್ದಾರೆ. [ಪಾಕಿಸ್ತಾನ ಗೆದ್ದು ಬಿಟ್ರೆ ಬಟ್ಟೆ ಬಿಚ್ತಾರಂತೆ ಈ ರೂಪದರ್ಶಿ!]

ಭಾರತೀಯ ಬ್ಯಾಟ್ಸ್ ಮನ್ vs ಪಾಕಿಸ್ತಾನ ಬೌಲಿಂಗ್ ಹೇಗೆ ಇರುತ್ತದೆ ಎಂಬುದು ಎಲ್ಲರ ನಿರೀಕ್ಷೆಯಾಗಿರುತ್ತದೆ. ಆದರೆ, ಪಾಕಿಸ್ತಾನದ ಬೌಲರ್ ಗಳು ಉತ್ತಮ ಲಯದಲ್ಲಿದ್ದಾರೆ. ಅಶ್ವಿನ್, ನೆಹ್ರಾ, ಬೂಮ್ರಾರಿಂದ ಉತ್ತಮ ಪ್ರದರ್ಶನ ನಿರೀಕ್ಷೆಯಿದೆ. ಆದರೆ, ಪಾಕಿಸ್ತಾನ ಬ್ಯಾಟ್ಸ್ ಮನ್ ಗಳು ಕ್ರೀಸ್ ನಲ್ಲಿ ಕೆಲಹೊತ್ತು ಇದ್ದರೂ ಪಂದ್ಯದ ಗತಿ ಬದಲಾಯಿಸಬಹುದು ಎಂದು ಗವಾಸ್ಕರ್ ಅಭಿಪ್ರಾಯಪಟ್ಟಿದ್ದಾರೆ.

ವಿಶ್ವಕಪ್ ಟೂರ್ನಿಗಳಲ್ಲಿ ಇಲ್ಲಿ ತನಕ ಪಾಕಿಸ್ತಾನ ವಿರುದ್ಧ ಭಾರತ ಸೋಲು ಕಂಡಿಲ್ಲ. ಈಡೆನ್ ಗಾರ್ಡನ್ ನಲ್ಲೂ ಪಾಕಿಸ್ತಾನ ಗೆಲುವು ಸಾಧಿಸಿಲ್ಲ. (ಒನ್ಇಂಡಿಯಾ ಸುದ್ದಿ)

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
India's humiliating loss against New Zealand in the World T20 opener at Nagpur has just taken away the psychological advantage of Men In Blue and their chances of a better show in the upcoming game against Pakistan.
Please Wait while comments are loading...