ವಿಶ್ವಟಿ20 : ಭಾರತಕ್ಕೆ ವಿಂಡೀಸ್, ದ. ಆಫ್ರಿಕಾ ಮೊದಲ ಎದುರಾಳಿಗಳು

Posted By:
Subscribe to Oneindia Kannada

ಬೆಂಗಳೂರು, ಫೆ. 16: ಐಸಿಸಿ ಟ್ವೆಂಟಿ20 ವಿಶ್ವಕಪ್ 2016 ಟೂರ್ನಮೆಂಟ್ ನ ಅಭ್ಯಾಸ ಪಂದ್ಯಗಳ ವೇಳಾಪಟ್ಟಿಯನ್ನು ಅಂತಾರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ (ಐಸಿಸಿ) ಮಂಗಳವಾರ ಪ್ರಕಟಿಸಿದೆ. ಟೀಂ ಇಂಡಿಯಾ ಎರಡು ಅಭ್ಯಾಸ ಪಂದ್ಯಗಳನ್ನು ಆಡಲಿದೆ.

ಐಸಿಸಿ ವಿಶ್ವ ಟಿ20 ಪಂದ್ಯಾವಳಿ ಭಾರತದಲ್ಲಿ ಮಾರ್ಚ್ 8 ರಿಂದ ಏಪ್ರಿಲ್ 3 ರ ತನಕ ನಡೆಯಲಿದೆ. ಒಟ್ಟು 16 ತಂಡಗಳು, 8 ಮೈದಾನಗಳಲ್ಲಿ ಸೆಣಸಾಟ ನಡೆಸಲಿವೆ. ಮಹೇಂದ್ರ ಸಿಂಗ್ ಧೋನಿ ಅವರು ನೇತೃತ್ವದ ಟೀಂ ಇಂಡಿಯಾ ಎರಡು ಅಭ್ಯಾಸ ಪಂದ್ಯಗಳನ್ನು ವೆಸ್ಟ್ ಇಂಡೀಸ್ ಹಾಗೂ ದಕ್ಷಿಣ ಆಫ್ರಿಕಾ ವಿರುದ್ಧ ಆಡಲಿದೆ.

ಮೊದಲ ಸುತ್ತಿನಲ್ಲಿ ಎ ಗುಂಪು ಹಾಗೂ ಬಿ ಗುಂಪಿನ ತಲಾ ನಾಲ್ಕು ತಂಡಗಳು ಸೆಣಸಾಟ ನಡೆಸಿ ಗುಂಪಿನ ವಿಜೇತ ಎರಡು ತಂಡಗಳು ಸೂಪರ್ 10(ಎರಡನೇ ಸುತ್ತಿಗೆ) ಪ್ರವೇಶ ಪಡೆಯಲಿವೆ. [ಐಸಿಸಿ ವಿಶ್ವ ಟಿ20 ಸಮರಕ್ಕೆ ಸಜ್ಜಾದ ತಂಡಗಳ ಪಟ್ಟಿ]

India to face West Indies, South Africa in warm-up matches

ಧರ್ಮಶಾಲದಲ್ಲಿ ಮಾರ್ಚ್ 3-6 ರತನಕ ಹಾಗೂ ಕೋಲ್ಕತ್ತಾ ಮತ್ತು ಮುಂಬೈನಲ್ಲಿ ಮಾರ್ಚ್ 10-15 ತನಕ ಅಭ್ಯಾಸ ಪಂದ್ಯಗಳು ನಡೆಯಲಿವೆ. ಮಾರ್ಚ್ 10ರಂದು ಕೋಲ್ಕತ್ತಾದ ಈಡೆನ್ ಗಾರ್ಡನ್ಸ್ ನಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ಹಾಗೂ ಮಾರ್ಚ್ 12 ರಂದು ದಕ್ಷಿಣ ಆಫ್ರಿಕಾ ವಿರುದ್ಧ ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ಭಾರತ ಅಭ್ಯಾಸ ಪಂದ್ಯವನ್ನಾಡಲಿದೆ. [ವಿಶ್ವಟಿ20 ಸಂಪೂರ್ಣ ವೇಳಾಪಟ್ಟಿ]

3 March - Zimbabwe Vs local side, HPCA Stadium, Dharamsala (3 PM); Ireland Vs Hong Kong*, HPCA Stadium, Dharamsala (7.30 PM)

4 March - Netherlands Vs local side, Sector-16, Mohali (3 PM); Scotland Vs Oman*, IS Bindra Stadium, Mohali (7.30 PM)

5 March - Ireland Vs Zimbabwe, HPCA Stadium, Dharamsala (3 PM); Bangladesh Vs Hong Kong*, HPCA Stadium, Dharamsala (7.30 PM)

6 March - Scotland Vs Netherlands, Sector-16, Mohali (3 PM); Oman Vs Afghanistan*, IS Bindra Stadium, Mohali (7.30 PM)

10 March - New Zealand Vs Sri Lanka, Wankhede Stadium, Mumbai (7.30 PM); India Vs West Indies, Eden Gardens, Kolkata (7.30 PM)

12 March - New Zealand Vs England, BKC, Mumbai (3 PM); Pakistan Vs local side, JU, Kolkata (3 PM); India Vs South Africa, Wankhede Stadium, Mumbai (7.30 PM)

13 March - Australia Vs West Indies, Eden Gardens, Kolkata (7.30 PM) 14 March - England Vs local side, BKC, Mumbai (3 PM); Pakistan Vs Sri Lanka, Eden Gardens, Kolkata (3 PM)

15 March - South Africa Vs local side, BKC, Mumbai (3 PM)

ಒಂದು ವೇಳೆ ಏಷ್ಯಾಕಪ್ ನಲ್ಲಿ ಅಫ್ಘಾನಿಸ್ತಾನ, ಹಾಂಗ್ ಕಾಂಗ್ ಅಥವಾ ಓಮಾನ್ ತಂಡಗಳು ಎರಡನೇ ಸುತ್ತು ಪ್ರವೇಶಿಸಿದರೆ ವಿಶ್ವ ಟಿ20ಯ ಅಭ್ಯಾಸ ಪಂದ್ಯಗಳ ವೇಳಾಪಟ್ಟಿ ಬದಲಾಗಲಿದೆ. (ಒನ್ ಇಂಡಿಯಾ ಸುದ್ದಿ)

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Former champions India will play 2 warm-up matches at the ICC World Twenty20 2016 tournament, the International Cricket Council (ICC) has announced.
Please Wait while comments are loading...