ಟೀಂ ಇಂಡಿಯಾ ಸೆಮಿಫೈನಲ್ ಹೇಗೆ ತಲುಪಬಹುದು?

Posted By:
Subscribe to Oneindia Kannada

ಬೆಂಗಳೂರು, ಮಾರ್ಚ್ 24: ಐಸಿಸಿ ವಿಶ್ವ ಟಿ20 ಟೂರ್ನಮೆಂಟ್ ನ ಫೇವರಿಟ್ ಎಂದೆನಿಸಿಕೊಂಡಿರುವ ಟೀಂ ಇಂಡಿಯಾದ ಚಿತ್ತ ಈಗ ಸೆಮಿಫೈನಲ್ ನತ್ತ ನೆಟ್ಟಿದೆ.

ವಿಶ್ವ ಟಿ20: ತಂಡಗಳು | ವೇಳಾಪಟ್ಟಿ | ಗ್ಯಾಲರಿ |ಟೂರ್ನಿಗೆ ಫುಲ್ ಗೈಡ್

ಆದರೆ, ಸೆಮಿಫೈನಲ್ ಹಾದಿ ಅಷ್ಟು ಸುಲಭವಾಗಿಲ್ಲ. ಮಾರ್ಚ್ 27ರಂದು ಭಾನುವಾರ ಆಸ್ಟ್ರೇಲಿಯಾ ವಿರುದ್ಧ ನಡೆಯುವ ಪಂದ್ಯವನ್ನು ಕ್ವಾರ್ಟರ್ ಫೈನಲ್ ಎನ್ನಬಹುದಾದರೆ, ಸದ್ಯದ ಪರಿಸ್ಥಿತಿಯಲ್ಲಿ ಸೆಮೀಸ್ ಪ್ರವೇಶ ಇನ್ನೂ ಖಾತ್ರಿ ಇಲ್ಲ. ಹಾಗಾದರೆ, ಸೆಮೀಸ್ ತಲುಪುವ ಮಾರ್ಗ ಹೇಗೆ? ಇಲ್ಲಿದೆ ಮಾರ್ಗದರ್ಶಿ.

ನ್ಯೂಜಿಲೆಂಡ್ ಆಡಿದ ಮೂರು ಪಂದ್ಯಗಳನ್ನು ಗೆದ್ದು 6 ಅಂಕಗಳೊಂದಿಗೆ ಸೆಮಿಫೈನಲ್ ತಲುಪಿದೆ. ಬಾಂಗ್ಲಾದೇಶ ಮೂರು ಪಂದ್ಯಗಳನ್ನು ಸೋತು ಸೆಮಿಸ್ ಆಸೆ ಕೈಬಿಟ್ಟಿದೆ.

ಸೂಪರ್ 10 ಹಂತದ ಎರಡನೇ ಗುಂಪಿನ ಉಳಿದಿರುವ ಪಂದ್ಯಗಳು:
* ಶುಕ್ರವಾರ (ಮಾರ್ಚ್ 25) - ಆಸ್ಟ್ರೇಲಿಯಾ vs ಪಾಕಿಸ್ತಾನ (3 PM IST), ಮೊಹಾಲಿ.
* ಶನಿವಾರ (ಮಾರ್ಚ್ 26) - ನ್ಯೂಜಿಲೆಂಡ್ vs ಬಾಂಗ್ಲಾದೇಶ (3 PM IST), ಕೋಲ್ಕತ್ತಾ
* ಭಾನುವಾರ (ಮಾರ್ಚ್ 27) -ಭಾರತ vs ಆಸ್ಟ್ರೇಲಿಯಾ (7.30 PM IST) ಮೊಹಾಲಿ

ಸದ್ಯಕ್ಕೆ ರನ್ ರೇಟ್ ಆಧಾರದ ಮೇಲೆ ಅಂಕಪಟ್ಟಿ

ಸದ್ಯಕ್ಕೆ ರನ್ ರೇಟ್ ಆಧಾರದ ಮೇಲೆ ಅಂಕಪಟ್ಟಿ

1. New Zealand - 6 ಅಂಕಗಳು (3 ಪಂದ್ಯಗಳು) (NRR +1.283)
2. India - 4 ಅಂಕಗಳು (3 ಪಂದ್ಯಗಳು) (-0.546) 3.
3. Pakistan - 2 ಅಂಕಗಳು (3 ಪಂದ್ಯಗಳು) (+0.254)
4. Australia - 2 ಅಂಕಗಳು (2 ಪಂದ್ಯಗಳು) (+0.108)
5.ಬಾಂಗ್ಲಾದೇಶ - 0 ಅಂಕಗಳು (3 ಪಂದ್ಯಗಳು) (-1.165)

ಪಾಕಿಸ್ತಾನದ ಮೇಲೆ ಆಸ್ಟ್ರೇಲಿಯಾ ಗೆದ್ದರೆ

ಪಾಕಿಸ್ತಾನದ ಮೇಲೆ ಆಸ್ಟ್ರೇಲಿಯಾ ಗೆದ್ದರೆ

ಶುಕ್ರವಾರ (ಮಾರ್ಚ್ 25) ದಂದು ಪಾಕಿಸ್ತಾನ ವಿರುದ್ಧ ಆಸ್ಟ್ರೇಲಿಯಾ ಗೆದ್ದರೆ, ಮಾರ್ಚ್ 27ರಂದು ಆಸ್ಟ್ರೇಲಿಯಾ ವಿರುದ್ಧ ಭಾರತ ಗೆಲ್ಲಲೇಬೇಕು. ಭಾರತ ಗೆದ್ದರೆ ನೆಟ್ ರನ್ ರೇಟ್ ಅಗತ್ಯವಿರುವುದಿಲ್ಲ. ಅಂಕಗಳ ಆಧಾರದ ಮೇಲೆ ಸೆಮೀಸ್ ತಲುಪಬಹುದು. ಒಂದು ವೇಳೆ ಭಾರತ ಸೋತರೆ, ಆಸ್ಟ್ರೇಲಿಯಾ ತಂಡ 6 ಅಂಕಗಳೊಂದಿಗೆ ಸೆಮೀಸ್ ಸೇರಲಿದೆ.

ಆಸ್ಟ್ರೇಲಿಯಾ ಮೇಲೆ ಪಾಕಿಸ್ತಾನ ಗೆದ್ದರೆ

ಆಸ್ಟ್ರೇಲಿಯಾ ಮೇಲೆ ಪಾಕಿಸ್ತಾನ ಗೆದ್ದರೆ

ಒಂದು ವೇಳೆ ಆಸ್ಟ್ರೇಲಿಯಾ ವಿರುದ್ಧ ಪಾಕಿಸ್ತಾನ ಗೆದ್ದು, ಭಾರತ ವಿರುದ್ಧ ಆಸ್ಟ್ರೇಲಿಯಾ ಗೆದ್ದರೆ, ಆಗ ನೆಟ್ ರನ್ ರೇಟ್ ಲೆಕ್ಕ ತೆಗೆದುಕೊಳ್ಳಬೇಕಾಗುತ್ತದೆ. 3 ತಂಡಗಳು ತಲಾ 4 ಅಂಕಗಳನ್ನು ಹೊಂದಿರುತ್ತದೆ. ರನ್ ಸರಾಸರಿ ಲೆಕ್ಕಕ್ಕೆ ಬಂದರೆ, ಭಾರತಕ್ಕೆ ಕಷ್ಟವಾಗುತ್ತದೆ. ಉತ್ತಮ ರನ್ ಸರಾಸರಿ ಹೊಂದಿರುವ ಪಾಕಿಸ್ತಾನ ಮುಂದಿನ ಹಂತ ತಲುಪುತ್ತದೆ.

ಎರಡು ಲೀಗ್ ಪಂದ್ಯ ರದ್ದಾದರೆ

ಎರಡು ಲೀಗ್ ಪಂದ್ಯ ರದ್ದಾದರೆ

ಒಂದು ವೇಳೆ ಮಳೆ ಬಂದು ಪಾಕಿಸ್ತಾನ vs ಆಸ್ಟ್ರೇಲಿಯಾ ಹಾಗೂ ಭಾರತ vs ಆಸ್ಟ್ರೇಲಿಯಾ ಎರಡು ಪಂದ್ಯಗಳು ರದ್ದಾದರೆ, 1 ಹೆಚ್ಚುವರಿ ಅಂಕ ಪಡೆದ ಭಾರತ 5 ಅಂಕಗಳೊಂದಿಗೆ ಸೆಮೀಸ್ ಸೇರಲಿದೆ.

ಭಾರತ- ಆಸ್ಟ್ರೇಲಿಯಾ ಕ್ವಾರ್ಟರ್ ಫೈನಲ್

ಭಾರತ- ಆಸ್ಟ್ರೇಲಿಯಾ ಕ್ವಾರ್ಟರ್ ಫೈನಲ್

ಪಾಕಿಸ್ತಾನ ತಂಡವು ಆಸ್ಟ್ರೇಲಿಯಾವನ್ನು ಸೋಲಿಸಿದರೆ, ಭಾರತ ಹಾಗೂ ಆಸ್ಟ್ರೇಲಿಯಾ ನಡುವಿನ ಪಂದ್ಯ ಕ್ವಾರ್ಟರ್ ಫೈನಲ್ ಪಂದ್ಯದಂತೆ ಪರಿಗಣಿಸಲಾಗುತ್ತದೆ.

ಗೆಲ್ಲುವುದೊಂದೆ ಭಾರತಕ್ಕಿರುವ ಮಾರ್ಗ

ಗೆಲ್ಲುವುದೊಂದೆ ಭಾರತಕ್ಕಿರುವ ಮಾರ್ಗ

ಒಟ್ಟಾರೆ, ವಿಶ್ವ ಟಿ20 ಸೆಮಿಫೈನಲ್ ತಲುಪಲು ಆಸ್ಟ್ರೇಲಿಯಾ ವಿರುದ್ಧ ಗೆಲ್ಲುವುದೊಂದೇ ಭಾರತಕ್ಕಿರುವ ಮಾರ್ಗ. ತನ್ನ ಭವಿಷ್ಯವನ್ನು ತಾನೇ ರೂಪಿಸಿಕೊಳ್ಳುವುದು ಒಳ್ಳೆಯದು. ಸೋಲುವ ಮೂಲಕ ಇತರೆ ತಂಡದ ದಯೆ ಮೇಲೆ ಮುಂದಿನ ಹಂತ ತಲುಪುವ ಸ್ಥಿತಿ ತಲುಪದಿದ್ದರೆ ಸಾಕು.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
After their thrilling 1-run victory, India are now focused on winning against Australia on Sunday (March 27) to cement a place in the semi-finals of the ICC World Twenty20.
Please Wait while comments are loading...