ವಿಶ್ವ ಟಿ20: ಇಂಗ್ಲೆಂಡ್ ತಂಡ ಸೆಮೀಸ್ ಗೆ ಲಗ್ಗೆ

Posted By:
Subscribe to Oneindia Kannada

ನವದೆಹಲಿ, ಮಾರ್ಚ್ 27: ಹಾಲಿ ಚಾಂಪಿಯನ್ ಶ್ರೀಲಂಕಾಕ್ಕೆ ತೀವ್ರ ಮುಖಭಂಗ, ಏಂಜೆಲೋ ಮ್ಯಾಥ್ಯೂಸ್ ಹೋರಾಟ ವ್ಯರ್ಥ, ಅನೇಕ ಟೂರ್ನಿಗಳ ನಂತರ ವಿಶ್ವ ಟಿ20 ಯಲ್ಲಿ ಇಂಗ್ಲೆಂಡ್ ಸೆಮೀಸ್ ಗೆ ಎಂಟ್ರಿ.

ವಿಶ್ವ ಟಿ20: ತಂಡಗಳು | ವೇಳಾಪಟ್ಟಿ | ಗ್ಯಾಲರಿ |ಟೂರ್ನಿಗೆ ಫುಲ್ ಗೈಡ್

ವಿಶ್ವ ಟ್ವೆಂಟಿ 20 ಟೂರ್ನಿಯ ಮಹತ್ವದ ಪಂದ್ಯದಲ್ಲಿ ಶನಿವಾರದಂದು(ಮಾರ್ಚ್ 26) ಶ್ರೀಲಂಕಾ ತಂಡವನ್ನು ಇಂಗ್ಲೆಂಡ್ ತಂಡ 10 ರನ್​ಗಳಿಂದ ಸೋಲಿಸಿತು. ಶ್ರೀಲಂಕಾ ತಂಡದ ಸೋಲಿನಿಂದ ದಕ್ಷಿಣ ಆಫ್ರಿಕಾ ತಂಡ ಕೂಡ ಸೆಮಿಫೈನಲ್ ರೇಸ್​ನಿಂದ ಹೊರಬಿದ್ದಿದೆ. ಕೊನೆಯ ಲೀಗ್ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ಹಾಗೂ ಶ್ರೀಲಂಕಾ ಮಾರ್ಚ್ 28ರಂದು ಕಾದಾಡಲಿವೆ.

England enter semi-finals

ಟಾಸ್ ಸೋತರೂ ಮೊದಲು ಬ್ಯಾಟಿಂಗ್ ಇಳಿದ ಇಂಗ್ಲೆಂಡ್ ತಂಡಕ್ಕೆ ಆರಂಭಿಕ ಆಟಗಾರ ಜೋಸ್ ಬಟ್ಲರ್ಅಜೇಯ 66ರನ್ (37ಎಸೆತ, 8 X 4, 2 X6) ನೆರವಿನಿಂದ ನಿಗದಿತ 20 ಓವರ್ ಗಳಲ್ಲಿ 4 ವಿಕೆಟ್​ ನಷ್ಟಕ್ಕೆ 171 ಸ್ಕೋರ್ ಮಾಡಿತು.

ಶ್ರೀಲಂಕಾ ತಂಡ ರನ್ ಚೇಸ್ ನಲ್ಲಿ ಆರಂಭಿಕ ಆಘಾತ ಅನುಭವಿಸಿತು. ಆದರೆ, ನಾಯಕ ಮ್ಯಾಥ್ಯೂಸ್ ಅಜೇಯ 73ರನ್(53 ಎಸೆತ, 3x4, 5x6) ಏಕಾಂಗಿ ಹೋರಾಟ ನಡೆಸಿ ಕೊನೆ ತನಕ ಪ್ರತಿರೋಧ ಒಡ್ಡಿದರು. ಶ್ರೀಲಂಕಾ ಕೊನೆಗೆ 8 ವಿಕೆಟ್ ಕಳೆದುಕೊಂಡು 161 ರನ್ ಗಳಿಸಿ ಸೊಲೊಪ್ಪಿಕೊಂಡಿತು.

-
-
-
-
-
-
-
-
-
-
-
-
-
-
-
-
ವಿಶ್ವ ಟಿ20: ಇಂಗ್ಲೆಂಡ್ ತಂಡ ಸೆಮೀಸ್ ಗೆ ಲಗ್ಗೆ

ವಿಶ್ವ ಟಿ20: ಇಂಗ್ಲೆಂಡ್ ತಂಡ ಸೆಮೀಸ್ ಗೆ ಲಗ್ಗೆ

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ - ನೋಂದಣಿ ಉಚಿತ!

English summary
England clinched a semi-final berth in the World Twenty20 after quelling a spirited challenge from defending champions Sri Lanka by 10 runs in a closely contested Group I match on March 26.
Please Wait while comments are loading...