ನ್ಯೂಜಿಲೆಂಡ್ ಮಣಿಸಿ ಫೈನಲ್ ಪ್ರವೇಶಿಸಿದ ಇಂಗ್ಲೆಂಡ್

Posted By:
Subscribe to Oneindia Kannada

ನವದೆಹಲಿ, ಮಾರ್ಚ್ 30: 'ಕ್ಲಾಸ್ ಎಕ್ಸಾಂಗಳಲ್ಲಿ ನೂರಕ್ಕೆ ನೂರು ಮಾರ್ಕ್ಸ್ ತೆಗೆದು, ಪಬ್ಲಿಕ್ ಎಕ್ಸಾಂನಲ್ಲಿ ಶೂನ್ಯ ಸುತ್ತಿದ ವಿದ್ಯಾರ್ಥಿಯಂತೆ ನ್ಯೂಜಿಲೆಂಡ್ ತಂಡದ ಕಥೆಯಾಗಿದೆ. ವಿಶ್ವ ಟಿ20 ಟೂರ್ನಿಯ ಅಜೇಯ ತಂಡವಾಗಿದ್ದ ಕೀವಿಸ್ ಕಿವಿ ಹಿಂಡಿ ಇಂಗ್ಲೆಂಡಿನ ಸಿಂಹಗಳು ಘರ್ಜಿಸಿವೆ. ಮೊದಲ ಸೆಮಿಫೈನಲ್ ನಲ್ಲಿ ನ್ಯೂಜಿಲೆಂಡ್ ತಂಡವನ್ನು 7 ವಿಕೆಟ್ ಗಳಿಂದ ಮಣಿಸಿದ ಇಂಗ್ಲೆಂಡ್ ಫೈನಲ್ ಪ್ರವೇಶಿಸಿದ ಮೊದಲ ತಂಡವಾಗಿದೆ.

ವಿಶ್ವ ಟಿ20: ತಂಡಗಳು | ವೇಳಾಪಟ್ಟಿ | ಗ್ಯಾಲರಿ |ಟೂರ್ನಿಗೆ ಫುಲ್ ಗೈಡ್

ಏಪ್ರಿಲ್ 03, 2016 ರಂದು ಐಸಿಸಿ ವಿಶ್ವ ಟ್ವೆಂಟಿ20 ಟೂರ್ನಮೆಂಟ್ ನ ಅಂತಿಮ ಹಣಾಹಣಿ ಕೋಲ್ಕತ್ತಾದ ಈಡನ್ ಗಾರ್ಡನ್ಸ್ ಮೈದಾನದಲ್ಲಿ ನಡೆಯಲಿದೆ. ಎರಡನೆ ಸೆಮಿಫೈನಲ್ ಮಾರ್ಚ್ 31 ರಂದು ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ನಡೆಯಲಿದ್ದು, ಅತಿಥೇಯ ಭಾರತ ವಿರುದ್ಧ ವೆಸ್ಟ್ ಇಂಡೀಸ್ ಸೆಣಸುತ್ತಿದೆ.[ವಿಂಡೀಸ್ ವಿರುದ್ಧ ಗೆದ್ದರೆ ಧೋನಿಯಿಂದ ಅಪೂರ್ವ ದಾಖಲೆ]

World T20 : England beat New Zealand to enter Final

ಇಂಗ್ಲೆಂಡ್ ರನ್ ಚೇಸ್: ಆರಂಭಿಕ ಆಟಗಾರ ಜಾಸನ್ ರಾಯ್ ಭರ್ಜರಿ ಆಟ ಪ್ರದರ್ಶಿಸಿ 44 ಎಸೆತಗಳಲ್ಲಿ 78 ರನ್ ಗಳಿಸಿ ಉತ್ತಮ ಅಡಿಪಾಯ ಹಾಕಿಕೊಟ್ಟರು. ರಾಯ್ 11 ಬೌಂಡರಿ, 2 ಸಿಕ್ಸರ್ ಸಿಡಿಸಿದರು. ಹೇಲ್ಸ್ 20 ರನ್ ಗಳಿಸಿದರೆ, ಜೋ ರೂಟ್ ಅಜೇಯ 27 ರನ್ ಹಾಗೂ ಬಟ್ಲರ್ 32 ರನ್ ಗಳಿಸಿದರು. ಅಂತಿಮವಾಗಿ 154 ರನ್ ಗುರಿಯನ್ನು ಇಂಗ್ಲೆಂಡ್ 17.1 ಓವರ್ ಗಳಲ್ಲಿ 3 ವಿಕೆಟ್ ಕಳೆದುಕೊಂಡು ಗಳಿಸಿ ಫೈನಲ್ ಗೆ ಲಗ್ಗೆ ಇಟ್ಟಿತು.[ವಿಶ್ವ ಟಿ20 ಟೂರ್ನಿಯಿಂದ ಯುವರಾಜ್ ಔಟ್]

ಕಿವೀಸ್ ಕಟ್ಟಿಹಾಕಿದ ಆಂಗ್ಲರು: ಮೊದಲು ಬ್ಯಾಟಿಂಗ್ ಮಾಡಿದ ಕಿವೀಸ್ ತಂಡಕ್ಕೆ ಮಾರ್ಟಿನ್ ಗಪ್ಟಿಲ್, ನಾಯಕ ಕೇನ್ ವಿಲಿಯಮ್ಸನ್ ತಕ್ಕ ಮಟ್ಟಿನ ಉತ್ತಮ ಆರಂಭ ತಂದುಕೊಟ್ಟರು. 15 ರನ್ ಗಳಿಸಿ ಗಪ್ಟಿಲ್ ಔಟಾದ ಮೇಲೂ ಮುನ್ರೋ ಜತೆಗೂಡಿ ವಿಲಿಯಮ್ಸನ್ ಉತ್ತಮ ಜೊತೆಯಾಟ ಪ್ರದರ್ಶಿಸಿದರು.

28 ಎಸೆತಗಳಲ್ಲಿ 32 ರನ್ (3x4,1x6) ಗಳಿಸಿ ವಿಲಿಯಮ್ಸನ್ ಔಟಾದರು. ನಂತರ ತಂಡದ ಸ್ಕೋರ್ 107 ಆಗಿದ್ದಾಗ 46 ರನ್ ಗಳಿಸಿದ್ದ (36ಎಸೆತಗಳು, 7x4,1x6) ಮುನ್ರೋ ಪೆವಿಲಿಯನ್ ಸೇರಿದರು. ಅಮೇಲೆ ರನ್ ಗತಿ ಹೆಚ್ಚಿಸಲು ಆಂಡರ್ಸನ್ (28) ಯತ್ನಿಸಿದರೂ ಯಾರು ಜೊತೆಗಾರರು ಸಿಗಲಿಲ್ಲ. ಇಂಗ್ಲೆಂಡ್ ಪರ ಬೆನ್ ಸ್ಟೋಕ್ಸ್ 26ಕ್ಕೆ 3 ವಿಕೆಟ್ ಕಿತ್ತು ಯಶಸ್ವಿ ಬೌಲರ್ ಎನಿಸಿದರು. ನ್ಯೂಜಿಲೆಂಡ್ 20 ಓವರ್ ಗಳಲ್ಲಿ 153/8.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
World T20 : England beat New Zealand to enter Final. England opener Jason Roy's knock of 78 runs inspired England to chase the target of 154 runs set by New Zealand in the first Semi Finals. England reached the target in 17.1 overs by losing three wickets.
Please Wait while comments are loading...