ಗಂಗೂಲಿಗೆ ಚಿಂತೆ : ಪಂದ್ಯದ ವೇಳೆ ಕತ್ತಲಾದ ಈಡೆನ್ ಗಾರ್ಡನ್ಸ್

Posted By:
Subscribe to Oneindia Kannada

ಕೋಲ್ಕತ್ತಾ, ಮಾರ್ಚ್ 27: ಕ್ರಿಕೆಟ್ ದಿಗ್ಗಜ, ಮಾಜಿ ಕ್ರಿಕೆಟರ್ ಸೌರವ್ ಗಂಗೂಲಿ ನೇತೃತ್ವದ ಬೆಂಗಾಲ ಕ್ರಿಕೆಟ್ ಅಸೋಸಿಯೇಷನ್ (ಸಿಎಬಿ) ಶನಿವಾರ ರಾತ್ರಿ ತಲೆ ತಗ್ಗಿಸುವಂಥ ಪ್ರಸಂಗ ನಡೆಯಿತು. ನ್ಯೂಜಿಲೆಂಡ್ ಹಾಗೂ ಬಾಂಗ್ಲಾದೇಶ ನಡುವಿನ ಪಂದ್ಯದ ವೇಳೆ ಫ್ಲಡ್ ಲೈಟ್ ಕೈಕೊಟ್ಟು ಕಿರಿಕಿರಿ ಉಂಟು ಮಾಡಿತು.

ವಿಶ್ವ ಟಿ20: ತಂಡಗಳು | ವೇಳಾಪಟ್ಟಿ | ಗ್ಯಾಲರಿ |ಟೂರ್ನಿಗೆ ಫುಲ್ ಗೈಡ್

ಪಂದ್ಯದ ವೇಳೆ ಈಡನ್ ಗಾರ್ಡನ್ಸ್ ಕ್ರೀಡಾಂಗಣದ ಫ್ಲಡ್​ಲೈಟ್ ಕೈಕೊಟ್ಟಿತ್ತು. ಬಾಂಗ್ಲಾದೇಶದ ಇನ್ನಿಂಗ್ಸ್ ನಲ್ಲಿ 11 ಓವರ್​ ನಡೆಯುವಾಗ ಮೈದಾನದ ನಾಲ್ಕೂ ಫ್ಲಡ್​ಲೈಟ್ ಕೈಕೊಟ್ಟಿದ್ದರಿಂದ 15 ನಿಮಿಷ ಪಂದ್ಯ ಸ್ಥಗಿತಗೊಂಡಿತ್ತು. ಬಾಂಗ್ಲಾದೇಶ 6 ವಿಕೆಟ್​ಗೆ 45ರನ್ ಗಳಿಸಿತ್ತು. ಈ ಘಟನೆ ಬಂಗಾಳ ಕ್ರಿಕೆಟ್ ಸಂಸ್ಥೆಗೂ ಕಸಿವಿಸಿ ತಂದಿದ್ದಂತೂ ಸುಳ್ಳಲ್ಲ.[ಪಂದ್ಯದ ಸ್ಕೋರ್ ಕಾರ್ಡ್]

2009ರ ಡಿಸೆಂಬರ್ 24ರಂದು ಭಾರತ ಹಾಗೂ ಶ್ರೀಲಂಕಾ ನಡುವಿನ ಪಂದ್ಯದ ವೇಳೆ ಇದೇ ರೀತಿ ವಿದ್ಯುತ್ ಸಮಸ್ಯೆ ಎದುರಾಗಿತ್ತು.ಆಗ ಪಂದ್ಯ 23 ನಿಮಿಷ ಸ್ಥಗಿತಗೊಂಡಿದ್ದು, ಆಗ ತೊಂದರೆ ಕೊಟ್ಟಿದ್ದ ಗೋಪುರವೇ ಈಗಲೂ ತೊಂದರೆ ನೀಡಿದ್ದು ವಿಶೇಷ.[ಚಿತ್ರಗಳು:ಕ್ರೋವ್ ನೆನಪಿಸಿದ ಕಿವೀಸ್ ಗೆಲುವಿನ ನಾಗಾಲೋಟ!]

ಇನ್ನೊಮ್ಮೆ ಐಪಿಎಲ್ 2008ರಲ್ಲಿ ಡೆಕ್ಕನ್ ಚಾರ್ಜರ್ಸ್ ಹಾಗೂ ಕೋಲ್ಕತ್ತಾ ನೈಟ್ ರೈಡರ್ಸ್ ನಡುವಿನ ಪಂದ್ಯ ಕೂಡಾ 25 ನಿಮಿಷ ವಿದ್ಯುತ್ ಸಮಸ್ಯೆ ಎದುರಿಸಿತ್ತು.

ಕೋಲ್ಕತ್ತಾದಲ್ಲಿ ಆಗಾಗ ವಿದ್ಯುತ್ ಸಮಸ್ಯೆ

ಕೋಲ್ಕತ್ತಾದಲ್ಲಿ ಆಗಾಗ ವಿದ್ಯುತ್ ಸಮಸ್ಯೆ

ಕೋಲ್ಕತ್ತಾದಲ್ಲಿ ಸಾಲ್ಟ್ ಕ್ಲೇಟ್ ಸ್ಟೇಡಿಯಂನಲ್ಲಿ ಫುಟ್ಬಾಲ್ ಪಂದ್ಯಗಳಿಗೆ ಆಗಾಗ ವಿದ್ಯುತ್ ಸಮಸ್ಯೆ ಎದುರಾಗುವುದು ಸಾಮಾನ್ಯ ಸಂಗತಿಯಾಗಿದೆ. 2005ರಲ್ಲಿ ಭಾರತ ಹಾಗೂ ಜಪಾನ್ ವಿರುದ್ಧದ ವಿಶ್ವಕಪ್ ಅರ್ಹತಾ ಸುತ್ತಿನ ಪಂದ್ಯಕ್ಕೆ ಭಾರಿ ಅಡಚಣೆ ಉಂಟಾಗಿತ್ತ್ತು.

ಸಿಎಬಿಗೆ ಮುಖಭಂಗವಾಗಿದೆ

ಸಿಎಬಿಗೆ ಮುಖಭಂಗವಾಗಿದೆ

ಈ ರೀತಿ ಕಿರಿಕಿರಿ ಎದುರಾಗಿರುವುದು ಗಂಗೂಲಿ ನೇತೃತ್ವದ ಸಿಎಬಿಗೆ ಮುಖಭಂಗವಾಗಿದೆ. ವಿಶ್ವ ಟಿ 20ಫೈನಲ್ ಪಂದ್ಯ ಈಡೆನ್ ಗಾರ್ಡನ್ಸ್ ಮೈದಾನದಲ್ಲಿ ನಿಗದಿಯಾಗಿದೆ.

ಕ್ರಿಕೆಟ್ ಪ್ರೇಮಿಗಳಿಗೆ ರಸಭಂಗವಾಗಿದ್ದು ಸುಳ್ಳಲ್ಲ

ಕ್ರಿಕೆಟ್ ಪ್ರೇಮಿಗಳಿಗೆ ರಸಭಂಗವಾಗಿದ್ದು ಸುಳ್ಳಲ್ಲ

ಕಲ್ಕತ್ತಾ ಎಲೆಕ್ಟ್ರಿಕ್ ಸಪ್ಲೈ ಕಾರ್ಪೋರೇಷನ್ (ಸಿಇಎಸ್ ಸಿ) ಹಾಗೂ ಬೆಂಗಾಲ ಕ್ರಿಕೆಟ್ ಅಸೋಸಿಯೇಷನ್ (ಸಿಎಬಿ) ನಡುವಿನ ತಿಕ್ಕಾಟದಿಂದ ಕ್ರಿಕೆಟ್ ಪ್ರೇಮಿಗಳಿಗೆ ರಸಭಂಗವಾಗಿದ್ದು ಸುಳ್ಳಲ್ಲ.

ಮಾರ್ಚ್ 19 ರಂದು ಹೀರೋ ಎನಿಸಿದ್ದ ಗಂಗೂಲಿ

ಮಾರ್ಚ್ 19 ರಂದು ಹೀರೋ ಎನಿಸಿದ್ದ ಗಂಗೂಲಿ

ಕೋಲ್ಕತಾದಲ್ಲಿ ಭಾರತ ಮತ್ತು ಪಾಕಿಸ್ತಾನದ ನಡುವಣ ಟಿ-20 ಪಂದ್ಯಕ್ಕೆ ಮಳೆ ಅಡ್ಡಿಪಡಿಸಿತ್ತು. ಪಂದ್ಯ ನಡೆಯುವುದೇ ಅನುಮಾನ ಎನ್ನುವಂಥ ಪರಿಸ್ಥಿತಿ ಇತ್ತು.ಆದರೆ ಹವಾಮಾನ ಇಲಾಖೆಯ ಸೂಚನೆಯನ್ನು ಮನಗಂಡಿದ್ದ ಗಂಗೂಲಿ ಹೆಚ್ಚುವರಿ ಟಾರ್ಪಲ್ ಗಳನ್ನು ತರಿಸಿ ಇಟ್ಟುಕೊಂಡಿದ್ದರು. ಹೆಚ್ಚು ವಿಳಂಬವಾಗದೆ ಪಂದ್ಯ ನಡೆಯಿತು. ಪಾಕಿಸ್ತಾನ ವಿರುದ್ಧ ಭಾರತ ಜಯ ದಾಖಲಿಸಿತು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
The iconic Eden Gardens stadium was embarrassed on March 26 due to a recurrence of a blackout when one of the four floodlight towers went off, delaying the ICC World Twenty20 Super 10 match between New Zealand and Bangladesh by 15 minutes.
Please Wait while comments are loading...