ನಾಯಕ ಧೋನಿ ಶರ್ಟ್ ಕಾಲರ್ ಹಿಡಿದವರು ಯಾರು?

By: ರಮೇಶ್ ಬಿ
Subscribe to Oneindia Kannada

ಕೋಲ್ಕತ್ತಾ, ಮಾರ್ಚ್ 12: ಕ್ರಿಕೆಟ್ ಪಂದ್ಯ ಮುಕ್ತಾಯದ ಬಳಿಕ ಎರಡು ತಂಡದ ಸಹ ಆಟಗಾರರು ಕೈ ಕುಲುಕುವುದು ಮತ್ತು ಬೆನ್ನು ತಟ್ಟುವುದು ಕ್ರೀಡೆಗಳಲ್ಲಿ ಒಂದು ಸಾಂಪ್ರದಾಯವಾಗಿ ಬೆಳೆದು ಬಂದಿದೆ. ಎದುರಾಳಿ ತಂಡದ ನಾಯಕನ ಜರ್ಸಿ ಕಾಲರ್ ಹಿಡಿಯುವ ಧೈರ್ಯ ಮಾಡಿದ ವಿಂಡೀಸ್ ಆಟಗಾರನ ಬಗ್ಗೆ ಓದಿ...

ವಿಶ್ವ ಟಿ20: ತಂಡಗಳು | ವೇಳಾಪಟ್ಟಿ | ಗ್ಯಾಲರಿ

ಟೀಂ ಇಂಡಿಯಾ ನಾಯಕ ಮಹೇಂದ್ರ ಸಿಂಗ್ ಧೋನಿ ಅವರ ಅಂಗಿಯ ಕಾಲರ್ ಗೆ ಆಟಗಾರನೊಬ್ಬ ಕೈ ಹಾಕಿರುವುದನ್ನು ಕಂಡು ಧೋನಿ ಅಭಿಮಾನಿಗಳು ಕೆಲ ಕಾಲ ತಬ್ಬಿಬ್ಬಾದರು. ಧೋನಿ ಕಾಲರ್ ಗೆ ಕೈ ಹಾಕಿದ ಆ ಆಟಗಾರ ಯಾರು?

World T20 : Dwayne Bravo grabs MS Dhoni by the collar,

ಮಾರ್ಚ್ 10 ಗುರುವಾರ ಭಾರತ ಮತ್ತು ವೆಸ್ಟ್ ಇಂಡೀಸ್ ನಡುವೆ ನಡೆದ ಅಭ್ಯಾಸ ಪಂದ್ಯದಲ್ಲಿ ಭಾರತ ಗೆಲವು ಪಡೆದುಕೊಂಡ ನಂತರ ವೆಸ್ಟ್ ಇಂಡೀಸ್ ಆಟಗಾರ ಡ್ವಾಯ್ನೆ ಬ್ರಾವೋ ಅವರು ಧೋನಿ ಶರ್ಟ್ ಕಾಲರ್ ಗೆ ಕೈ ಹಾಕಿದ್ದಾರೆ. ಇವರಿಬ್ಬರು ಆಟಗಾರರು ಪಕ್ಕಾ ದೋಸ್ತಿಗಳಾಗಿದ್ದರಿಂದ ಈ ರೀತಿ ಮಾಡಿದ್ದಾರೆ.

ಮೈದಾನದಲ್ಲಿದ್ದ ಪ್ರೇಕ್ಷಕರಿಗೂ ಇವರು ಐಪಿಎಲ್ ನಲ್ಲಿ ಚೆನ್ನೈ ತಂಡದಲ್ಲಿ ಆಡುವಾಗ ಆತ್ಮಿಯರಾಗಿರುವುದು ಮತ್ತು ಅದೇ ಸಲಿಗೆಯಿಂದಲೇ ಕಾಲರ್ ಗೆ ಕೈ ಹಾಕಿದ್ದಾನೆಂದು ಅಭಿಮಾನಿಗಳು ಅರ್ಥ ಮಾಡಿಕೊಂಡು ನಿಟ್ಟುಸಿರು ಬಿಟ್ಟಿದ್ದಾರೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ - ನೋಂದಣಿ ಉಚಿತ!

English summary
World T20 : Dwayne Bravo shocked cricketing fans present in the Eden Gardens stadium in Kolkata after he reached out to Indian captain MS Dhoni after the match and grabbed him by his collar.
Please Wait while comments are loading...