ಕೊನೆ ಓವರ್ ನ ಥ್ರಿಲ್ಲರ್: ಒಮಾನ್ ಗೆ ಚೊಚ್ಚಲ ಜಯ

Posted By:
Subscribe to Oneindia Kannada

ಧರ್ಮಶಾಲಾ, ಮಾರ್ಚ್ 10: ವಿಶ್ವ ಟಿ20ಯಂಥ ದೊಡ್ಡ ಟೂರ್ನಮೆಂಟ್ ನಲ್ಲಿ ಮೊಟ್ಟ ಮೊದಲ ಬಾರಿಗೆ ಆಡುತ್ತಿರುವ ಒಮಾನ್ ತಂಡ ಬುಧವಾರ ಹೊಸ ಇತಿಹಾಸ ನಿರ್ಮಿಸಿದೆ. ಐರ್ಲೆಂಡ್ ವಿರುದ್ಧದ ಅರ್ಹತಾ ಸುತ್ತಿನ ಪಂದ್ಯದಲ್ಲಿ ಚೊಚ್ಚಲ ಜಯ ದಾಖಲಿಸಿದೆ.

ಪಂದ್ಯದ ಸ್ಕೋರ್ ಕಾರ್ಡ್

ಹಿಮಾಚಲ ಪ್ರದೇಶದ ಕ್ರಿಕೆಟ್ ಮೈದಾನದಲ್ಲಿ ಬುಧವಾರ ನಡೆದ ವಿಶ್ವ ಟಿ20ಯ ಎ ಗುಂಪಿನ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಐರ್ಲೆಂಡ್ ತಂಡ ನಿಗದಿತ 20 ಓವರ್ ಗಳಲ್ಲಿ ವಿಕೆಟ್ ನಷ್ಟಕ್ಕೆ 154 ರನ್ ಗಳಿಸಿತು.

ವಿಶ್ವ ಟಿ20: ತಂಡಗಳು | ವೇಳಾಪಟ್ಟಿ | ಗ್ಯಾಲರಿ

ಇದಕ್ಕೆ ಉತ್ತರವಾಗಿ ಕೊನೆ ಎರಡು ಎಸೆತಗಳು ಬಾಕಿ ಇರುವಾಗಲೇ 8 ವಿಕೆಟ್ ನಷ್ಟಕ್ಕೆ 157 ರನ್ ಗಳಿಸಿದ ಒಮಾನ್ ಮೊಟ್ಟ ಮೊದಲ ಗೆಲುವಿನ ನಗೆ ಬೀರಿತು.

ಮಕ್ಸೂದ್, ಖಾವರ್, ಅಮೀರ್ ಉತ್ತಮ ಆಟ

ಮಕ್ಸೂದ್, ಖಾವರ್, ಅಮೀರ್ ಉತ್ತಮ ಆಟ

ಒಮಾನ್ ಪರ ಝೀಶನ್ ಮಕ್ಸೂದ್(38) ಹಾಗೂ ಖಾವರ್ ಅಲಿ(34) ಮೊದಲ ವಿಕೆಟ್‌ಗೆ ಸೇರಿಸಿದ 69 ರನ್ ಹಾಗೂ ಕೆಳ ಕ್ರಮಾಂಕದಲ್ಲಿ ಆಮಿರ್ ಅಲಿ(32) ಸಾಹಸದ ನೆರವಿನಿಂದ ಒಮಾನ್ ತಂಡ ಗೆಲುವು ಸಾಧಿಸಿತು.

ಐರ್ಲೆಂಡ್ ತಂಡದ ಬ್ಯಾಟಿಂಗ್

ಐರ್ಲೆಂಡ್ ತಂಡದ ಬ್ಯಾಟಿಂಗ್

ಬುಧವಾರ ಇಲ್ಲಿ ನಡೆದ ವಿಶ್ವಕಪ್‌ನ ಎ ಗುಂಪಿನ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ್ದ ಐರ್ಲೆಂಡ್ ತಂಡ ವಿಲ್ಸನ್(38), ಸ್ಟಿರ್ಲಿಂಗ್(29) ಹಾಗೂ ಪೋರ್ಟರ್‌ಫೀಲ್ಡ್(29)ಕಾಣಿಕೆಯ ನೆರವಿನಿಂದ 5 ವಿಕೆಟ್ ನಷ್ಟಕ್ಕೆ 154 ರನ್ ಗಳಿಸಿತು

6ನೆ ವಿಕೆಟ್‌ಗೆ 47 ರನ್ ಜೊತೆಯಾಟ

6ನೆ ವಿಕೆಟ್‌ಗೆ 47 ರನ್ ಜೊತೆಯಾಟ

ಮಕ್ಸೂದ್ ಹಾಗೂ ಅಲಿ ಒಮನ್‌ಗೆ ಭದ್ರ ಬುನಾದಿ ಹಾಕಿಕೊಟ್ಟರು. ಆದರೆ, ಈ ಇಬ್ಬರು ಔಟಾದ ನಂತರ ಒಮನ್ ಕುಸಿತದ ಹಾದಿ ಹಿಡಿದಿತ್ತು.

ಆಗ ಜತೀಂದರ್ ಸಿಂಗ್(24) ಅವರೊಂದಿಗೆ 6ನೆ ವಿಕೆಟ್‌ಗೆ 47 ರನ್ ಜೊತೆಯಾಟ ನಡೆಸಿದ ಆಮಿರ್ ಅಲಿ(32 ರನ್, 17 ಎಸೆತ) ಒಮನ್‌ಗೆ ಅನಿರೀಕ್ಷಿತ ಗೆಲುವು ತಂದುಕೊಟ್ಟರು

ಐರ್ಲೆಂಡ್ ಪರ ಕೆ.ಜಿ. ಒಬ್ರಿಯನ್ ಬೌಲಿಂಗ್

ಐರ್ಲೆಂಡ್ ಪರ ಕೆ.ಜಿ. ಒಬ್ರಿಯನ್ ಬೌಲಿಂಗ್

ಐರ್ಲೆಂಡ್ ಪರ ಕೆ.ಜಿ. ಒಬ್ರಿಯನ್(2/25), ಮೆಕ್‌ಬ್ರೈನ್(2/15) ಹಾಗೂ ಸೊರೆನ್ಸನ್(2/29) ತಲಾ 2 ವಿಕೆಟ್ ಕಬಳಿಸಿದರು.

ಗೆಲುವಿನ ರೂವಾರಿ ಆಮಿರ್ ಅಲಿ

ಗೆಲುವಿನ ರೂವಾರಿ ಆಮಿರ್ ಅಲಿ

ಒಮಾನ್ ಗೆಲುವಿನ ರೂವಾರಿ ಆಮಿರ್ ಅಲಿ ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದರು. ಝೀಶನ್ ಮಕ್ಸೂದ್ ಹಿಡಿದ ಅದ್ಭುತ ಕ್ಯಾಚ್ ಪ್ರೇಕ್ಷಕರನ್ನು ರಂಜಿಸಿತು.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Debutants Oman dished out a resolute batting effort to stun Ireland by two wickets and register a nerve-wrecking win over experienced Ireland in their Group A qualifying match of the ICC World Twenty20, here tonigh (March 9).
Please Wait while comments are loading...