ಟಿ20 ಹಿಸ್ಟರಿ ರಿಪೀಟ್ಸ್ : ಗೇಲ್ ಆರಂಭ ಪಂದ್ಯದಲ್ಲೇ ಶತಕ

Posted By:
Subscribe to Oneindia Kannada

ಮುಂಬೈ, ಮಾರ್ಚ್ 16: ವೆಸ್ಟ್ ಇಂಡೀಸ್ ನ ಸ್ಫೋಟಕ ಬ್ಯಾಟ್ಸ್ ಮನ್ ಕ್ರಿಸ್ ಗೇಲ್ ಅವರು ವಿಶ್ವ ಟಿ20 ಟೂರ್ನಮೆಂಟ್ ನ ಆರಂಭದ ಪಂದ್ಯದಲ್ಲೇ ಭರ್ಜರಿ ಶತಕ ಗಳಿಸಿದ್ದಾರೆ. ಈ ಮೂಲಕ ಬುಧವಾರ ವಾಂಖೆಡೆ ಸ್ಟೇಡಿಯಂನಲ್ಲಿ ಇಂಗ್ಲೆಂಡ್ ತಂಡದ ವಿರುದ್ಧ ವೆಸ್ಟ್ ಇಂಡೀಸ್ 6 ವಿಕೆಟ್ ಗಳ ಸುಲಭ ಜಯ ದಾಖಲಿಸಿದೆ.

ವಿಶ್ವ ಟಿ20: ತಂಡಗಳು | ವೇಳಾಪಟ್ಟಿ | ಗ್ಯಾಲರಿ

ಮೊದಲು ಬ್ಯಾಟಿಂಗ್ ಮಾಡಿದ ಇಂಗ್ಲೆಂಡ್ ತಂಡ ನಿಗದಿತ 20 ಓವರ್ ಗಳಲ್ಲಿ 184ರನ್ ಗಳ ಟಾರ್ಗೆಟ್ ನೀಡಿತ್ತು. ವೆಸ್ಟ್ ಇಂಡೀಸ್ ತಂಡ ರನ್ ಚೇಸ್ ನಲ್ಲಿ ಆರಂಭಿಕ ಬ್ಯಾಟ್ಸ್ ಮನ್ ಚಾರ್ಲ್ಸ್ (0) ಕಳೆದು ಕೊಂಡಿತು. [ಪಂದ್ಯದ ಸ್ಕೋರ್ ಕಾರ್ಡ್]

ಆದರೆ, ನೆಲಕಚ್ಚಿ ನಿಂತು ಸಿಕ್ಸರ್ ಗಳನ್ನು ಸಿಡಿಸಿದ ಕ್ರಿಸ್ ಗೇಲ್ ಅಜೇಯ 100 ರನ್(48 ಎಸೆತ, 5 ಬೌಂಡರಿ, 11 ಸಿಕ್ಸರ್) ಗಳಿಸಿ ತಂಡಕ್ಕೆ ಜಯ ತಂದಿತ್ತರು.

Gayle hits ton in first match of T20 World Cup again

ಇತಿಹಾಸ ಮರುಕಳಿಸಿತು: 2016ರ ವಿಶ್ವ ಟ್ವೆಂಟಿ20 ಟೂರ್ನಮೆಂಟ್ ನ ಮೊದಲ ಪಂದ್ಯದಲ್ಲಿ ಇಂಗ್ಲೆಂಡ್ ವಿರುದ್ಧ ಕ್ರಿಸ್ ಗೇಲ್ ಭರ್ಜರಿ ಶತಕ ಗಳಿಸಿದರು. 2007ರ ಚೊಚ್ಚಲ ಆವೃತ್ತಿಯಲ್ಲಿ ಎದಗೈ ಬ್ಯಾಟ್ಸ್ ಮನ್ 57 ಎಸೆತಗಳಲ್ಲಿ 117ರನ್ ಚೆಚ್ಚಿ ದಕ್ಷಿಣ ಆಫ್ರಿಕಾ ವಿರುದ್ಧ ಭರ್ಜರಿ ಪ್ರದರ್ಶನ ನೀಡಿದ್ದರು.

ವಾಂಡರರ್ಸ್ ಇರಲಿ, ವಾಂಖೆಡೆ ಇರಲಿ ಗೇಲ್ ಸಿಕ್ಸರ್ ಗಳ ಸುರಿಮಳೆಗೆ ಎದುರಾಳಿ ತಂದ ಬೆಚ್ಚುವುದು ಖಂಡಿತ. ಆದರೆ, ವಾಂಡರರ್ಸ್ ನಲ್ಲಿ ಗೇಲ್ ಅಬ್ಬರಕ್ಕೆ ಸಮನಾಗಿ ದಕ್ಷಿಣ ಆಫ್ರಿಕಾದ ಬಲಗೈ ಬ್ಯಾಟ್ಸ್ ಮನ್ ಹರ್ಷಲ್ ಗಿಬ್ಸ್ ಅವರು 55 ಎಸೆತಗಳಲ್ಲಿ 90ರನ್ ಬಾರಿಸಿದ್ದರಿಂದ ವೆಸ್ಟ್ ಇಂಡೀಸ್ ತಂಡ ಸೋಲು ಕಂಡಿತ್ತು.

ಟಿ20 ವಿಶ್ವಕಪ್ ಇತಿಹಾಸದಲ್ಲಿ ಗೇಲ್ ಸಿಡಿಸಿದ 2ನೇ ಶತಕ ಇದಾಗಿದೆ. ಈ ಸಾಧನೆ ಮಾಡಿದ ಮೊದಲ ಆಟಗಾರ ಎನಿಸಿದ್ದಾರೆ. ಇದಲ್ಲದೆ ಟೆಸ್ಟ್ ಕ್ರಿಕೆಟ್ ನಲ್ಲಿ ತ್ರಿಶತಕ ಹಾಗೂ 50 ಓವರ್ ಗಳ ಪಂದ್ಯದಲ್ಲಿ ಡಬ್ಬಲ್ ಸೆಂಚುರಿ, ಟಿ20ರಲ್ಲಿ ಶತಕಗಳು ಗೇಲ್ ಸಾಧನೆ ಪಟ್ಟಿಯಲ್ಲಿವೆ. (ಒನ್ ಇಂಡಿಯಾ ಸುದ್ದಿ)

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Dashing West Indian batsman Chris Gayle hit a match-winning ton in his team's opening game in a T20 World Cup for the second time on Wednesday.
Please Wait while comments are loading...