ಇಂಡೋ-ಪಾಕ್ ವಾರ್ : ಬಿಗ್ ಬಿಯಿಂದ ರಾಷ್ಟ್ರಗೀತೆ ನಾಂದಿ

By: ಕ್ರಿಕೆಟ್ ಡೆಸ್ಕ್
Subscribe to Oneindia Kannada

ಕೋಲ್ಕತ್ತಾ, ಮಾರ್ಚ್ 16: ಭಾರತ ಮತ್ತು ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನ ನಡುವೆ ಮಾರ್ಚ್ 19 ರಂದು ಕೋಲ್ಕತ್ತಾದ ಈಡನ್ ಗಾರ್ಡನ್ ಕ್ರೀಡಾಂಗಣದಲ್ಲಿ ವಿಶ್ವ ಟ್ವೆಂಟಿ20 ಪಂದ್ಯ ನಿಗದಿಯಾಗಿದೆ. ಈ ಪಂದ್ಯದ ಆರಂಭಕ್ಕೂ ಮುನ್ನ ಮೆಗಾ ಸ್ಟಾರ್ ಅಮಿತಾಬ್ ಬಚ್ಚನ್ ಅವರು ಭಾರತದ ರಾಷ್ಟ್ರಗೀತೆಯನ್ನು ಹಾಡುವ ಮೂಲಕ ಪಂದ್ಯಕ್ಕೆ ಚಾಲನೆ ನೀಡಲಿದ್ದಾರೆ.

ವಿಶ್ವ ಟಿ20: ತಂಡಗಳು | ವೇಳಾಪಟ್ಟಿ | ಗ್ಯಾಲರಿ | ಟೂರ್ನಿಗೆ ಫುಲ್ ಗೈಡ್

ಭಾರತ ಮತ್ತು ಪಾಕ್ ಪಂದ್ಯ ಆರಂಭಕ್ಕೂ ಮೊದಲು ತಾವು ರಾಷ್ಟ್ರಗೀತೆಯನ್ನು ಹಾಡುವುದಾಗಿ ತಮ್ಮ ಟ್ವಿಟ್ಟರ್ ಮೂಲಕ ಬಾಲಿವುಡ್ ಸ್ಟಾರ್ ಬಿಗ್ ಬಿ ಖಚಿತ ಪಡಿಸಿದ್ದಾರೆ. [ಮತ್ತೊಮ್ಮೆ 'ಮೌಕಾ ಮೌಕಾ' ಆಡ್]

Amitabh Bachchan to sing National Anthem

ಇದೇ ವೇಳೆ ಬೆಂಗಾಲ ಕ್ರಿಕೆಟ್ ಅಸೋಸಿಯೇಷನ್ ಅಧ್ಯಕ್ಷ ಹಾಗೂ ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ಸೌರವ್ ಗಂಗೂಲಿ ಅವರು ಉಪಸ್ಥಿತರಿರಲಿದ್ದಾರೆ ಎಂದು ಬಂಗಾಳ ಕ್ರಿಕೆಟ್ ಅಸೋಸಿಯೇಷನ್ ಮೂಲಗಳು ಮಾಧ್ಯಮಕ್ಕೆ ತಿಳಿಸಿವೆ.[ಪಾಕಿಸ್ತಾನ ಗೆದ್ದು ಬಿಟ್ರೆ ಬಟ್ಟೆ ಬಿಚ್ತಾರಂತೆ ಈ ರೂಪದರ್ಶಿ!]

ಪಾಕಿಸ್ತಾನ ಮೂಲದ ಖ್ಯಾತ ಗಾಯಕ ಸಫಾಕತ್ ಅಮಾನತ್ ಅಲಿ ಅವರು ಪಾಕಿಸ್ತಾನದ ರಾಷ್ಟ್ರಗೀತೆಯನ್ನು ಹಾಡಲಿದ್ದಾರೆ.

ಧರ್ಮಶಾಲಾದಲ್ಲಿ ನಡೆಯಬೇಕಿದ್ದ ಇಂಡೋ ಮತ್ತು ಪಾಕ್ ತುರುಸಿನ ಪಂದ್ಯವನ್ನು ಭದ್ರತೆಯ ದೃಷ್ಟಿಯಿಂದ ಕೋಲ್ಕತ್ತಾಗೆ ಸ್ಥಳಾಂತರ ಮಾಡಲಾಗಿದ್ದು, ಹೈವೋಲ್ಟೆಜ್ ಪಂದ್ಯವನ್ನು ವೀಕ್ಷಿಸಲು ಕ್ರಿಕೆಟ್ ಅಭಿಮಾನಿಗಳು ಮಾರ್ಚ್ 19 ಶನಿವಾರಕ್ಕಾಗಿ ಕಾದು ಕುಳಿತಿದ್ದಾರೆ. ಒಟ್ಟಿನಲ್ಲಿ ದಾಯಾದಿಗಳ ಕದನಕ್ಕೆ ಕೋಲ್ಕತ್ತಾದ ಈಡನ್ ಗಾರ್ಡನ್ ಸ್ಟೇಡಿಯಂ ಸಾಕ್ಷಿಯಾಗಲಿದೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Bollywood superstar Amitabh Bachchan will sing the National Anthem before the start of the marquee India-Pakistan World Twenty20 cricket match at the Eden Gardens March 19.
Please Wait while comments are loading...