ರಾಷ್ಟ್ರಗೀತೆ ಹಾಡಲು ಬಿಗ್ ಬಿ ಅವರು ಬಿಡಿಗಾಸು ಪಡೆದಿಲ್ಲ!

By: ಕ್ರಿಕೆಟ್ ಡೆಸ್ಕ್
Subscribe to Oneindia Kannada

ಕೋಲ್ಕತ್ತಾ, ಮಾರ್ಚ್ 21 : ಇಲ್ಲಿನ ಈಡನ್ ಗಾರ್ಡನ್ ಮೈದಾನದಲ್ಲಿ ನಡೆದ ಇಂಡೋ-ಪಾಕ್ ವಿಶ್ವ ಟಿ20 ಕ್ರಿಕೆಟ್ ಹೈವೋಲೇಜ್ ಪಂದ್ಯಕ್ಕೂ ಮುನ್ನ ಬಾಲಿವುಡ್ ಮೆಗಸ್ಟಾರ್ ಅಮಿತಾಬ್ ಬಚ್ಚನ್ ಅವರು ರಾಷ್ಟ್ರಗೀತೆ ಹಾಡಿದ್ದರು.

ವಿಶ್ವ ಟಿ20: ತಂಡಗಳು | ವೇಳಾಪಟ್ಟಿ | ಗ್ಯಾಲರಿ |ಟೂರ್ನಿಗೆ ಫುಲ್ ಗೈಡ್


ಇದಕ್ಕಾಗಿ 4 ಕೋಟಿ ರು ಮೊತ್ತ ಪಡೆದ್ದಾರೆ ಎಂದು ಸಾಮಾಜಿಕ ಜಾಲ ತಾಣಗಳಲ್ಲಿ ವದಂತಿ ಹಬ್ಬಿತ್ತು. ಬಂಗಾಳ ಕ್ರಿಕೆಟ್ ಅಸೋಸಿಯೇಷನ್ ಅಧ್ಯಕ್ಷ ಸೌರವ್ ಗಂಗೂಲಿ ಅವರು ಈ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ.[ಕೊಹ್ಲಿ 'ವಿರಾಟ್' ಪ್ರದರ್ಶನ, ಅನುಷ್ಕಾರನ್ನು ಕಿಚಾಯಿಸಿದ ಟ್ವೀಟ್ಸ್]

ಶನಿವಾರ ನಡೆದ ಮಹತ್ವದ ಪಂದ್ಯಕ್ಕೂ ಮುನ್ನ ಅಮಿತಾಬ್ ಅವರು ರಾಷ್ಟ್ರಗೀತೆ ಹಾಡಿದ್ದು ಹೆಮ್ಮೆಯ ವಿಷಯ. ಅವರು ರಾಷ್ಟ್ರಗೀತೆ ಹಾಡಲು ಯಾವುದೇ ಸಂಭಾವನೆ ಪಡೆದುಕೊಂಡಿಲ್ಲ. ಸಾಮಾಜಿಕ ಜಾಲತಾಣಗಳಲ್ಲಿ ಬಿಗ್ ಬಿ ವಿರುದ್ಧ ಸುಳ್ಳು ಸುದ್ದಿ ಹಬ್ಬಿದೆ ಅಷ್ಟೇ ಎಂದು ಬಂಗಾಲ ಕ್ರಿಕೆಟ್ ಅಸೋಷಿಯೇಶನ್ ಸ್ಪಷ್ಟನೆ ನೀಡಿದೆ.

ರಾಷ್ಟ್ರಗೀತೆ ಹಾಡಲು ಬಿಗ್ ಬಿ ಅವರು ಸುಮಾರು 4 ಕೋಟಿ ರುಗಳನ್ನು ಸಂಭವನೆ ಪಡೆದುಕೊಂಡಿದ್ದಾರೆಂದು ಸಾಮಾಜಿಕ ಜಾಲ ತಾಣಗಳಲ್ಲಿ ಸುದ್ದಿ ಹಬ್ಬಿತ್ತು. ಈ ಸುದ್ದಿ ಪರ ವಿರೋಧ ಚರ್ಚೆ ನಡೆದಿತ್ತು.

ಅಮಿತಾಬ್ ಹೋಟೆಲ್ ಬಿಲ್ ಕೂಡಾ ಸಿಎಬಿ ಕೊಟ್ಟಿಲ್ಲ

ಅಮಿತಾಬ್ ಹೋಟೆಲ್ ಬಿಲ್ ಕೂಡಾ ಸಿಎಬಿ ಕೊಟ್ಟಿಲ್ಲ

ಅಮಿತಾಬ್ ರಾಷ್ಟ್ರಗೀತೆಯನ್ನು ಹಾಡಲು ಮುಂಬೈನಿಂದ ಕೋಲ್ಕತ್ತಾಗೆ ವಿಮಾನದಲ್ಲಿ ಆಗಮಿಸಿರುವ ಟಿಕೆಟ್ ಬಿಲ್ ಮತ್ತು ಹೋಟೆಲ್ ಬಿಲ್ ಗಳುನ್ನು ಅವರೇ ಭರಿಸಿದ್ದಾರೆಂದು ಸಿಎಬಿ ಮಾಧ್ಯಮಗಳಿಗೆ ತಿಳಿಸಿದೆ. 30-40 ಲಕ್ಷ ರು ಖರ್ಚು ಮಾಡಿಕೊಂಡು ದೇಶಗೀತೆ ಹಾಡಿದ ಬಿಗ್ ಬಿ ಬಗ್ಗೆ ಇಲ್ಲಸಲ್ಲದ ಆರೋಪಕ್ಕೆ ತೆರೆ ಎಳೆಯಲಾಗಿದೆ.

ಕ್ರಿಕೆಟ್ ದಿಗ್ಗಜರ ಜೊತೆ ಬಿಗ್ ಬಿಗೂ ಸನ್ಮಾನ

ಕ್ರಿಕೆಟ್ ದಿಗ್ಗಜರ ಜೊತೆ ಬಿಗ್ ಬಿಗೂ ಸನ್ಮಾನ

73 ವರ್ಷದ ಬಿಗ್ ಬಿ ಭಾರತ ಮತ್ತು ಪಾಕಿಸ್ತಾನ ಪಂದ್ಯಕ್ಕೂ ಮುಂಚೆ ರಾಷ್ಟ್ರಗೀತೆ ಹಾಡುತ್ತೇನೆಂದು ಒಪ್ಪಿಕೊಂಡು, ಮಾರ್ಚ್ 19 ರಂದು ತಾವು ಹೇಳಿದಂತೆ ರಾಷ್ಟ್ರಗೀತೆಯನ್ನು ಹಾಡಿದ್ದರು. ಇದೇ ಸಂದರ್ಭದಲ್ಲಿ ಪಶ್ಚಿಮ ಬಂಗಾಲದ ಮುಖ್ಯಂತ್ರಿ ಮಮತಾ ಬ್ಯಾನರ್ಜಿ ಅವರು ಕ್ರಿಕೆಟ್ ದಿಗ್ಗಜರ ಜೊತೆ ಅಮಿತಾಬ್ ಬಚ್ಚನ್ ಅವರನ್ನು ಸನ್ಮಾನಿಸಿದರು.

ಬಿಗ್ ಬಿ ಅವರು ಸುಮಾರು 4 ಕೋಟಿ ರು ಪಡೆದಿದ್ರಾ?

ಬಿಗ್ ಬಿ ಅವರು ಸುಮಾರು 4 ಕೋಟಿ ರು ಪಡೆದಿದ್ರಾ?

ರಾಷ್ಟ್ರಗೀತೆ ಹಾಡಲು ಬಿಗ್ ಬಿ ಅವರು ಸುಮಾರು 4 ಕೋಟಿ ರುಗಳನ್ನು ಸಂಭವನೆ ಪಡೆದುಕೊಂಡಿದ್ದಾರೆಂದು ಸಾಮಾಜಿಕ ಜಾಲ ತಾಣಗಳಲ್ಲಿ ಸುದ್ದಿ ಹಬ್ಬಿತ್ತು. ಈ ಸುದ್ದಿ ಪರ ವಿರೋಧ ಚರ್ಚೆ ನಡೆದಿತ್ತು. ಬಂಗಾಲ ಕ್ರಿಕೆಟ್ ಮಧ್ಯ ಪ್ರವೇಶಿಸಿ ಸ್ಪಷ್ಟನೆ ನೀಡಿ ಸುಳ್ಳು ಸುದ್ದಿಗಳಿಗೆ ತೆರೆ ಎಳೆದಿದೆ

ಬಿಗ್ ಬಿ ಜೊತೆ ಸಚಿನ್ ರಿಂದ ಪಂದ್ಯ ವೀಕ್ಷಣೆ

ಬಿಗ್ ಬಿ ಜೊತೆ ಸಚಿನ್ ರಿಂದ ಪಂದ್ಯ ವೀಕ್ಷಣೆ

ಭಾರತ-ಪಾಕ್ ದಾಯಾದಿಗಳ ಕದನವನ್ನು ವೀಕ್ಷಿಸಲು ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್, ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ, ಅಭಿಷೇಕ್ ಬಚ್ಚನ್, ಸೌರವ್ ಸಂಗೂಲಿ ಸೇರಿದಂತೆ ಭಾರತ ಮತ್ತು ಪಾಕಿಸ್ತಾನದ ಕ್ರಿಕೆಟ್ ದಿಗ್ಗಜರ ಬಳಗವೇ ಈಡನ್ ಗಾರ್ಡನ್ ಮೈದಾನದಲ್ಲಿ ಹಾಜರಿತ್ತು.

 ವಿರಾಟ್ ಕೊಹ್ಲಿ ಅದ್ಭುತ ಬ್ಯಾಟಿಂಗ್

ವಿರಾಟ್ ಕೊಹ್ಲಿ ಅದ್ಭುತ ಬ್ಯಾಟಿಂಗ್

ವಿರಾಟ್ ಅವರ ಅಮೋಘ ಪ್ರದರ್ಶನದಿಂದ ಭಾರತ ತಂಡ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನ ವಿರುದ್ಧ 6 ವಿಕೆಟ್ ಗಳ ಭರ್ಜರಿ ಜಯಗಳಿಸಿತು.
ಪಂದ್ಯದ ವೇಳೆ ವಿರಾಟ್ ಕೊಹ್ಲಿ ಅವರು ಅರ್ಧಶತಕ ಸಿಡಿಸಿ ಬಿಗ್ ಬಿ, ಸಚಿನ್ ಅವರಿದ್ದ ಗ್ಯಾಲರಿಯತ್ತ ತಲೆ ಬಾಗಿಸಿ ನಮಿಸಿದ್ದು ವಿಶೇಷ ಪಂದ್ಯ ಶ್ರೇಷ್ಠ ಪ್ರಶಸ್ತಿಯನ್ನು ಸಚಿನ್ ಅವರಿಗೆ ಕೊಹ್ಲಿ ಅವರು ಅರ್ಪಿಸಿದರು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
India's cine megastar Amitabh Bachchan did not take any appearance fee for singing the National Anthem in the India-Pakistan World Twenty 20 clash, confirmed a senior official of the Cricket Association of Bengal (CAB) on Sunday (Marc 20)
Please Wait while comments are loading...