ಆಫ್ಘನ್ ಆಸೆ ಜೀವಂತ, ಅರ್ಹತಾ ಸುತ್ತಲ್ಲಿ ಸತತ 2 ಜಯ

Posted By:
Subscribe to Oneindia Kannada

ನಾಗ್ಪುರ, ಮಾರ್ಚ್ 10: ಐಸಿಸಿ ವಿಶ್ವ ಟಿ20 ಅರ್ಹತಾ ಸುತ್ತಿನಲ್ಲಿ ಸತತ ಎರಡು ಗೆಲುವಿನೊಂದಿಗೆ ಆಫ್ಘಾನಿಸ್ತಾನ ತಂಡ ಮುಂದಿನ ಸುತ್ತಿಗೆ ಹಾರಲು ಆಸೆ ಜೀವಂತ ಇರಿಸಿಕೊಂಡಿದೆ. ಹಾಂಗ್ ಕಾಂಗ್ ತಂಡವನ್ನು 6 ವಿಕೆಟ್ ಗಳಿಂದ ಸೋಲಿಸಿದೆ.

ಪಂದ್ಯದ ಸ್ಕೋರ್ ಕಾರ್ಡ್

ಮೊಹಮದ್ ನಬಿ ಅವರು 20ರನ್ನಿತ್ತು 4 ವಿಕೆಟ್ ಕಬಳಿಸಿ, ಹಾಂಗ್ ಕಾಂಗ್ ತಂಡವನ್ನು 20 ಓವರ್ ಗಳಲ್ಲಿ 6/115ಕ್ಕೆ ನಿಯಂತ್ರಿಸಿದ ಅಫ್ಘಾನಿಸ್ತಾನ ಸುಲಭ ಜಯ ದಾಖಲಿಸಿತು.

World T20: Afghanistan register second victory in qualifying round

ಹಾಂಗ್ ಕಾಂಗ್ ಉತ್ತಮ ಆರಂಭದ ಲಾಭ ಪಡೆಯುವಲ್ಲಿ ವಿಫಲವಾಯಿತು. ಅಟ್ಕಿಸನ್ 16, ಕ್ಯಾಂಪ್ ಬೆಲ್ 27ರನ್ ಗಳಿಸಿದರು. ತಂಡದ 40ರನ್ ಆಗಿದ್ದಾಗ ಮೊದಲ ವಿಕೆಟ್ ಕಳೆದುಕೊಂಡ ಹಾಂಗ್ ಕಾಂಗ್ ನಂತರ ನಿರಂತರವಾಗಿ ವಿಕೆಟ್ ಕಳೆದುಕೊಂಡು ಅಲ್ಪಮೊತ್ತಕ್ಕೆ ಕುಸಿಯಿತು.

ಮಧ್ಯಮ ಕ್ರಮಾಂಕದಲ್ಲಿ ರಾತ್ ಅವರು 28ರನ್ ಗಳಿಸಿ ತಂಡದ ಮೊತ್ತ ಹೆಚ್ಚಿಸಲು ಪ್ರಯತ್ನಪಟ್ಟರು. ಅಫ್ಘಾನಿಸ್ತಾನ ಪರ ನಬಿ ಅಲ್ಲದೆ ರಷೀದ್ ಖಾನ್ ಹಾಗೂ ನೈಬ್ ತಲಾ 1 ವಿಕೆಟ್ ಪಡೆದರು.

ಅಲ್ಪಮೊತ್ತವನ್ನು ಚೇಸ್ ಮಾಡಿದ ಅಫ್ಘಾನಿಸ್ತಾನ ತಂಡ 18 ಓವರ್ ಗಳಲ್ಲಿ 119/4 ಸ್ಕೋರ್ ಮಾಡಿ ಗೆಲುವು ಸಾಧಿಸಿತು. ವಿಕೆಟ್ ಕೀಪರ್ ಮೊಹಮ್ಮದ್ ಶಹಜಾದ್ 40 ಎಸೆತಗಳಲ್ಲಿ 41ರನ್ (4x4, 2x6), ನೂರ್ ಅಲಿ ಜರ್ದಾನ್ 35 ರನ್ ಗಳಿಸಿ ಉತ್ತಮ ಆರಂಭ ಒದಗಿಸಿದರು. ನಂತರ ನಜಿಬುಲ್ಲಾ ಜದ್ರಾನ್, ಮೊಹಮ್ಮದ್ ನಬಿ ತಲಾ 17ರನ್ ಗಳಿಸಿ ಗೆಲುವಿನತ್ತ ಕೊಂಡೊಯ್ದರು. ಮುಂದಿನ ಪಂದ್ಯ ಮಾರ್ಚ್ 12ರಂದು ಜಿಂಬಾಬ್ವೆ ವಿರುದ್ಧ ಆಡಲಿದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Afghanistan defeated Hong Kong by six wickets for their second straight win in the ICC World T20 qualifier here tonight (March 10).
Please Wait while comments are loading...