ವಿಶ್ವ ಟಿ20:ಸೆಹ್ವಾಗ್ ಆಯ್ಕೆಯ ಫೇವರಿಟ್ ನಾಲ್ಕು ತಂಡಗಳು?

Posted By:
Subscribe to Oneindia Kannada

ನವದೆಹಲಿ, ಮಾರ್ಚ್ 07: ಟೀಂ ಇಂಡಿಯಾದ ಮಾಜಿ ಆರಂಭಿಕ ಆಟಗಾರ ವೀರೇಂದರ್ ಸೆಹ್ವಾಗ್ ಅವರು ಮುಂಬರುವ ವಿಶ್ವ ಟಿ20 ಟೂರ್ನಿಯಲ್ಲಿ ಸೆಮಿಫೈನಲ್ ತಲುಪುವ ನಾಲ್ಕು ತಂಡಗಳನ್ನು ಹೆಸರಿಸಿದ್ದಾರೆ. ಐಸಿಸಿ ವಿಶ್ವ ಟಿ20 ಟೂರ್ನಮೆಂಟ್ ಮಾರ್ಚ್ 08ರಿಂದ ಅರಂಭಗೊಳ್ಳಲಿದೆ.

ಇಂಡಿಯಾ ಟುಡೇ ಅಭಿಯಾನ 'ಸಲಾಮ್ ಕ್ರಿಕೆಟ್ 2016' ನಲ್ಲಿ ಪಾಲ್ಗೊಂಡು ಮಾತನಾಡಿದ ಸೆಹ್ವಾಗ್ ಅವರು ಮಹೇಂದ್ರ ಸಿಂಗ್ ಧೋನಿ ನೇತೃತ್ವದ ಟೀಂ ಇಂಡಿಯಾ ಕಪ್ ಗೆಲ್ಲುವ ಫೇವರೀಟ್ ಎಂದಿದ್ದಾರೆ. [ವಿಶ್ವ ಟಿ20: ತಂಡಗಳು | ವೇಳಾಪಟ್ಟಿ | ಗ್ಯಾಲರಿ]

ಐಸಿಸಿ ವಿಶ್ವ ಟಿ20 ಟೂರ್ನಮೆಂಟ್ ಮಾರ್ಚ್ 08 ರಿಂದ ಏಪ್ರಿಲ್ 03ರ ತನಕ ನಡೆಯಲಿದೆ. ಕೋಲ್ಕತ್ತಾದ ಈಡೆನ್ ಗಾರ್ಡನ್ಸ್ ನಲ್ಲಿ ಫೈನಲ್ ನಿಗದಿಯಾಗಿದೆ. [ಸೆಹ್ವಾಗ್ ನುಡಿದ ಟಿ20 ಭವಿಷ್ಯ: ಬಹುತೇಕ ನಿಜವಾಯ್ತು!]

Virender Sehwag picks his 4 semi-finalists

37 ವರ್ಷ ವಯಸ್ಸಿನ ವೀರೇಂದರ್ ಸೆಹ್ವಾಗ್ ಅವರು ಇತ್ತೀಚೆಗಷ್ಟೇ ಕ್ರೀಡಾ ಅಂಕಣಕಾರರಾಗಿದ್ದಾರೆ. ಈಗ ವಿಶ್ವ ಟಿ20ಗಾಗಿ ವಿಶ್ಲೇಷಕರಾಗಿ ಕೂಡಾ ಕಾಣಿಸಿಕೊಳ್ಳಲಿದ್ದಾರೆ.

ಭಾರತ, ನ್ಯೂಜಿಲೆಂಡ್, ವೆಸ್ಟ್ ಇಂಡೀಸ್ ಹಾಗೂ ದಕ್ಷಿಣ ಆಫ್ರಿಕಾ ತಂಡಗಳು ಸೆಮಿಫೈನಲ್ ತಲುಪುವ ಅರ್ಹತೆ, ಸಾಮರ್ಥ್ಯ ಹೊಂದಿವೆ ಎಂದು ಸೆಹ್ವಾಗ್ ಹೇಳಿದ್ದಾರೆ. [ಟಿ20ಗಾಗಿ ಟೀಂ ಇಂಡಿಯಾಕ್ಕೆ ಸಕತ್ ಟ್ರೆಂಡಿ ದಿರಿಸು]

ಆಸ್ಟ್ರೇಲಿಯಾ, ನ್ಯೂಜಿಲೆಂಡ್, ಪಾಕಿಸ್ತಾನ ಹಾಗೂ ಅರ್ಹತಾ ಸುತ್ತಿನಿಂದ ಬಂದ ಮತ್ತೊಂದು ತಂಡದೊಡನೆ ಕಾದಾಡಿ ಭಾರತ ಸೆಮೀಸ್ ತಲುಪಬೇಕಿದೆ. ಫೈನಲ್ ಆಡುವ ತಂಡಗಳ ಆಯ್ಕೆ ಕಷ್ಟ. ಭಾರತ ಹಾಗೂ ವೆಸ್ಟ್ ಇಂಡೀಸ್ ಅಥವಾ ಭಾರತ ಹಾಗೂ ದಕ್ಷಿಣ ಆಫ್ರಿಕಾ ನಡುವೆ ಪಂದ್ಯ ನಡೆಯಬಹುದು ಎಂದಿದ್ದಾರೆ.

ಭಾರತ ತನ್ನ ಮೊದಲ ಪಂದ್ಯವನ್ನು ಮಾರ್ಚ್ 15ರಂದು ನಾಗ್ಪುರದಲ್ಲಿ ನ್ಯೂಜಿಲೆಂಡ್ ವಿರುದ್ಧ ಆಡಲಿದೆ.2007ರಲ್ಲಿ ದಕ್ಷಿಣ ಆಫ್ರಿಕಾದಲ್ಲಿ ನಡೆದ ಚೊಚ್ಚಲ ವಿಶ್ವ ಟಿ20 ಟೂರ್ನಮೆಂಟ್ ನಲ್ಲಿ ಪ್ರಶಸ್ತಿ ಗೆದ್ದ ಭಾರತ ತಂಡ ಭಾಗವಾಗಿದ್ದ ಸೆಹ್ವಾಗ್ ಅವರು ಕಳೆದ ವರ್ಷ ಅಂತಾರಾಷ್ಟ್ರೀಯ ಕ್ರಿಕೆಟ್ ನಿಂದ ನಿವೃತ್ತಿ ಹೊಂದಿದರು.

2007ರಲ್ಲಿ ಭಾರತ ಗೆದ್ದ ಬಳಿಕ 2009ರಲ್ಲಿ ಪಾಕಿಸ್ತಾನ, 2010ರಲ್ಲಿ ಇಂಗ್ಲೆಂಡ್, 2012ರಲ್ಲಿ ವೆಸ್ಟ್ ಇಂಡೀಸ್ ಹಾಗೂ 2014ರಲ್ಲಿ ಶ್ರೀಲಂಕಾ ವಿಶ್ವ ಟಿ20 ಕಪ್ ಎತ್ತಿವೆ. ಯಾವ ತಂಡವೂ ಎರಡು ಬಾರಿ ಕಪ್ ಗೆ ಮುತ್ತಿಡುವ ಅವಕಾಶ ಪಡೆದುಕೊಂಡಿಲ್ಲ. (ಒನ್ಇಂಡಿಯಾ ಸುದ್ದಿ)

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Former Indian opener Virender Sehwag has picked his four semi-finalists for the ICC World Twenty20 2016 tournament, which starts from tomorrow (March 8).
Please Wait while comments are loading...