ವಿಶ್ವ ಟಿ20: ಟೀಂ ಇಂಡಿಯಾ ಸೋಲಿಸಿ, ಫೈನಲಿಗೆ ವಿಂಡೀಸ್ ಲಗ್ಗೆ

Posted By:
Subscribe to Oneindia Kannada

ಮುಂಬೈ, ಮಾರ್ಚ್ 31: ವಿಶ್ವ ಟ್ವೆಂಟಿ20 ಟೂರ್ನಮೆಂಟ್ ನ ಎರಡನೇ ಸೆಮಿಫೈನಲ್ ಪಂದ್ಯದಲ್ಲಿ ಟೀಂ ಇಂಡಿಯಾವನ್ನು 7 ವಿಕೆಟ್ ಗಳಿಂದ ವೆಸ್ಟ್ ಇಂಡೀಸ್ ಸೋಲಿಸಿದೆ. ಈ ಮೂಲಕ ಏಪ್ರಿಲ್ 03 ರಂದು ಈಡನ್ ಗಾರ್ಡನ್ಸ್ ನಲ್ಲಿ ಇಂಗ್ಲೆಂಡ್ ವಿರುದ್ಧ ಅಂತಿಮ ಹಣಾಹಣಿಯಲ್ಲಿ ವಿಂಡೀಸ್ ಸೆಣಸಲಿದೆ.

ವಿಶ್ವ ಟಿ20: ತಂಡಗಳು | ವೇಳಾಪಟ್ಟಿ | ಗ್ಯಾಲರಿ |ಟೂರ್ನಿಗೆ ಫುಲ್ ಗೈಡ್

ವಿಂಡೀಸ್ ರನ್ ಚೇಸ್:
* ಎರಡನೇ ಓವರ್ ನಲ್ಲೇ ಕ್ರಿಸ್ ಬೂಮ್ರಾ ಎಸೆತಕ್ಕೆ ಕ್ರಿಸ್ ಗೇಲ್ (6) ಕ್ಲೀನ್ ಬೋಲ್ಡ್.
* ಚಾರ್ಲ್ಸ್ 36 ಎಸೆತಗಳಲ್ಲಿ 52 ರನ್ (‌7x4, 2x6) ಚೆಚ್ಚಿ ಉತ್ತಮ ಆರಂಭ
* ಫ್ಲೆಚರ್ ಬದಲಿಗೆ ತಂಡ ಸೇರಿದ ಲೆಂಡ್ಲ್ ಸಿಮನ್ಸ್ ಪಂದ್ಯ ಗೆಲ್ಲಿಸಿದ ವೀರ ಎನಿಸಿದರು.
* ಸಿಮನ್ಸ್ ಅವರು 51 ಎಸೆತಗಳಲ್ಲಿ 83 ರನ್ (‌7x4, 5x6) ಗಳಿಸಿ ಅಜೇಯ ರಾಗಿ ಉಳಿದರು.
* ಆಂಡ್ರೆ ರಸೆಲ್ 20 ಎಸೆತಗಳಲ್ಲಿ 43 ರನ್ (3x4, 4x6) ಗಳಿಸಿ ಉತ್ತಮ ಸಾಥ್ ನೀಡಿದರು.
* 19.4 ಓವರ್ ಗಳಲ್ಲಿ 196/3 ಸ್ಕೋರ್ ಮಾಡಿ ಫೈನಲಿಗೆ ಲಗ್ಗೆ ಇಟ್ಟರು.

Lendl Simmons

ಭಾರತದ ಬ್ಯಾಟಿಂಗ್:
* ರೋಹಿತ್ ಶರ್ಮ 43ರನ್ ಗಳಿಸಿ ಬೆನ್ ಸ್ಪಿನ್ನಿಗೆ ವಿಕೆಟ್ ಒಪ್ಪಿಸಿದ್ದಾರೆ.
* ಟೂರ್ನಿಯಲ್ಲಿ ಮೊದಲ ಬಾರಿಗೆ ಆಡುವ ಅವಕಾಶ ಪಡೆದ ಅಜಿಂಕ್ಯ ರಹಾನೆ 35 ಎಸೆತಗಳಲ್ಲಿ 40 ರನ್ ಗಳಿಸಿದರು.
* ವಿರಾಟ್ ಕೊಹ್ಲಿ ಮತ್ತೊಮ್ಮೆ ಜವಾಬ್ದಾರಿಯುತ ಬ್ಯಾಟಿಂಗ್ ಪ್ರದರ್ಶಿಸಿ 47 ಎಸೆತಗಳಲ್ಲಿ 89 ರನ್ (11x4, 1x6) ಚೆಚ್ಚಿ ಭಾರತಕ್ಕೆ ಗೆಲುವಿನ ಆಸೆ ಚಿಗುರಿಸಿದರು.
* ಸುರೇಶ್ ರೈನಾ ಹಾಗೂ ಮನೀಶ್ ಪಾಂಡೆ ಬದಲಿಗೆ ಮುಂಚಿತವಾಗಿ ಕಣಕ್ಕಿಳಿದ ಎಂಎಸ್ ಧೋನಿ 9 ಎಸೆತಗಳಲ್ಲಿ 15 ರನ್ ಗಳಿಸಿದರು.

ವಿಶ್ವ ಟ್ವೆಂಟಿ20 ಟೂರ್ನಮೆಂಟ್ ನ ಎರಡನೇ ಸೆಮಿಫೈನಲ್ ಪಂದ್ಯದಲ್ಲಿ ಟಾಸ್ ಗೆದ್ದ ವೆಸ್ಟ್ ಇಂಡೀಸ್ ಮೊದಲು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿದೆ.

ಉಪಾಂತ್ಯ ಪಂದ್ಯವಾಡುತ್ತಿರುವ ಟೀಂ ಇಂಡಿಯಾದಲ್ಲಿ ಯುವರಾಜ್ ಸಿಂಗ್ ಆಡುತ್ತಿಲ್ಲ. ಯುವರಾಜ್ ಸಿಂಗ್ ಬದಲಿಗೆ ತಂಡ ಸೇರಿದ್ದ ಕರ್ನಾಟಕದ ಮನೀಶ್ ಪಾಂಡೆಗೆ ಆಡುವ XI ನಲ್ಲಿ ಸ್ಥಾನ ಸಿಕ್ಕಿದೆ. ಜೊತೆಗೆ ಬ್ಯಾಟಿಂಗ್ ವೈಫಲ್ಯ ಕಂಡಿರುವ ಆರಂಭಿಕ ಆಟಗಾರ ಶಿಖರ್ ಧವನ್ ಬದಲಿಗೆ ಅಜಿಂಕ್ಯ ರಹಾನೆಗೆ ಸ್ಥಾನ ಕಲ್ಪಿಸಲಾಗಿದೆ. [ವಿಂಡೀಸ್ ವಿರುದ್ಧ ಗೆದ್ದರೆ ಧೋನಿಯಿಂದ ಅಪೂರ್ವ ದಾಖಲೆ]

World T20: West Indies invite India to bat first in Mumbai

ಈ ಪಂದ್ಯವನ್ನು ಗೆದ್ದವರು ಏಪ್ರಿಲ್ 3(ಭಾನುವಾರ) ರಂದು ಇಂಗ್ಲೆಂಡ್ ವಿರುದ್ಧ ಕೋಲ್ಕತ್ತಾದ ಈಡನ ಗಾರ್ಡನ್ಸ್ ಮೈದಾನದಲ್ಲಿ ಫೈನಲ್ ಆಡಲಿದ್ದಾರೆ. [ವಿಶ್ವ ಟಿ20 ಟೂರ್ನಿಯಿಂದ ಯುವರಾಜ್ ಔಟ್]


ಮೊದಲ ಸೆಮಿಫೈನಲ್ ಪಂದ್ಯದಲ್ಲಿ ನ್ಯೂಜಿಲೆಂಡ್ ವಿರುದ್ಧ ಇಂಗ್ಲೆಂಡ್ ತಂಡ 7 ವಿಕೆಟ್ ಗಳ ಭರ್ಜರಿ ಜಯ ದಾಖಲಿಸಿದ್ದನ್ನು ಇಲ್ಲಿ ಸ್ಮರಿಸಬಹುದು. [ಫೈನಲ್ ಪ್ರವೇಶಿಸಿದ ಇಂಗ್ಲೆಂಡ್]

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
World T20: West Indies beat India by 7 wickets and enter Final of ICC World Twenty20.Simmons scored 83 runs helped West Indies to chase target of 193 runs in 19.4 Overs at Wankhede Stadium, Mumbai on March 31, 2016.
Please Wait while comments are loading...