ವಿಶ್ವ ಟಿ20: ಬಾಂಗ್ಲಾದೇಶ ವಿರುದ್ಧ ಭಾರತಕ್ಕೆ ರೋಚಕ ಜಯ

Posted By:
Subscribe to Oneindia Kannada

ಬೆಂಗಳೂರು, ಮಾರ್ಚ್ 23: ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಭಾರತ ವಿರುದ್ಧ ಟ್ವೆಂಟಿ ಅಂತಾರಾಷ್ಟ್ರೀಯ ಪಂದ್ಯದಲ್ಲಿ ಮೊಟ್ಟ ಮೊದಲ ಗೆಲುವು ಸಾಧಿಸುವ ಬಾಂಗ್ಲಾದೇಶದ ಕನಸು ನುಚ್ಚುನೂರಾಯಿತು. ಜೊತೆಗೆ ವಿಶ್ವ ಟಿ20 ಟೂರ್ನಿಯಿಂದಲೂ ಹೊರಕ್ಕೆ ಕಾಲಿಟ್ಟಿತು. ಸೂಪರ್ 10ರ ಮಹತ್ವದ ಪಂದ್ಯದಲ್ಲಿ ಬಾಂಗ್ಲಾದೇಶ ವಿರುದ್ಧ ಭಾರತ ರೋಚಕ ಜಯ ದಾಖಲಿಸಿತು.

ವಿಶ್ವ ಟಿ20: ತಂಡಗಳು | ವೇಳಾಪಟ್ಟಿ | ಗ್ಯಾಲರಿ |ಟೂರ್ನಿಗೆ ಫುಲ್ ಗೈಡ್

ಪಂದ್ಯ ಗೆಲ್ಲಲು 147 ರನ್ ಗುರಿ ಪಡೆದಿದ್ದ ಬಾಂಗ್ಲಾದೇಶ ಕೊನೆ ಓವರ್ ನಲ್ಲಿ 11 ರನ್ ಗಳಿಸಲು ಗುರಿ ಪಡೆದಿತ್ತು. ಆದರೆ, ಒಂದು ರನ್ನಿಂದ ಪಂದ್ಯ ಸೋತು ಸುಣ್ಣವಾಯಿತು.[ವಿಶ್ವ ಟಿ20: ಕೊನೆ ಓವರ್ ಥ್ರಿಲ್ಲರ್, ಧೋನಿ, ಪಾಂಡ್ಯ ಸೂಪರ್]

ಮುಂದಿನ ಪಂದ್ಯ ಯಾವಾಗ?:

* ಟೀಂ ಇಂಡಿಯಾದ ಮುಂದಿನ ಪಂದ್ಯ vs ಆಸ್ಟ್ರೇಲಿಯಾ, ಮಾರ್ಚ್ 27, (ಭಾನುವಾರ, 7.30 PM), ಮೊಹಾಲಿ
* ಬಾಂಗ್ಲಾದೇಶದ ಮುಂದಿನ ಪಂದ್ಯ vs ನ್ಯೂಜಿಲೆಂಡ್, ಮಾರ್ಚ್ 26, (ಶನಿವಾರ, 30 PM IST),ಕೋಲ್ಕತ್ತಾ

WT20 Bangladesh send unchanged India to bat first in Bengaluru


ಬಾಂಗ್ಲಾ ಇನ್ನಿಂಗ್ಸ್:

* ತಮೀಮ್ ಇಕ್ಬಾಲ್ 32 ಎಸೆತಗಳಲ್ಲಿ 35 ರನ್ ಗಳಿಸಿ ಉತ್ತಮ ಆರಂಭ. [ಗವಾಸ್ಕರ್ ವಿರುದ್ಧ ಧೋನಿ, ಬಿಗ್ ಬಿ ಕಿಡಿಕಾರಿದ್ದೇಕೆ?]
* ರಹ್ಮಾನ್ 15 ಎಸೆತಗಳಲ್ಲಿ 25 ಹಾಗೂ ಶಕೀಬ್ ಅಲ್ ಹಸನ್ 15 ಎಸೆತಗಳಲ್ಲಿ 22 ರನ್ ಗಳಿಸಿ ಉತ್ತಮ ಜೊತೆಯಾಟ ಪ್ರದರ್ಶಿಸಿದರು.
* ಉತ್ತಮ ಕ್ಯಾಚ್ ಹಿಡಿದು ಗಮನ ಸೆಳೆದ ಸೌಮ್ಯ ಸರ್ಕಾರ್ 21 ರನ್ ಗಳಿಸಿ 18ನೇ ಓವರ್ ನಲ್ಲಿ ಔಟಾದರು.
* ಮೊದಲ ಐದು ವಿಕೆಟ್ ಗಳನ್ನು ಸ್ಪಿನ್ನರ್ ಗಳಾದ ಜಡೇಜ (2), ಅಶ್ವಿನ್ (2), ರೈನಾ (1) ಹಂಚಿಕೊಂಡರು.
* ಮಹಮದುಲ್ಲಾ 6 ಎಸೆತಗಳಲ್ಲಿ 11 ರನ್ ಗಳ ಗುರಿ ತನಕ ಸ್ಕೋರ್ ತಂದರು.[ಗೆಲ್ಲುವುದಕ್ಕೆ ಮುಂಚೆ ಸಂಭ್ರಮಿಸಿದ ರಹೀಮ್‌ಗೆ ರೈನಾ ಪಂಚ್]
* ಹಾರ್ದಿಕ್ ಪಾಂಡ್ಯ ಕೊನೆ ಓವರ್ : 1,4,4, ವಿಕೆಟ್, ವಿಕೆಟ್, ವಿಕೆಟ್. ಬಾಂಗ್ಲಾ :145/9.
Indian Fans
Photo Credit: PTI

ಭಾರತದ ಇನ್ನಿಂಗ್ಸ್ :
* ರೋಹಿತ್ ಶರ್ಮ ಹಾಗೂ ಶಿಖರ್ ಧವನ್ ಮೊದಲ ಬಾರಿಗೆ ಜೊತೆಯಾಟ ನೀಡುವ ಉತ್ಸಾಹ ತೋರಿ ಔಟಾದರು.
* ರೋಹಿತ್ ಶರ್ಮ 16 ಎಸೆತಗಳಲ್ಲಿ 18, ಶಿಖರ್ ಧವನ್ 22 ಎಸೆತಗಳಲ್ಲಿ 23 ರನ್
* ವಿರಾಟ್ ಕೊಹ್ಲಿ 24 ಎಸೆತಗಳಲ್ಲಿ 24 ರನ್ ಗಳಿಸಿದರು. [ಕೊನೆ ಓವರ್ ನಲ್ಲಿ ಪಾಂಡ್ಯಾಗೆ ಧೋನಿ ನೀಡಿದ್ದ ಸಲಹೆ ಏನು?]
* ಸುರೇಶ್ ರೈನಾ 23 ಎಸೆತಗಳಲ್ಲಿ 30 ರನ್, ಪಾಂಡ್ಯ 7 ಎಸೆತಗಳಲ್ಲಿ 15 ರನ್ ಚೆಚ್ಚಿದರು.
* ಧೋನಿ ಅಜೇಯ 13, ಜಡೇಜ 8 ಎಸೆತಗಳಲ್ಲಿ 12 ರನ್ ಗಳಿಸಿ 20 ಓವರ್ ಗಳಲ್ಲಿ 146/7 ಸ್ಕೋರ್ ಮಾಡಿದರು.
* ಬಾಂಗ್ಲಾ ಪರ ಮುಸ್ಫಿಜರ್ ರಹಮಾನ್ ಹಾಗೂ ಹುಸೇನ್ ತಲಾ 2 ವಿಕೆಟ್ ಪಡೆದರು. ಹೊಮ್, ಅಲ್ ಹಸನ್, ಮಹಮುದುಲ್ಲಾ ತಲಾ 1 ವಿಕೆಟ್ ಪಡೆದರು. [ಕ್ಯಾಪ್ಟನ್ ಕೂಲ್' ಧೋನಿಗೆ ಸಿಟ್ಟು ಬಂದಿದ್ದು ಏಕೆ?]

ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಬುಧವಾರ (ಮಾರ್ಚ್ 23) ದ ಪಂದ್ಯವನ್ನು ಉತ್ತಮ ರನ್ ಸರಾಸರಿಯಲ್ಲಿ ಗೆಲ್ಲುವುದು ಟೀಂ ಇಂಡಿಯಾದ ಗುರಿಯಾಗಿದೆ. ಬಾಂಗ್ಲಾದೇಶ ತಾನಾಡಿದ ಎರಡು ಪಂದ್ಯಗಳನ್ನು ಸೋತಿದೆ. ಭಾರತ ತಂಡ, ನ್ಯೂಜಿಲೆಂಡ್ ವಿರುದ್ಧ ಸೋತು, ಪಾಕಿಸ್ತಾನ ವಿರುದ್ಧ ಗೆದ್ದಿದೆ. (ಒನ್ಇಂಡಿಯಾ ಸುದ್ದಿ)

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
India's much vaunted batting line-up struggled on a slow and sluggish track as they just about managed an unimpressive 146/7 against a disciplined Bangladesh attack in a group league encounter of the ICC World Twenty20, here tonight. India won by 1 run.
Please Wait while comments are loading...