652ರನ್ ಚೆಚ್ಚಿ ವಿಶ್ವ ದಾಖಲೆ ಬರೆದ ರಿಕ್ಷಾ ಚಾಲಕನ ಮಗ!

Posted By:
Subscribe to Oneindia Kannada

ಮುಂಬೈ, ಜ.05: ಸರಿ ಸುಮಾರು 116 ವರ್ಷಗಳ ಹಿಂದಿನ ದಾಖಲೆಯೊಂದನ್ನು ಧ್ವಂಸಗೊಳಿಸಿದ ಬ್ಯಾಟ್ಸ್ ಮನ್ ಪ್ರಣವ್ ಧನಾವಾಡೆ ಅವರು ವಿಶ್ವ ದಾಖಲೆ ಬರೆದಿದ್ದಾರೆ. ಸೋಮವಾರ ಶಾಲಾ ಟೂರ್ನಿಯೊಂದರಲ್ಲಿ 199 ಎಸೆತಗಳಲ್ಲಿ 652ರನ್ ದಾಖಲಿಸಿದ್ದಾರೆ.

ಆಟೋರಿಕ್ಷಾ ಚಾಲಕರೊಬ್ಬರ ಮಗನಾಗಿರುವ 15 ವರ್ಷ ವಯಸ್ಸಿನ ಪ್ರಣವ್ ಅವರು ಅತ್ಯಧಿಕ ವೈಯಕ್ತಿಕ ಮೊತ್ತದಾಖಲಿಸಿದ ಸಾಧನೆ ಮಾಡಿದ್ದಾರೆ. 1899ರಲ್ಲಿ ಎಇಜೆ ಕಾಲಿನ್ಸ್ ಅವರ ಹೆಸರಿನಲ್ಲಿ ಈ ದಾಖಲೆ ಇತ್ತು. ಕಾಲಿನ್ಸ್ ಅವರು ಔಟಾಗದೆ 628 ರನ್ ಗಳಿಸಿದ್ದರು.

Pranav

ಮುಂಬೈನ ಕಲ್ಯಾಣ್ ಪ್ರದೇಶದಲ್ಲಿರುವ ಶ್ರೀಮತಿ ಕೆಸಿ ಗಾಂಧಿ ಹೈಸ್ಕೂಲ್ ಪರ ಆಡಿದ ಪ್ರಣವ್ ಅವರು 72 ಬೌಂಡರಿ, 28 ಸಿಕ್ಸರ್ ಸಿಡಿಸಿ ತಮ್ಮ ಹೆಸರನ್ನು ವಿಶ್ವದಾಖಲೆ ಪುಟದಲ್ಲಿ ಕೆತ್ತಿದರು. [ಇಂಗ್ಲೆಂಡ್ ಕೌಂಟಿ ಕ್ರಿಕೆಟರ್ ನಿಂದ ವಿಶ್ವದಾಖಲೆ 350]


ಭಂಡಾರಿ ಕಪ್ ಅಂತರ್ ಶಾಲಾ ಪಂದ್ಯಾವಳಿಯಲ್ಲಿ ಆರ್ಯ ಗುರುಕುಲ ಶಾಲೆ ವಿರುದ್ಧ ಈ ದಾಖಲೆ ಮೊತ್ತ ಪೇರಿಸಿದರು.

ಪ್ರಣವ್ ಮೊತ್ತದಿಂದ ಅವರ ಶಾಲೆ 956/1 ಸ್ಕೋರ್ ಮಾಡಿತು. ಪ್ರಣವ್ 300ರನ್ ಬಾರಿಸಿದಾಗ ಅವರ ತಂದೆ ಪ್ರಶಾಂತ್ ಅವರು ಮೈದಾನಕ್ಕೆ ಬಂದರು. ಮಗನ ಆಟವನ್ನು ಕಣ್ತುಂಬಿಸಿಕೊಂಡರು.[ಸಾವಿರ ರನ್ ಬಾರಿಸಿ ಇತಿಹಾಸ ನಿರ್ಮಿಸಿದ ಪ್ರಣವ್ ]

ಪ್ರಶಾಂತ್ ಅವರ ಪ್ರತಿಕ್ರಿಯೆ: 11 ವರ್ಷಗಳ ಪರಿಶ್ರಮದ ಫಲವಾಗಿ ಈ ಸಾಧನೆ ಹೊರ ಬಂದಿದೆ. ಕಲ್ಯಾಣ್ ಪ್ರದೇಶದಲ್ಲಿ ಉತ್ತಮ ಅನುಕೂಲ ಇಲ್ಲದ ಕಾರಣ ಬಾಂದ್ರಾದಲ್ಲಿ ಮಗನಿಗೆ ಕೋಚಿಂಗ್ ಕೊಡಿಸಬೇಕಾಯಿತು. ಮೊದಮೊದಲು ನಾನು ಅವನನ್ನು ಮೈದಾನದ ತನಕ ಬಿಟ್ಟು ಬರುತ್ತಿದ್ದೆ. ನಂತರ ತನ್ನ ಗೆಳೆಯರೊಡನೆ ಹೋಗ ತೊಡಗಿದ. ಆತನ ಕಠಿಣ ಪರಿಶ್ರಮಕ್ಕೆ ಬೆಲೆ ಸಿಕ್ಕಿದೆ ಎಂದಿದ್ದಾರೆ. (ಒನ್ ಇಂಡಿಯಾ ಸುದ್ದಿ)

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ - ನೋಂದಣಿ ಉಚಿತ!

English summary
Pranav Dhanawade batted his way into the record books as he shattered a 116-year-old mark by smashing an unbeaten 652 off 199 balls in a school cricket tournament on Monday (January 4).
Please Wait while comments are loading...