ವಿಶ್ವಕಪ್ ಸ್ಟಾರ್ ಹರ್ಮನ್ ಪ್ರೀತ್ ಗೆ ಉದ್ಯೋಗದಲ್ಲಿ ಬಡ್ತಿ!

Posted By:
Subscribe to Oneindia Kannada

ಲಂಡನ್, ಜುಲೈ 23: ಐಸಿಸಿ ಮಹಿಳಾ ವಿಶ್ವಕಪ್‌ ನ ಸೆಮಿಫೈನಲ್‌ ಪಂದ್ಯದಲ್ಲಿ ಆಸ್ಟ್ರೇಲಿಯಾದ ವಿರುದ್ಧ 115 ಎಸೆತಗಳಲ್ಲಿ ಅಜೇಯ 171ರನ್‌ ಗಳಿಸಿದ ಹರ್ಮನ್ ಪ್ರೀತ್ ಕೌರ್ ಅವರಿಗೆ ಪ್ರಶಂಸೆಗಳ ಸುರಿಮಳೆ ಜತೆಗೆ ಉದ್ಯೋಗದಲ್ಲಿ ಬಡ್ತಿ ಸಿಗುತ್ತಿದೆ.

ಹರ್ಮನ್ ಪ್ರೀತ್ ಕೌರ್ ಅವರಿಗೆ ಈ ಉದ್ಯೋಗ ಸಿಗಲು ಕ್ರಿಕೆಟ್ ದಿಗ್ಗಜ ಸಚಿನ್ ತೆಂಡೂಲ್ಕರ್ ಅವರು ಕೂಡಾ ಕಾರಣ ಎಂಬುದು ವಿಶೇಷ. 28 ವರ್ಷ ವಯಸ್ಸಿನ ಬಲಗೈ ಆಟಗಾರ್ತಿ ಹರ್ಮನ್ ಪ್ರೀತ್ ಅವರು ಸೆಮಿಫೈನಲ್ ನಲ್ಲಿ ಭರ್ಜರಿ ಆಟ ಪ್ರದರ್ಶಿಸಿದ್ದಕ್ಕೆ ಬಡ್ತಿ ಸಿಗುವುದೇ ಎಂಬ ಪ್ರಶ್ನೆಗೆ ರೈಲ್ವೆ ಇಲಾಖೆಯಿಂದ ಹೌದು ಎಂಬ ಉತ್ತರ ಸಿಕ್ಕಿದೆ.

World Cup star Harmanpreet Kaur set to get promotion in Railways

ಪಶ್ಚಿಮ ರೈಲ್ವೆ ಇಲಾಖೆ ವಕ್ತಾರರಾದ ರವೀಂದರ್‌ ಭಾಕರ್‌ ಮಾತನಾಡಿ, ಹರ್ಮನ್‌ ಪ್ರೀತ್‌ ಕೌರ್‌ ಅವರಿಗೆ ರೈಲ್ವೆ ಇಲಾಖೆಯಲ್ಲಿ ಉನ್ನತ ಹುದ್ದೆ ನೀಡಲು ಶಿಫಾರಸು ಮಾಡಲಾಗುವುದು, ಅವರು ಭಾರತಕ್ಕೆ ಬರುತ್ತಿದ್ದಂತೆ ಸನ್ಮಾನ ಕಾರ್ಯಕ್ರಮ ಆಯೋಜನೆ ಮಾಡಲಾಗುವುದು ಎಂದರು.

ಹರ್ಮನ್‌‌ ಕೌರ್‌ ಸದ್ಯಪಶ್ಚಿಮ ರೈಲ್ವೆ ಇಲಾಖೆಯ ಮುಂಬೈ ರೈಲ್ವೆ ವಿಭಾಗದ ಮುಖ್ಯ ಕಚೇರಿಯಲ್ಲಿ ಅಧೀಕ್ಷಕರಾಗಿ ಕೆಲಸ ಮಾಡುತ್ತಿದ್ದಾರೆ. 330 ದಿನಗಳ ವಿಶೇಷ ರಜಾ ದಿನವನ್ನು ವಿಶ್ವಕಪ್ ಗೆ ಆಯ್ಕೆಯಾದ ತಂಡದ ಆಟಗಾರ್ತಿಯರಿಗೆ ನೀಡಲಾಗಿತ್ತು ಎಂದು ಮುಖ್ಯ ವಕ್ತಾರರಾದ ಸುನಿಲ್ ಉದಾಸಿ ಹೇಳಿದರು.

India Beat Australia By 36 Runs In The Second Semi-Final | Oneindia Kannada

ಟೀಂ ಇಂಡಿಯಾ ಮಹಿಳಾ ತಂಡದಲ್ಲಿ ಆಡುತ್ತಿರುವ 15 ಸದಸ್ಯರಲ್ಲಿ 10 ಮಹಿಳೆಯರು ಇಂಡಿಯನ್‌ ರೈಲ್ವೆಯ ವಿವಿಧ ಹುದ್ದೆಗಳಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ - ನೋಂದಣಿ ಉಚಿತ!

English summary
Promotion and felicitations are on the cards for batswoman Harmanpreet Kaur, who hit a scintillating century to help India defeat mighty Australia and enter the final of the ICC Women's World Cup.
Please Wait while comments are loading...